ರಾಯಚೂರು: ನಗರದಲ್ಲಿ ವಾಹನಗಳ ತಪಾಸಣೆ ಮಾಡುವ ವೇಳೆ ಓರ್ವ ಸೋಂಕಿತ ಪತ್ತೆಯಾಗಿರುವುದು ಕಂಡ ಪೊಲೀಸರು ಹೌಹಾರಿದ ಪ್ರಸಂಗ ನಡೆದಿದೆ.
ವಾಹನ ತಪಾಸಣೆ ವೇಳೆ ಸೋಂಕಿತ ಪತ್ತೆ.. ಹೌಹಾರಿದ ಪೊಲೀಸರು - ವಾಹನಗಳ ತಪಾಸಣೆ ಮಾಡುವ ವೇಳೆ ಓರ್ವ ಸೋಂಕಿತ ಪತ್ತೆ
ಮಾತ್ರೆ ನೆಪದಲ್ಲಿ ನಗರದಲ್ಲಿ ಸುತ್ತಾಟ ನಡೆಸಲಾಗುತ್ತಿದ್ದು, ಪೊಲೀಸರ ತಪಾಸಣೆ ವೇಳೆ ಸತ್ಯ ಬಾಯಿಬಿಟ್ಟದ್ದಾನೆ. ಈ ಬಗ್ಗೆ ಯುವಕನ ಮನೆಯವರನ್ನ ಕರೆ ವಿಚಾರಣೆ ಮಾಡಿದ್ದಾರೆ
![ವಾಹನ ತಪಾಸಣೆ ವೇಳೆ ಸೋಂಕಿತ ಪತ್ತೆ.. ಹೌಹಾರಿದ ಪೊಲೀಸರು Raichur](https://etvbharatimages.akamaized.net/etvbharat/prod-images/768-512-03:12:49:1620639769-kn-rcr-03-corona-postive-case-script-ka10035-10052021145359-1005f-1620638639-604.jpg)
Raichur
ನಗರದ ಡಾ.ಬಿ.ಆರ್.ಅಂಬೇಡ್ಕರ್ ಸರ್ಕಲ್‌ನಲ್ಲಿ ಪೊಲೀಸರು ವಾಹನಗಳ ತಪಾಸಣೆ ನಡೆಸಲಾಗುತ್ತಿತ್ತು. ಇದರ ನಡುವೆ ಹೆಚ್ಚುವರಿ ಎಸ್ ಪಿ ಶ್ರೀಹರಿಬಾಬು ನೇತೃತ್ವದಲ್ಲಿ ವಾಹನಗಳ ತಪಾಸಣೆ ಮಾಡುವಾಗ, ಕೊರೊನಾ ಸೋಂಕಿತ ಪತ್ತೆಯಾಗಿದ್ದಾನೆ ಎಂದು ಹೇಳಲಾಗುತ್ತಿದೆ.
ಮಾತ್ರೆ ನೆಪದಲ್ಲಿ ನಗರದಲ್ಲಿ ಸುತ್ತಾಟ ನಡೆಸಲಾಗುತ್ತಿದ್ದು, ಪೊಲೀಸರ ತಪಾಸಣೆ ವೇಳೆ ಸತ್ಯ ಬಾಯಿಬಿಟ್ಟದ್ದಾನೆ. ಈ ಬಗ್ಗೆ ಯುವಕನ ಮನೆಯವರನ್ನ ಕರೆ ವಿಚಾರಣೆ ಮಾಡಿದ್ದಾರೆ. ಪೊಲೀಸರು ಎಷ್ಟೇ ಹೇಳಿದರೂ ಮನೆಗೆ ಹೋಗಲು ಬಿಡಿ ಎಂದು ಪಟ್ಟು ಹಿಡಿದ ಸೋಂಕಿತನಿಗೆ ಹೆಚ್ಚುವರಿ ಎಸ್.ಪಿ ಆ್ಯಂಬುಲೆನ್ಸ್ ಕರೆಸಿ ಸೋಂಕಿತನನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ.
ವಾಹನ ತಪಾಸಣೆ ವೇಳೆ ಸೋಂಕಿತ ಪತ್ತೆ.. ಹೌಹಾರಿದ ಪೊಲೀಸರು
Last Updated : May 10, 2021, 10:16 PM IST