ರಾಯಚೂರು: ನಗರದ ಹೊರವಲಯದ ಕೃಷಿ ವಿಜ್ಞಾನಗಳ ವಿಶ್ವವಿದ್ಯಾಲಯ ಆವರಣದಲ್ಲಿ ಕೋವಿಡ್ ಆರೈಕೆ ಕೇಂದ್ರವನ್ನು ಪ್ರಾರಂಭಿಸಲಾಗಿದೆ.
ರಾಯಚೂರು ಕೃಷಿ ವಿವಿ ಆವರಣದಲ್ಲಿ ಕೋವಿಡ್ ಆರೈಕೆ ಕೇಂದ್ರ ಆರಂಭ - covid Care Center in University of Agricultural Sciences, Raichur
ರಾಯಚೂರಿನ ಕೃಷಿ ವಿಜ್ಞಾನಗಳ ವಿಶ್ವವಿದ್ಯಾಲಯ ಆವರಣದಲ್ಲಿ ಕೋವಿಡ್ ಆರೈಕೆ ಕೇಂದ್ರ ಆರಂಭಿಸಲಾಗಿದ್ದು, ಕೊರೊನಾ ಅವಶ್ಯಕ ಚಿಕಿತ್ಸೆ ಪಡೆದು ಶೀಘ್ರದಲ್ಲಿ ಸೋಂಕಿನಿಂದ ಗುಣಮುಖರಾಗುವ ವ್ಯವಸ್ಥೆ ಮಾಡಿಕೊಳ್ಳಲಾಗಿದೆ.
ಸೇವಾ ಭಾರತಿ (RSS ಅಂಗ ಸಂಸ್ಥೆ) ಮತ್ತು ಸ್ವಾಮಿ ವಿವೇಕಾನಂದ ಸಮಗ್ರ ಆರೋಗ್ಯ ಕೇಂದ್ರ ಮತ್ತು ಕೃಷಿ ವಿಶ್ವವಿದ್ಯಾಲಯ, ರಾಯಚೂರು, ಸಹಯೋಗದಲ್ಲಿ ಆರೈಕೆ ಮತ್ತು ಐಸೊಲೇಷನ್ ಕೇಂದ್ರ (Isolation Centre)ವನ್ನು ತೆರೆಯಲಾಗಿದೆ. ಕೋವಿಡ್ ಪಾಸಿಟಿವ್ ಬಂದಿರುವ ಹೋಂ ಐಸೋಲೇಶ್ನ್ಗೆ ಸೂಚಿಸಿರುವ ಯಾವುದೇ ವ್ಯಕ್ತಿಯು ಇಲ್ಲಿರಬಹುದು. ಕೋವಿಡ್ ಕೇರ್ ಸೆಂಟರ್ನಲ್ಲಿ 120 ಹಾಸಿಗೆಯುಳ್ಳ ಬೆಡ್, 24x7 ನರ್ಸಿಂಗ್ ವ್ಯವಸ್ಥೆ ಮಾಡಲಾಗಿದೆ. ರೋಗಿಗಳಿಗೆ ನಿತ್ಯ ನಿರಂತರ ಭೇಟಿ ನೀಡಿ ಉಪಚರಿಸುವ ಅನುಭವಿ ವೈದ್ಯರ ತಂಡ ಚಿಕಿತ್ಸೆ ನೀಡುವ ವ್ಯವಸ್ಥೆ ಮಾಡಿಕೊಳ್ಳಲಾಗಿದೆ.
ಚಿಕಿತ್ಸೆಗೆ ದಾಖಲಾದವರಿಗೆ ಶುದ್ಧ ಪೌಷ್ಠಿಕ ಆಹಾರ ಮತ್ತು ಪಾನೀಯಗಳು, ಶರೀರ ಮತ್ತು ಮನಸ್ಸಿಗೆ ಶಕ್ತಿ ನೀಡುವ ಯೋಗ, ಪ್ರಾಣಾಯಾಮ ಮತ್ತು ಧ್ಯಾನದ ಜೊತೆಗೆ ಮನರಂಜನಾ ಕಾರ್ಯಕ್ರಮಗಳು ನೀಡುವುದು. ಜ್ಞಾನ ವೃದ್ಧಿಗೆ ಸಹಾಯಕವಾಗುವ, ಬದುಕಲು ಪ್ರೇರಣೆ ನೀಡುವ ಪುಸ್ತಕಗಳ ವ್ಯವಸ್ಥೆ ಕಲ್ಪಿಸುವುದರ ಜತೆಯಲ್ಲಿ ಕೌಟುಂಬಿಕ ವಾತಾವರಣ ಮತ್ತು ಉತ್ತಮ ಪರಿಸರದಲ್ಲಿರುವ ಈ ಕೇಂದ್ರದಲ್ಲಿ ಅವಶ್ಯಕ ಚಿಕಿತ್ಸೆ ಪಡೆದು ಶೀಘ್ರದಲ್ಲಿ ಸೋಂಕಿನಿಂದ ಗುಣಮುಖರಾಗುವ ವ್ಯವಸ್ಥೆ ಮಾಡಿಕೊಳ್ಳಲಾಗಿದೆ.