ಕರ್ನಾಟಕ

karnataka

ETV Bharat / state

ರಾಯಚೂರಿನಲ್ಲಿ ಇಬ್ಬರು ಕೊರೊನಾ ಸೋಂಕಿತರ ಸಾವು:  ಐದಕ್ಕೇರಿದ ಸಾವಿನ ಸಂಖ್ಯೆ - ರಾಯಚೂರು ಕೊರೊನಾ ಸುದ್ದಿ

ಮೃತ ವ್ಯಕ್ತಿ ಲಾರಿ ಚಾಲಕನಾಗಿದ್ದು, ತಮಿಳುನಾಡಿಗೆ ಹೋಗಿ ಬಂದಿದ್ದರಿಂದ ಸೋಂಕು ಕಾಣಿಸಿಕೊಂಡಿತ್ತು. ಹೀಗಾಗಿ ಕೋವಿಡ್-19 ವಾರ್ಡ್ ನಲ್ಲಿ ಚಿಕಿತ್ಸೆ ನೀಡಲಾಗುತ್ತಿತ್ತು. ಚಿಕಿತ್ಸೆ ಫಲಕಾರಿಯಾಗದೇ ಅವರು ಇಂದು ಮೃತಪಟ್ಟಿದ್ದಾರೆ. ಇದೇ ವೇಳೆ ವೃದ್ಧೆಯೊಬ್ಬರು ಸಹ ಅಸುನೀಗಿದ್ದಾರೆ.

ಸೋಂಕಿತ ವ್ಯಕ್ತಿ ಸಾವು
ಸೋಂಕಿತ ವ್ಯಕ್ತಿ ಸಾವು

By

Published : Jul 7, 2020, 7:44 AM IST

Updated : Jul 7, 2020, 1:18 PM IST

ರಾಯಚೂರು: ಜಿಲ್ಲೆಯ ಇಬ್ಬರು ಕೊರೊನಾ ಸೋಂಕಿತರು ಮೃತಪಟ್ಟಿದ್ದಾರೆ. ಓಪೆಕ್ ಆಸ್ಪತ್ರೆಯಲ್ಲಿನ ಕೋವಿಡ್-19 ವಾರ್ಡ್‌ನಲ್ಲಿ ಇವರಿಗೆ ಚಿಕಿತ್ಸೆ ನೀಡಲಾಗುತ್ತಿತ್ತು.

ನಗರದ ಹರಿಜನವಾಡದ 65 ವರ್ಷದ ವೃದ್ಧೆ ಹಾಗೂ ಎಲ್ ಬಿಎಸ್ ನಗರದ 37 ವರ್ಷದ ವ್ಯಕ್ತಿ ಮೃತಪಟ್ಟಿದ್ದಾರೆ. ಮೃತ ವೃದ್ಧೆ ನಿನ್ನೆ ಓಪೆಕ್ ಆಸ್ಪತ್ರೆಗೆ ದಾಖಲಾಗಿದ್ದರು. ವೃದ್ಧೆಗೆ ಐಸಿಯುನಲ್ಲಿ ಚಿಕಿತ್ಸೆ ನೀಡಲಾಗುತ್ತಿತ್ತು. ಚಿಕಿತ್ಸೆ ಫಲಕಾರಿಯಾಗದೇ ವೃದ್ಧೆ ಸಾವ್ನಪ್ಪಿದ್ದಾರೆ.

ಎಲ್ ಬಿಎಸ್ ನಗರದ ಮೃತ ವ್ಯಕ್ತಿ ಲಾರಿ ಚಾಲಕನಾಗಿದ್ದು, ತಮಿಳುನಾಡಿಗೆ ಹೋಗಿ ಬಂದಿದ್ದರಿಂದ ಸೋಂಕು ಕಾಣಿಸಿಕೊಂಡಿತ್ತು. ಹೀಗಾಗಿ ಕೋವಿಡ್-19 ವಾರ್ಡ್​​​​​​​​​ನಲ್ಲಿ ಚಿಕಿತ್ಸೆ ನೀಡಲಾಗುತ್ತಿತ್ತು. ಆದರೆ, ಶ್ವಾಸಕೋಶದ ತೊಂದರೆಯಿಂದ ಬಳಲುತ್ತಿದ್ದರಿಂದ ಚಿಕಿತ್ಸೆ ಫಲಕಾರಿಯಾಗದೇ ಮೃತಪಟ್ಟಿದ್ದಾರೆ.

ಇಬ್ಬರು ಚಿಕಿತ್ಸೆ ಫಲಕಾರಿಯಾಗದೇ ಮೃತಪಟ್ಟಿದ್ದು, ಜಿಲ್ಲಾದ್ಯಂತ ಈವರೆಗೆ ಕೊರೊನಾದಿಂದ ಐದು ಜನ ಮೃತಪಟ್ಟಿದ್ದಾರೆ. ಕೋವಿಡ್-19 ಮಾರ್ಗಸೂಚಿ ಅನ್ವಯ ಶವಸಂಸ್ಕಾರ ನಡೆಸಲಾಗಿದೆ. ಇಬ್ಬರು ಶ್ವಾಸಕೋಶ, ನ್ಯುಮೋನಿಯಾದಿಂದ ಬಳಲುತ್ತಿದ್ದರು. ಹೀಗಾಗಿ ತಜ್ಞರ ಸಮಿತಿಯೊಂದಿಗೆ ಚರ್ಚಿಸಿ ಸಾವಿನ ಬಗ್ಗೆ ಖಚಿತ ಪಡಿಸುವುದಷ್ಟೇ ಬಾಕಿಯಿದೆ.

Last Updated : Jul 7, 2020, 1:18 PM IST

ABOUT THE AUTHOR

...view details