ಕರ್ನಾಟಕ

karnataka

ETV Bharat / state

ರಾಯಚೂರಿನಲ್ಲಿ ಗರ್ಭಿಣಿ ಸೇರಿ 10 ಜನರಿಗೆ ಕೊರೊನಾ ದೃಢ - coronavirus news Raichuru

ರಾಯಚೂರು ಜಿಲ್ಲೆಯಲ್ಲಿ ಸೋಂಕಿತರ ಸಂಖ್ಯೆ 569ಕ್ಕೆ ಏರಿಕೆಯಾಗಿದೆ. ಕೋವಿಡ್-19 ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ 65 ವರ್ಷದ ಸೋಂಕಿತ ವ್ಯಕ್ತಿ ಮೃತಪಟ್ಟಿದ್ದು, ಆತನ ಸಾವಿಗೆ ಕೊರೊನಾ ಕಾರಣವೇ ಅಲ್ಲವೇ ಎನ್ನುವುದು ದೃಢಪಡಬೇಕಾಗಿದೆ.

ರಾಯಚೂರಿನಲ್ಲಿ ಗರ್ಭಿಣಿ ಸೇರಿ 10 ಜನರಿಗೆ ಕೊರೊನಾ ದೃಢ
ರಾಯಚೂರಿನಲ್ಲಿ ಗರ್ಭಿಣಿ ಸೇರಿ 10 ಜನರಿಗೆ ಕೊರೊನಾ ದೃಢ

By

Published : Jul 5, 2020, 10:59 PM IST

ರಾಯಚೂರು: ರಾಯಚೂರು ಜಿಲ್ಲೆಯಲ್ಲಿ ಇಂದು ಲಿಂಗಸುಗೂರು ತಾಲ್ಲೂಕಿನಲ್ಲಿ ಗರ್ಭಿಣಿ ಹಾಗೂ ಹಟ್ಟಿ ಚಿನ್ನದ ಗಣಿ ಓರ್ವ ಕಾರ್ಮಿಕ ಸೇರಿ 10 ಜನರಿಗೆ ಕೊರೊನಾ ಸೋಂಕು ದೃಢಪಟ್ಟಿದೆ. ಇದರಿಂದ ಜಿಲ್ಲೆಯಲ್ಲಿ ಸೋಂಕಿತರ ಸಂಖ್ಯೆ 569ಕ್ಕೆ ಏರಿಕೆಯಾಗಿದೆ. ಕೋವಿಡ್-19 ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ 65 ವರ್ಷದ ಸೋಂಕಿತ ವ್ಯಕ್ತಿ ಮೃತಪಟ್ಟಿದ್ದು, ಆತನ ಸಾವಿಗೆ ಕೊರೊನಾ ಕಾರಣವೇ ಅಲ್ಲವೇ ಎನ್ನುವುದು ದೃಢಪಡಬೇಕಾಗಿದೆ.

ರಾಯಚೂರಿನಲ್ಲಿ ಗರ್ಭಿಣಿ ಸೇರಿ 10 ಜನರಿಗೆ ಕೊರೊನಾ ದೃಢ

ತಾಲ್ಲೂಕಿನ ಮ್ಯಾದರಹಾಳ ತಾಂಡಾದ ತುಂಬು ಗರ್ಭಿಣಿ ಚಿಕಿತ್ಸೆಗೆ ಹೋದಾಗ ಗಂಟಲುದ್ರವ ಪರೀಕ್ಷೆ ನಡೆಸಿದ್ದು ಕೋವಿಡ್ ದೃಢಪಟ್ಟಿದೆ. ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದಿದ್ದು ಅವಳ ಟ್ರಾವೆಲಿಂಗ್ ಹಿಸ್ಟರಿ ಗೊಂದಲದಲ್ಲಿದೆ ಎಂದು ಹೇಳಲಾಗುತ್ತಿದೆ.

ಸೋಂಕಿತರಲ್ಲಿ ಲಿಂಗಸುಗೂರಿನಲ್ಲಿ 5, ರಾಯಚೂರು ತಾಲೂಕಿನಲ್ಲಿ 3 ಹಾಗೂ ಮಾನವಿ, ಸಿಂಧನೂರಿನಲ್ಲಿ ತಲಾ ಒಂದು ಪ್ರಕರಣಗಳು ಪತ್ತೆಯಾಗಿವೆ. 299 ಜನರ ವರದಿ ನೆಗೆಟಿವ್ ಬಂದಿದ್ದು, ಪ್ರಯೋಗಾಲಯದಿಂದ ಇನ್ನೂ 1,706 ಜನರ ವರದಿ ಬರುವುದು ಬಾಕಿಯಿದೆ. ಜಿಲ್ಲೆಯಲ್ಲಿ 141 ಕೊರೊನಾ ಸಕ್ರಿಯ ಪ್ರಕರಣಗಳಿದ್ದು, ಸೋಂಕಿತರ ಪೈಕಿ ಒಪೆಕ್ ಆಸ್ಪತ್ರೆಯ ಐಸೊಲೇಷನ್ ವಾರ್ಡ್‌ನಲ್ಲಿ 110, ಕ್ವಾರಂಟೈನ್‌ನಲ್ಲಿ 31 ಜನರಿದ್ದಾರೆ. ಈವರೆಗೆ 422 ಜನ ಸೋಂಕಿನಿಂದ ಗುಣಮುಖ ಹೊಂದಿದ್ದಾರೆ ಎಂದು ಜಿಲ್ಲಾಡಳಿತ ಪ್ರಕಟಣೆಯಲ್ಲಿ ತಿಳಿಸಿದೆ.

ABOUT THE AUTHOR

...view details