ಕರ್ನಾಟಕ

karnataka

ETV Bharat / state

ಲಾರಿ ಪಲ್ಟಿ: ಭತ್ತದ ಚೀಲಗಳು ಬಿದ್ದು ದಂಪತಿ ಸಾವು - raichuru

ಲಾರಿಯೊಂದು ಭತ್ತವನ್ನ ಕೊಂಡುಯ್ಯುತ್ತಿರುವ ವೇಳೆ ರಸ್ತೆ ಪಕ್ಕದಲ್ಲಿನ ಬಸ್ ಸ್ಟಾಂಡ್​​ಗೆ ‌ಡಿಕ್ಕಿ ಹೊಡೆದು ಪಲ್ಟಿಯಾಗಿದೆ.

raichuru
ಭತ್ತದ ಲಾರಿ ಪಲ್ಟಿ

By

Published : Dec 19, 2019, 9:29 AM IST

Updated : Dec 19, 2019, 12:23 PM IST

ರಾಯಚೂರು:ಭತ್ತ ಹೊತ್ತುಯ್ಯುತ್ತಿದ್ದ ಲಾರಿ ಪಲ್ಟಿಯಾಗಿ ಗುಡಿಸಲಿನಲ್ಲಿದ್ದ ರಾಜಪ್ಪ (38), ಜ್ಯೋತಿ (33) ಎಂಬ ದಂಪತಿ ಸ್ಥಳದಲ್ಲೇ ಮೃತಪಟ್ಟಿರುವ ಘಟನೆ ರಾಯಚೂರು ಜಿಲ್ಲೆಯಲ್ಲಿ ನಡೆದಿದೆ.

ಭತ್ತದ ಲಾರಿ ಪಲ್ಟಿ

ಜಿಲ್ಲೆಯ ಸಿಂಧನೂರು ತಾಲೂಕಿನ ಭೂತಲ್‌ದಿನ್ನಿ ಕ್ರಾಸ್ ಬಳಿ ಈ ದುರ್ಘಟನೆ ಸಂಭವಿಸಿದೆ. ಲಾರಿಯೊಂದು ಭತ್ತವನ್ನ ಕೊಂಡುಯ್ಯುತ್ತಿರುವ ವೇಳೆ ರಸ್ತೆ ಪಕ್ಕದಲ್ಲಿನ ಬಸ್ ಸ್ಟಾಂಡ್​​ಗೆ ‌ಡಿಕ್ಕಿ ಹೊಡೆದು ಪಲ್ಟಿಯಾಗಿದೆ. ಇದರ ಪರಿಣಾಮ ಲಾರಿಯಲ್ಲಿದ ಭತ್ತದ ಚೀಲಗಳು ಬಸ್ ನಿಲ್ದಾಣ ಪಕ್ಕದಲ್ಲಿದ ಗುಡಿಸಲಿ ಮೇಲೆ ಬಿದಿವೆ. ಆಗ ಗುಡಿಸಲಿನಲ್ಲಿದ್ದ ಇಬ್ಬರು ಸ್ಥಳದಲ್ಲೇ ಮೃತಪಟ್ಟಿದ್ದಾರೆ.

ಭತ್ತದ ಸೀಜನ್ ಇರುವುದರಿಂದ ಗುಂಟೂರು ಮೂಲದ ದಂಪತಿ ತಾಡಪತ್ರಿ ಮಾರಾಟ ಮಾಡಲು ಬಂದವರು ಬಸ್ ನಿಲ್ದಾಣದಲ್ಲಿ ಮಲಗಿದ್ದರು. ಲಾರಿ ಮೊದಲಿಗೆ ಬಸ್ ಸ್ಟಾಂಡ್​​ಗೆ ‌ಡಿಕ್ಕಿ ಹೊಡೆದು ಪಲ್ಟಿಯಾಗಿದೆ. ಈ ಸಂದರ್ಭದಲ್ಲಿ ಭತ್ತದ ಚೀಲಗಳ ಮಧ್ಯೆ ಸಿಲುಕಿದ್ದ ತಾಡಪತ್ರಿ ತಯಾರಕರಾದ ಗೋಪಿ ಮತ್ತು ದೇವಿಕಾ ಎಂಬುವವರನ್ನು ಜಿಸಿಬಿ ಸಹಾಯದಿಂದ ಪೊಲೀಸರು ರಕ್ಷಣೆ ಮಾಡಿದ್ದಾರೆ. ಬೆಳಗಿನ ಜಾವ 4.30ರ ಸುಮಾರಿಗೆ ಈ ಘಟನೆ ನಡೆದಿದೆ.

Last Updated : Dec 19, 2019, 12:23 PM IST

ABOUT THE AUTHOR

...view details