ರಾಯಚೂರು:ಇಬ್ಬರು ಐಪಿಎಲ್ ಕ್ರಿಕೆಟ್ ಬುಕ್ಕಿಗಳನ್ನು ಪೊಲೀಸರು ಬಂಧಿಸಿರುವ ಘಟನೆ ಜಿಲ್ಲೆಯ ದೇವದುರ್ಗದ ಪಟ್ಟಣದಲ್ಲಿ ನಡೆದಿದೆ.
ಐಪಿಎಲ್ ಕ್ರಿಕೆಟ್ ಬೆಟ್ಟಿಂಗ್: ದೇವದುರ್ಗದಲ್ಲಿ ಇಬ್ಬರು ಬುಕ್ಕಿಗಳು ಅಂದರ್ - cricket betting latest news
ದೇವದುರ್ಗ ಪಟ್ಟಣದ ಪಾನ್‌ಶಾಪ್ ವ್ಯಾಪಾರಿ ಶ್ರೀನಿವಾಸ್, ಹೇಮನೂರು ಗ್ರಾಮದ ಕಟಿಂಗ್ ಶಾಪ್ನಲ್ಲಿ ಕೆಲಸ ಮಾಡುವ ರಮೇಶ್ ಐಪಿಎಲ್ ಕ್ರಿಕೆಟ್ ಬುಕ್ಕಿಂಗ್ನಲ್ಲಿ ತೊಡಗಿದ್ರು. ಖಚಿತ ಮಾಹಿತಿ ಮೇರೆಗೆ ದೇವದುರ್ಗ ಠಾಣೆ ಪೊಲೀಸರು ದಾಳಿ ನಡೆಸಿ ಆರೋಪಿಗಳ ಸಹಿತ 5,300 ರೂಪಾಯಿ ನಗದು, ಎರಡು ಮೊಬೈಲ್‌ಗಳನ್ನು ಜಪ್ತಿ ಮಾಡಿದ್ದಾರೆ.
ದೇವದುರ್ಗ ಪಟ್ಟಣದ ಪಾನ್‌ಶಾಪ್ ವ್ಯಾಪಾರಿ ಶ್ರೀನಿವಾಸ್, ಹೇಮನೂರು ಗ್ರಾಮದ ಕಟಿಂಗ್ ಶಾಪ್ನಲ್ಲಿ ಕೆಲಸ ಮಾಡುವ ರಮೇಶ್ ಬಂಧಿತ ಆರೋಪಿಗಳು. ನಿನ್ನೆ ಕೋಲ್ಕತ್ತಾ ನೈಟ್ ರೈಡರ್ಸ್ ಹಾಗೂ ರಾಜಸ್ಥಾನ ರಾಯಲ್ಸ್ ನಡುವೆ ಪಂದ್ಯಾವಳಿ ನಡೆದಿತ್ತು. ಈ ವೇಳೆ ಪಟ್ಟಣದ ಹೊರವಲಯದ ನರಗುಂಡ ಕ್ರಾಸ್ ಬಳಿ ಐಪಿಎಲ್ ಕ್ರಿಕೆಟ್ ಬುಕ್ಕಿಂಗ್ನಲ್ಲಿ ತೊಡಗಿದ್ರು.
ಖಚಿತ ಮಾಹಿತಿ ಮೇರೆಗೆ ದೇವದುರ್ಗ ಠಾಣೆ ಪೊಲೀಸರು ದಾಳಿ ನಡೆಸುವ ಮೂಲಕ ಶ್ರೀನಿವಾಸ್, ರಮೇಶ್ ಅವರನ್ನು ಬಂಧಿಸಿ 5,300 ರೂಪಾಯಿ ನಗದು, ಎರಡು ಮೊಬೈಲ್‌ಗಳನ್ನು ಜಪ್ತಿ ಮಾಡಿದ್ದಾರೆ. ಸದ್ಯ ಈ ಕುರಿತು ದೇವದುರ್ಗ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.