ರಾಯಚೂರು:ಜಿಲ್ಲೆಯಲ್ಲಿ ನಿನ್ನೆ ರಾತ್ರಿಯಿಂದ ಇಲ್ಲಿಯವರೆಗೆ 61 ಪಾಸಿಟಿವ್ ಪ್ರಕರಣಗಳು ದೃಢಪಟ್ಟಿವೆ ಎಂದು ಜಿಲ್ಲಾಧಿಕಾರಿ ಆರ್.ವೆಂಕಟೇಶ್ ಕುಮಾರ್ ತಿಳಿಸಿದ್ದಾರೆ.
ರಾಯಚೂರಲ್ಲಿ ಕೊರೊನಾ 'ಮಹಾ' ಸ್ಫೋಟ: ಇಂದು 61 ಮಂದಿಯಲ್ಲಿ ಸೋಂಕು ಪತ್ತೆ! - ಕೊರೊನಾ ಧೃಡ
ಮಹಾರಾಷ್ಟ್ರಕ್ಕೆ ವಲಸೆ ಹೋಗಿ ವಾಪಸ್ ಬಂದಿದ್ದ 61 ಕಾರ್ಮಿಕರಲ್ಲಿ ಕೊರೊನಾ ಸೋಂಕು ದೃಢಪಟ್ಟಿದ್ದು, ಜಿಲ್ಲೆಯ ಜನತೆಯನ್ನು ಬೆಚ್ಚಿ ಬೀಳಿಸುವಂತೆ ಮಾಡಿದೆ.
![ರಾಯಚೂರಲ್ಲಿ ಕೊರೊನಾ 'ಮಹಾ' ಸ್ಫೋಟ: ಇಂದು 61 ಮಂದಿಯಲ್ಲಿ ಸೋಂಕು ಪತ್ತೆ! ಸೋಂಕು ಪತ್ತೆ](https://etvbharatimages.akamaized.net/etvbharat/prod-images/768-512-7392871-thumbnail-3x2-yuhhjb.jpg)
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಮಹಾರಾಷ್ಟ್ರಕ್ಕೆ ವಲಸೆ ಹೋಗಿ ವಾಪಸ್ ಬಂದಿದ್ದ 61 ಕಾರ್ಮಿಕರಲ್ಲಿ ಕೊರೊನಾ ಸೋಂಕು ದೃಢಪಟ್ಟಿದೆ. ಇವರಲ್ಲಿ ದೇವದುರ್ಗದ 56 ಜನ ಹಾಗೂ ರಾಯಚೂರಿನ 5 ಮಂದಿಗೆ ಕೊರೊನಾ ಪಾಸಿಟಿವ್ ದೃಢಪಟ್ಟಿದ್ದು, ಇದುವರೆಗೆ ಜಿಲ್ಲೆಯಲ್ಲಿ 133 ಪ್ರಕರಣಗಳು ದಾಖಲಾಗಿವೆ ಎಂದರು.
ಮೇ. 22ರಂದು ಮಹಾರಾಷ್ಟ್ರದಿಂದ ಬಂದಿದ್ದ ಸೋಂಕಿತರನ್ನು ಕ್ವಾರಂಟೈನ್ಗೆ ಒಳಪಡಿಸಲಾಗಿತ್ತು. ಬಳಿಕ ಬಂದಿದ್ದ ವರದಿ ತಪ್ಪಾಗಿದೆ. ಮೀಡಿಯಾ ಬುಲೆಟಿನ್ನಲ್ಲಿ ಜಿಲ್ಲೆಯಲ್ಲಿ 62 ಪಾಟಿಸಿವ್ ಕೇಸ್ ದೃಢಪಟ್ಟಿವೆ ಎಂದು ಬಂದಿದೆ. ಆದರೆ ಇದರಲ್ಲಿ P-1959ರ ವರದಿ ಈ ಹಿಂದೆ ಬಂದಿದ್ದು, ಮತ್ತೊಮ್ಮೆ ಸ್ಯಾಂಪಲ್ ಕಳುಹಿಸಿರುವುದರಿಂದ ಪುನರಾವರ್ತನೆಯಾಗಿದೆ. ಈ ಬಗ್ಗೆ ರಾಜ್ಯದಮಟ್ಟದ ಅಧಿಕಾರಿಗಳ ಗಮನಕ್ಕೆ ತರಲಾಗಿದೆ. ಹೀಗಾಗಿ ಇಂದು ಒಟ್ಟು 61 ಕೇಸ್ ದೃಢಪಟ್ಟಿದ್ದು, ಪ್ರಕರಣಗಳ ಸಂಖ್ಯೆ ಒಟ್ಟು 133ಕ್ಕೆ ಏರಿಕೆಯಾಗಿವೆ ಎಂದು ತಿಳಿಸಿದರು.