ಕರ್ನಾಟಕ

karnataka

ETV Bharat / state

ರಾಯಚೂರಿನಲ್ಲಿಂದು 160 ಜನರಿಗೆ ಕೊರೊನಾ ದೃಢ - orona for 160 people in Raichur

ದೇಶಾದ್ಯಂತ ಕೊರೊನಾ ಮಹಾಮಾರಿಯ ಆರ್ಭಟ ಮುಗಿಲು ಮುಟ್ಟಿದ್ದು ರಾಜ್ಯದ ರಾಯಚೂರು ಜಿಲ್ಲೆಯಲ್ಲಿ ಸೋಂಕಿತರ ಸಂಖ್ಯೆ 9623ಕ್ಕೆ ತಲುಪಿದೆ.

Corona is confirm for 160 people in Raichur
ರಾಯಚೂರಿನಲ್ಲಿಂದು 160 ಜನರಿಗೆ ಕೊರೊನಾ ದೃಢ

By

Published : Sep 15, 2020, 8:06 PM IST

ರಾಯಚೂರು: ಜಿಲ್ಲೆಯಲ್ಲಿಂದು 160 ಜನರಿಗೆ ಕೊರೊನಾ ದೃಢಪಟ್ಟಿದ್ದು, ಈ ಮೂಲಕ ಸೋಂಕಿತರ ಸಂಖ್ಯೆ 9623ಕ್ಕೆ ತಲುಪಿದೆ.

ತಾಲೂಕಿನಲ್ಲಿ 82, ಮಾನವಿ 20, ಲಿಂಗಸೂಗೂರು 28, ಸಿಂಧನೂರು 21, ದೇವದುರ್ಗದಲ್ಲಿ ಒಟ್ಟು 9 ಪ್ರಕರಣಗಳು ಪತ್ತೆಯಾಗಿವೆ. ಈವರೆಗೆ ಪತ್ತೆಯಾಗಿರುವ ಸೋಂಕಿತರಲ್ಲಿ 7968 ಜನ ಗುಣಮುಖರಾಗಿ ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದರೆ, 1528 ಪ್ರಕರಣಗಳು ಸಕ್ರಿಯವಾಗಿವೆ. ಇಂದು ಮೂವರು ಸೋಂಕಿತರು ಮೃತಪಡುವ ಮೂಲಕ ಒಟ್ಟು ಸತ್ತವರ ಸಂಖ್ಯೆ 127ಕ್ಕೆ‌ ಏರಿಕೆಯಾಗಿದೆ.

ಪತ್ತೆಯಾಗಿರುವ ರೋಗದ ಗುಣಲಕ್ಷಣದ ಆಧಾರದ ಮೇಲೆ ಸೋಂಕಿತರನ್ನು ಕ್ವಾರಂಟೈನ್ ಕೇಂದ್ರ, ಕೋವಿಡ್ ಆಸ್ಪತ್ರೆಗೆ ಚಿಕಿತ್ಸೆಗೆ ದಾಖಲಿಸಿ ಸಂಪರ್ಕಗಳನ್ನು ಪತ್ತೆ ಹಚ್ಚುವ ಕಾರ್ಯ ನಡೆದಿದೆ ಎಂದು ಜಿಲ್ಲಾಡಳಿತ ಪ್ರಕಟಣೆಯಲ್ಲಿ ತಿಳಿಸಿದೆ.

ABOUT THE AUTHOR

...view details