ರಾಯಚೂರು: ಕರ್ತವ್ಯ ಲೋಪವೆಸಗಿದ ಆರೋಪದಡಿ ಯರಗೇರಾ ಸಿಪಿಐ ಅಂಬೆರಾಯ ಎಂ.ಕಮಾನಮನಿಯನ್ನು ಅಮಾನತುಗೊಳಿಸಿ ಬಳ್ಳಾರಿ ಐಜಿಪಿ ನಂಜುಂಡಸ್ವಾಮಿ ಆದೇಶ ಹೊರಡಿಸಿದ್ದಾರೆ.
ರಾಯಚೂರು ತಾಲೂಕಿನ ಯರಗೇರಾ ಸರ್ಕಲ್ ಇನ್ಸ್ಪೆಕ್ಟರ್ ಆಗಿ ಕಾರ್ಯ ನಿರ್ವಹಿಸುತ್ತಿದ್ದ ಅಂಬೆರಾಯ, ಶಕ್ತಿನಗರದ ದರೋಡೆ ಪ್ರಕರಣದ ತನಿಖೆಯಲ್ಲಿ ಕರ್ತವ್ಯ ಲೋಪವೆಸಗಿದ್ದಾರೆ ಎನ್ನಲಾಗಿದೆ.