ಕರ್ನಾಟಕ

karnataka

ETV Bharat / state

ರಾಯಚೂರನಲ್ಲಿಂದು 118 ಮಂದಿಗೆ ಕೊರೊನಾ: ಈವರೆಗೆ 1,400 ಮಂದಿ ಗುಣಮುಖ - Raichur Corona Case

ರಾಯಚೂರು ಜಿಲ್ಲೆಯಲ್ಲಿಂದು 118 ಜನರಿಗೆ ಕೊರೊನಾ ಸೋಂಕು ದೃಢಪಟ್ಟಿದ್ದು, ಇಬ್ಬರು ಬಲಿಯಾಗಿದ್ದಾರೆ.

Corona positive for 118 people in Raichur district
ರಾಯಚೂರು ಜಿಲ್ಲೆಯಲ್ಲಿಂದು 118 ಜನರಿಗೆ ಕೊರೊನಾ..ಇಬ್ಬರು ಸಾವು

By

Published : Jul 31, 2020, 8:55 PM IST

ರಾಯಚೂರು: ಜಿಲ್ಲೆಯಲ್ಲಿಂದು 118 ಜನರಿಗೆ ಕೊರೊನಾ ಸೋಂಕು ದೃಢಪಟ್ಟಿದ್ದು, ಸೋಂಕಿತರ ಸಂಖ್ಯೆ 2,272ಕ್ಕೆ ಏರಿಕೆಯಾಗಿದೆ.

ಅಲ್ಲದೆ, ಇಂದು ಇಬ್ಬರು ಕೊರೊನಾಗೆ ಬಲಿಯಾಗಿದ್ದು, ಮೃತರ ಸಂಖ್ಯೆ 25ಕ್ಕೆ ಏರಿಕೆಯಾಗಿದೆ. 2,272 ಸೋಂಕಿತರ ಪೈಕಿ 1,404 ಜನರು ಗುಣಮುಖರಾಗಿ ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದಾರೆ. ಜಿಲ್ಲೆಯಲ್ಲಿ ಈವರೆಗೆ 38,810 ಜನರ ಗಂಟಲು ದ್ರವದ ಮಾದರಿ ಪರೀಕ್ಷಿಸಲಾಗಿದ್ದು, 36,118 ಮಂದಿಯ ವರದಿ ನೆಗೆಟಿವ್ ಬಂದಿದೆ. ಇನ್ನುಳಿದ 351 ಸ್ಯಾಂಪಲ್‍ಗಳ ಫಲಿತಾಂಶ ಬರಬೇಕಿದೆ.

ರಾಯಚೂರು 78, ಸಿಂಧನೂರು 14, ಮಾನವಿ 22 ಹಾಗೂ ಲಿಂಗಸೂಗೂರು ತಾಲ್ಲೂಕಿನಲ್ಲಿ 21 ಜನರು ಸೇರಿದಂತೆ ಒಟ್ಟು 135 ಜನರನ್ನು ಸಾಂಸ್ಥಿಕ ಕ್ವಾರಂಟೈನ್‍ನಲ್ಲಿರಿಸಿ ನಿಗಾ ವಹಿಸಲಾಗಿದೆ.

ABOUT THE AUTHOR

...view details