ರಾಯಚೂರು: ಜಿಲ್ಲೆಯಲ್ಲಿ ಕೊರೊನಾ ಸೋಂಕಿತರ ಸಂಖ್ಯೆ ಏರಿಕೆಯಾಗುತ್ತಲೇ ಸಾಗಿದ್ದು, ಇಂದು ಸಹ 155 ನೂತನ ಕೊರೊನಾ ಪ್ರಕರಣಗಳು ಪತ್ತೆಯಾಗಿವೆ. ಮೂರು ಮಂದಿ ಕೊರೊನಾಗೆ ಬಲಿಯಾಗಿದ್ದಾರೆ.
ರಾಯಚೂರು: ಇಂದು 155 ಸೋಂಕಿತರು ಪತ್ತೆ, ಮೂವರು ಮೃತ - Corona in Raichuru
ರಾಯಚೂರು ಜಿಲ್ಲೆಯಾದ್ಯಂತ ಪ್ರತಿನಿತ್ಯ ಕೊರೊನಾ ಪಾಸಿಟಿವ್ ಕೇಸ್ಗಳು ದಾಖಲಾಗುತ್ತಿದ್ದು, ಇಂದು ನೂತನವಾಗಿ 155 ಪಾಸಿಟಿವ್ ಕೇಸ್ಗಳು ಪತ್ತೆಯಾಗಿವೆ.
![ರಾಯಚೂರು: ಇಂದು 155 ಸೋಂಕಿತರು ಪತ್ತೆ, ಮೂವರು ಮೃತ Corona Spikes in Raichuru](https://etvbharatimages.akamaized.net/etvbharat/prod-images/768-512-8433817-441-8433817-1597506228502.jpg)
ರಾಯಚೂರಿನಲ್ಲಿ ಏರಿಕೆ ಕಂಡ ಕೊರೊನಾ
ಜಿಲ್ಲೆಯಲ್ಲಿ ಕೊರೊನಾ ಸೋಂಕಿತರ ಸಂಖ್ಯೆ 4900ಕ್ಕೆ ತಲುಪಿದ್ದು, ಈವರೆಗೆ ಪತ್ತೆಯಾಗಿರುವ ಸೋಂಕಿತರಲ್ಲಿ 3064 ಮಂದಿ ಗುಣಮುಖರಾಗಿ ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದಾರೆ. 1783 ಸಕ್ರಿಯ ಪ್ರಕರಣಗಳಿದ್ದು, 54 ಮಂದಿ ಕೊರೊನಾದಿಂದ ಮೃತಪಟ್ಟಿದ್ದಾರೆ.
ಸೋಂಕಿತರನ್ನ ರೋಗದ ಗುಣಲಕ್ಷಣದ ಆಧಾರದ ಮೇಲೆ ಕೋವಿಡ್ ಕೇರ್ ಹಾಗೂ ರಿಮ್ಸ್ ಆಸ್ಪತ್ರೆಗೆ ಚಿಕಿತ್ಸೆಗೆ ದಾಖಲಿಸಲಾಗಿದ್ದು, ಸೋಂಕಿತರ ಸಂಪರ್ಕ ಪತ್ತೆ ಹಚ್ಚುವ ಕಾರ್ಯ ನಡೆದಿದೆ ಎಂದು ಜಿಲ್ಲಾಡಳಿತ ಪ್ರಕಟಣೆಯಲ್ಲಿ ತಿಳಿಸಿದೆ.