ಕರ್ನಾಟಕ

karnataka

ETV Bharat / state

ರಾಯರ ಮಠದಲ್ಲಿ ಗುರು ವೈಭೋತ್ಸವ ಸಂಭ್ರಮ - ರಾಯಚೂರು ಸುದ್ದಿ

ತುಂಗಾ ತೀರದಲ್ಲಿ ನೆಲೆಸಿರುವ ಮಂತ್ರಾಲಯದ ಶ್ರೀರಾಘವೇಂದ್ರ ಸ್ವಾಮೀಜಿ ಪೀಠ ಅಲಂಕರಿಸಿದ್ದ ದಿನದ ನಿಮಿತ್ತ ಏಳು ದಿನಗಳ ಕಾಲ ಗುರು ವೈಭವೋತ್ಸವ ಹಾಗೂ ವರ್ಧಂತೋತ್ಸವವು ಮಂತ್ರಾಲಯದಲ್ಲಿ ಅದ್ಧೂರಿಯಾಗಿ ಜರುಗುತ್ತಿದೆ.

coronation-of-sri-raghavendra-swamy-at-mantralaya
coronation-of-sri-raghavendra-swamy-at-mantralaya

By

Published : Feb 25, 2020, 9:31 PM IST

ರಾಯಚೂರು: ತುಂಗಾ ತೀರದಲ್ಲಿ ನೆಲೆಸಿರುವ ಮಂತ್ರಾಲಯದ ಶ್ರೀರಾಘವೇಂದ್ರ ಸ್ವಾಮೀಜಿಯ ಪೀಠ ಅಲಂಕರಿಸಿದ್ದ ದಿನದ ನಿಮಿತ್ತ ಗುರು ವೈಭವೋತ್ಸವ ವರ್ಧಂತೋತ್ಸವವು ಮಂತ್ರಾಲಯದ ಮಠದಲ್ಲಿ ಅದ್ಧೂರಿಯಾಗಿ ಜರುಗುತ್ತಿದೆ.

ರಾಯರ ಮಠದಲ್ಲಿ ಗುರು ವೈಭವೋತ್ಸವ ಸಂಭ್ರಮ

ಶ್ರೀಗುರು ರಾಯರು ಗುರುರಾಜರಿಂದ ಪೀಠ ಅಲಂಕರಿಸಿ ಇಂದಿಗೆ 399ನೇ ವರ್ಷ ಹಾಗೂ ಮಾರ್ಚ್​ 2ರಂದು ಅವರ 425ನೇ ವರ್ಧಂತೋತ್ಸವ ನಡೆಯಲಿದೆ. ಈ ಹಿನ್ನೆಲೆಯಲ್ಲಿ ರಾಘವೇಂದ್ರ ಮಠದಲ್ಲಿ ಏಳು ದಿನಗಳ ಸಪ್ತ ಗುರು ವೈಭವೋತ್ಸವ ಎಂಬ ಕಾರ್ಯಕ್ರಮ ಆಯೋಜಿಸಲಾಗಿದೆ. ಏಳು ದಿನಗಳ ಕಾಲ ಮೂಲ ರಾಮದೇವರಿಗೆ ಅಭಿಷೇಕ, ರಾಯರ ಪಾದುಕೆಗಳಿಗೆ ಪಟ್ಟಾಭಿಷೇಕ ಕಾರ್ಯಕ್ರಮ ನಡೆಯಲಿದೆ.

ಈ ಸಂದರ್ಭದಲ್ಲಿ ಧಾರ್ಮಿಕ, ಸಾಂಸ್ಕೃತಿಕ ಹಾಗೂ ಗಣ್ಯರಿಗೆ ಸನ್ಮಾನ ಕಾರ್ಯಕ್ರಮ ಜರುಗುತ್ತಿದ್ದು, ದೇಶದ ವಿವಿಧ ಭಾಗಗಳಿಂದ ಸಾವಿರಾರು ಭಕ್ತರು ಆಗಮಿಸಲಿದ್ದಾರೆ.

ABOUT THE AUTHOR

...view details