ರಾಯಚೂರು: ಕೊರೊನಾ ಸೋಂಕಿತ ವ್ಯಕ್ತಿ ಮೃತಪಟ್ಟ ಬಳಿಕ ಕೋವಿಡ್ ನಿಯಮಗಳನ್ನ ಅನುಸರಿಸಿ ಮೃತದೇಹವನ್ನ ಹಸ್ತಾಂತರಿಸಬೇಕು. ಆದರೆ ನಗರದ ಓಪೆಕ್ ಆಸ್ಪತ್ರೆಯಲ್ಲಿ ನಿಯಮಗಳ ಪಾಲನೆಯಾಗುತ್ತಿಲ್ಲ ಎನ್ನುವ ಆರೋಪ ಕೇಳಿ ಬಂದಿದೆ.
ಹಾಸಿಗೆಯಲ್ಲಿ ಸೋಂಕಿತರ ಶವ ಹಸ್ತಾಂತರ: ಆಸ್ಪತ್ರೆ ವಿರುದ್ಧ ಸಂಬಂಧಿಕರ ಆಕ್ರೋಶ - ಹಾಸಿಗೆಯಲ್ಲಿ ಸೋಂಕಿತನ ಶವ ಹಸ್ತಾಂತರ
ರಾಯಚೂರಿನ ಒಪೆಕ್ ಆಸ್ಪತ್ರೆಯಲ್ಲಿ ಸೋಂಕಿತರು ತಂದಿದ್ದ ಹಾಸಿಗೆಯಲ್ಲಿ ಮೃತದೇಹವನ್ನ ಹಾಕಿ ಕಳುಹಿಸಲಾಗುತ್ತಿದೆ ಎನ್ನುವ ಆರೋಪ ಕೇಳಿಬಂದಿದೆ.
ಸೋಂಕಿತ ವ್ಯಕ್ತಿ ಮೃತಪಟ್ಟಾಗ ಶವವನ್ನ ಸೋಂಕು ನಿರೋಧಕ ಚೀಲಗಳಲ್ಲಿ ಹಾಕಿ, ಹಸ್ತಾಂತರಿಸುವರು ಎನ್-95 ಮಾಸ್ಕ್, ಹ್ಯಾಂಡ್ ಗ್ಲೌಸ್ ಹಾಕಿಕೊಂಡು, ಬಳಿಕ ಸೋರಿಕೆ ನಿರೋಧಕ ಪ್ಲಾಸ್ಟಿಕ್ ಚೀಲದಲ್ಲಿ ಹಸ್ತಾಂತರಿಸಬೇಕು ಎನ್ನುವ ನಿಯಮವಿದೆ. ಆದರೆ ಒಪೆಕ್ ಆಸ್ಪತ್ರೆಯಲ್ಲಿ ಸೋಂಕಿತರು ತಂದಿದ್ದ ಹಾಸಿಗೆಯಲ್ಲಿ ಮೃತದೇಹವನ್ನ ಹಾಕಿ ಕಳುಹಿಸಲಾಗುತ್ತಿದೆ ಎನ್ನುವ ಆರೋಪ ಕೇಳಿಬಂದಿದೆ.
ಒಪೆಕ್ ಆಸ್ಪತ್ರೆಯಲ್ಲಿ ವೆಂಟಿಲೇಟರ್ ಸಮಸ್ಯೆಯಿದೆ. ರೋಗಿಗಳು ಬಂದಾಗ ಸರಿಯಾಗಿ ಚಿಕಿತ್ಸೆ ನೀಡುತ್ತಿಲ್ಲ. ವೈದ್ಯರು ಬಂದು ರೋಗಿಗಳನ್ನ ತಪಾಸಣೆ ಮಾಡುತ್ತಿಲ್ಲ, ಬದಲಿಗೆ ನರ್ಸ್ಗಳೇ ಚಿಕಿತ್ಸೆ ನೀಡುತ್ತಿದ್ದಾರೆ. ರೋಗಿಗೆ ಸಮಸ್ಯೆ ಉಲ್ಬಣವಾದರೆ ಮಾತ್ರ ವೈದ್ಯರು ಬರುತ್ತಾರೆ. ಆದರೆ ಸರಿಯಾಗಿ ಚಿಕಿತ್ಸೆ ನೀಡುತ್ತಿಲ್ಲ ಎಂದು ಸೋಂಕಿತರ ಸಂಬಂಧಿಕರು ಆರೋಪಿಸಿದ್ದಾರೆ.