ಕರ್ನಾಟಕ

karnataka

ETV Bharat / state

ರಾಯಚೂರಲ್ಲಿ 114 ಮಂದಿ ಕೊರೊನಾ ಶಂಕಿತರ ಗಂಟಲು ದ್ರವ ಪರೀಕ್ಷೆಗೆ ರವಾನೆ

ರಾಯಚೂರು ಜಿಲ್ಲೆಯ 114 ಮಂದಿ ಕೊರೊನಾ ಶಂಕಿತರ ಗಂಟಲು ದ್ರವದ ಮಾದರಿಗಳನ್ನು ಪರೀಕ್ಷೆಗಾಗಿ ಪ್ರಯೋಗಾಲಯಕ್ಕೆ ಇಂದು ಕಳುಹಿಸಲಾಯಿತು. ಇದುವರೆಗೂ 1478 ಜನರ ಗಂಟಲು ದ್ರವದ ಮಾದರಿಗಳನ್ನು ಪರೀಕ್ಷೆಗೆ ಕಳುಹಿಸಲಾಗಿದೆ.

corona virus suspected tests in raichuru
114 ಶಂಕಿತರ ಗಂಟಲು ದ್ರವ ಪರೀಕ್ಷೆಗೆ ರವಾನೆ

By

Published : May 2, 2020, 7:03 PM IST

ರಾಯಚೂರು: ಜಿಲ್ಲೆಯ 114 ಮಂದಿ ಕೊರೊನಾ ಶಂಕಿತರ ಗಂಟಲು ದ್ರವದ ಮಾದರಿಯನ್ನು ಇಂದು ಪ್ರಯೋಗಾಲಯಕ್ಕೆ ರವಾನಿಸಲಾಗಿದೆ ಎಂದು ಜಿಲ್ಲಾಡಳಿತ ಪ್ರಕಟಣೆಯಲ್ಲಿ ತಿಳಿಸಿದೆ.

114 ಮಂದಿ ಕೊರೊನಾ ಶಂಕಿತರ ಗಂಟಲು ದ್ರವ ಪರೀಕ್ಷೆಗೆ ರವಾನೆ

ಇದುವರೆಗೂ ಜಿಲ್ಲೆಯ 1,478 ಮಂದಿಯ ಗಂಟಲು ದ್ರವ ಮಾದರಿಗಳನ್ನು ಪರೀಕ್ಷೆಗೆ ಕಳುಹಿಸಲಾಗಿದೆ. ಅದರಲ್ಲಿ‌ 1,131 ವರದಿಗಳು ನೆಗೆಟಿವ್ ಬಂದಿವೆ. 347 ಮಾದರಿಗಳ ಫಲಿತಾಂಶ ಬಾಕಿ ಇದೆ.

ಇಂದು ಆಸ್ಪತ್ರೆಗೆ ಒಬ್ಬ ಶಂಕಿತನನ್ನು ದಾಖಲಿಸಲಾಗಿದೆ. ಇನ್ನು ಫೀವರ್ ಕ್ಲಿನಿಕ್‍ಗಳಲ್ಲಿ 386 ಜನರನ್ನು ಥರ್ಮಲ್ ಸ್ಕ್ರೀನಿಂಗ್‍ಗೆ ಒಳಪಡಿಸಲಾಗಿದೆ. ‌ಸರ್ಕಾರಿ ಕ್ವಾರಂಟೈನ್‍ಗಳಲ್ಲಿ 63 ಶಂಕಿತರನ್ನು ನಿಗಾದಲ್ಲಿ ಇರಿಸಲಾಗಿದೆ. ಜಿಲ್ಲೆಯಲ್ಲಿ ಇಂದು ಯಾವುದೇ ಪಾಟಿಸಿವ್ ಪ್ರಕರಣ ಪತ್ತೆಯಾಗಿಲ್ಲ ಎಂದು ಜಿಲ್ಲಾಡಳಿತ ಪ್ರಕಟಣೆಯಲ್ಲಿ ತಿಳಿಸಿದೆ.

ABOUT THE AUTHOR

...view details