ಕರ್ನಾಟಕ

karnataka

ETV Bharat / state

ಹಟ್ಟಿ ಚಿನ್ನದ ಗಣಿ ಕಂಪನಿಯ ಸೆಕ್ಯೂರಿಟಿಗೆ ಕೊರೊನಾ ಪಾಸಿಟಿವ್​ - ರಾಯಚೂರು ಕೊರೊನಾ ಕೇಸ್​

ಜೂನ್​ 3ರಂದು ಸಂಬಂಧಿಕರೊಬ್ಬರಿಗೆ ಚಿಕಿತ್ಸೆ ಕೊಡಿಸಲೆಂದು ಆಸ್ಪತ್ರೆಗೆ ತೆರಳಿದ್ದಾಗ, ತಾನು ಸಹ ಗಂಟಲು ದ್ರವದ ಪರೀಕ್ಷೆ ಮಾಡಿಸಿಕೊಂಡಿದ್ದರು.

Corona Positive to the security of Hattie Gold Mines Company ..!
ರಾಯಚೂರು: ಹಟ್ಟಿ ಚಿನ್ನದ ಗಣಿ ಕಂಪನಿಯ ಸೆಕ್ಯೂರಿಟಿಗೆ ಕೊರೊನಾ ಪಾಸಿಟಿವ್​..!

By

Published : Jun 15, 2020, 10:57 PM IST

ರಾಯಚೂರು :ದೇಶದ ಏಕೈಕ ಬಂಗಾರ ಉತ್ಪಾದಿಸುವ ಲಿಂಗಸುಗೂರು ತಾಲೂಕಿನ ಹಟ್ಟಿ ಚಿನ್ನದ ಗಣಿಯ ಸೆಕ್ಯೂರಿಟಿಯೊಬ್ಬರಿಗೆ ಕೊರೊನಾ ಸೋಂಕು ತಗುಲಿದೆ.

ಜೂನ್​ 3ರಂದು ಸಂಬಂಧಿಕರೊಬ್ಬರಿಗೆ ಚಿಕಿತ್ಸೆ ಕೊಡಿಸಲೆಂದು ಆಸ್ಪತ್ರೆಗೆ ತೆರಳಿದ್ದಾಗ, ತಾನು ಸಹ ಗಂಟಲು ದ್ರವದ ಪರೀಕ್ಷೆ ಮಾಡಿಸಿಕೊಂಡಿದ್ದರು. ಬಳಿಕ ಎಂದಿನಂತೆ ತಮ್ಮ ಕರ್ತವ್ಯಕ್ಕೆ ಹಾಜರಾಗಿದ್ದರು. ಇಂದು ಅವರ ಪರೀಕ್ಷಾ ವರದಿ ಬಂದಿದೆ. ಕೊರೊನಾ ಸೋಂಕಿರುವುದು ದೃಢಪಟ್ಟಿದೆ. ಹೀಗಾಗಿ ಹಟ್ಟಿ ಕಂಪನಿ ಅಧಿಕಾರಿಗಳು ಮತ್ತು ಕಾರ್ಮಿಕರು ಆತಂಕ್ಕೀಡಾಗಿದ್ದಾರೆ.

ಸೋಂಕಿತನ ಟ್ರಾವೆಲ್​ ಹಿಸ್ಟರಿ ಆಧರಿಸಿ ಸೀಲ್​ಡೌನ್​ ಬಗ್ಗೆ ಚರ್ಚಿಸಲಾಗುವುದು ಎಂದು ಜಿಲ್ಲಾಡಳಿತ ಮಾಹಿತಿ ನೀಡಿದೆ.

ABOUT THE AUTHOR

...view details