ಕರ್ನಾಟಕ

karnataka

ETV Bharat / state

ವಸತಿ ನಿಲಯದಲ್ಲಿದ್ದ ವಿದ್ಯಾರ್ಥಿಗೆ ಕೊರೊನಾ; 50 ವಿದ್ಯಾರ್ಥಿಗಳ ಮಾದರಿ ಪರೀಕ್ಷೆಗೆ ರವಾನೆ - ಡಾ.ಬಿ.ಆರ್ ಅಂಬೇಡ್ಕರ್ ಮೆಟ್ರಿಕ್ ಪೂರ್ವ ವಸತಿ ನಿಲಯದ ವಿದ್ಯಾರ್ಥಿ

ಜಿಲ್ಲೆಯ ಲಿಂಗಸುಗೂರು ತಾಲೂಕಿನ ಹಟ್ಟಿ ಚಿನ್ನದಗಣಿ ಪಟ್ಟಣದಲ್ಲಿರುವ ಡಾ.ಬಿ.ಆರ್ ಅಂಬೇಡ್ಕರ್ ಹಾಸ್ಟೆಲ್​ನಲ್ಲಿದ್ದ 9ನೇ ತರಗತಿ ವಿದ್ಯಾರ್ಥಿಯೊಬ್ಬನಿಗೆ ಕೊರೊನಾ ದೃಢವಾಗಿತ್ತು.

Corona Positive for Residence Student in Raichur
ವಸತಿ ನಿಲಯದಲ್ಲಿದ್ದ ವಿದ್ಯಾರ್ಥಿಗೆ ಕೊರೊನಾ ಪಾಸಿಟಿವ್

By

Published : Mar 19, 2021, 3:29 PM IST

ರಾಯಚೂರು: ಡಾ.ಬಿ.ಆರ್ ಅಂಬೇಡ್ಕರ್ ಮೆಟ್ರಿಕ್ ಪೂರ್ವ ವಸತಿ ನಿಲಯದ ವಿದ್ಯಾರ್ಥಿಗೆ ಕೊರೊನಾ ದೃಢಪಟ್ಟಿದೆ. ಜಿಲ್ಲೆಯ ಲಿಂಗಸುಗೂರು ತಾಲೂಕಿನ ಹಟ್ಟಿ ಚಿನ್ನದಗಣಿ ಪಟ್ಟಣದಲ್ಲಿರುವ ಡಾ.ಬಿ.ಆರ್ ಅಂಬೇಡ್ಕರ್ ಹಾಸ್ಟೆಲ್​ನಲ್ಲಿದ್ದ ವಿದ್ಯಾರ್ಥಿಯೊಬ್ಬನಿಗೆ ಕೊರೊನಾ ದೃಢವಾಗಿದ್ದು, 50 ವಿದ್ಯಾರ್ಥಿಗಳ ಮಾದರಿಯನ್ನು ಪರೀಕ್ಷೆಗಾಗಿ ಕಳುಹಿಸಲಾಗಿದೆ.

ಇತ್ತ ಕೊರೊನಾ ಖಚಿತಪಟ್ಟ ವಿದ್ಯಾರ್ಥಿಯನ್ನು ಹೋಮ್ ಐಸೋಲೇಶನ್ ಮಾಡಲಾಗಿದ್ದು, ಪರೀಕ್ಷೆಗೆ ಕಳುಹಿಸಲಾಗದ ಮಾದರಿಯ ಫಲಿತಾಂಶಕ್ಕಾಗಿ ಅಧಿಕಾರಿಗಳು ಕಾಯುತ್ತಿದ್ದಾರೆ.

ಇದನ್ನೂ ಓದಿ:ನಂಜುಂಡೇಶ್ವರನ ಜಾತ್ರೆಗೆ ಅವಕಾಶ ನೀಡುವಂತೆ ಸಚಿವರಿಗೆ ಭಕ್ತರಿಂದ ಮನವಿ

ABOUT THE AUTHOR

...view details