ಕರ್ನಾಟಕ

karnataka

ETV Bharat / state

ಕೊರೊನಾ ಜಾಗೃತಿಗಾಗಿ ಪೊಲೀಸರಿಂದ ಬೀದಿ ನಾಟಕ ಪ್ರದರ್ಶನ

ರಾಯಚೂರಿನಲ್ಲಿ ಪೊಲೀಸ್ ಇಲಾಖೆ ಸಿಬ್ಬಂದಿ ಹಾಗೂ ಕಲಾವಿದರು ವೇಷ ಧರಿಸಿ, ಬೀದಿ ನಾಟಕ ಪ್ರದರ್ಶನ ಮಾಡುವ ಮೂಲಕ ಜನರಲ್ಲಿ ಕೊರೊನಾ ಕುರಿತು ಜಾಗೃತಿ ಮೂಡಿಸಿದರು. ಯಮ, ಚಿತ್ರಗುಪ್ತ, ಯಮಧೂತರ ವೇಷವನ್ನ ಧರಿಸುವ ಮೂಲಕ ನಾಟಕ ಪ್ರದರ್ಶನ ಮಾಡಿದರು.

corona-awareness-program
ಪೊಲೀಸರಿಂದ ಬೀದಿ ನಾಟಕ ಪ್ರದರ್ಶನ

By

Published : May 4, 2020, 3:41 PM IST

ರಾಯಚೂರು : ಜಿಲ್ಲೆಯಲ್ಲಿ ಲಾಕ್‌ಡೌನ್ ಸಡಿಲಿಕೆ ಮಾಡಲಾಗಿದ್ದು, ಜನರಲ್ಲಿ ಜಾಗೃತಿ ಮೂಡಿಸಲು ಪೊಲೀಸ್ ಇಲಾಖೆಯಿಂದ ಬೀದಿ ನಾಟಕ ಪ್ರದರ್ಶನ ನಡೆಸಲಾಯಿತು.

ಪೊಲೀಸ್ ಇಲಾಖೆ ಸಿಬ್ಬಂದಿ ಹಾಗೂ ಕಲಾವಿದರು ವೇಷ ಧರಿಸಿ, ಬೀದಿ ನಾಟಕ ಪ್ರದರ್ಶನ ಮಾಡುವ ಮೂಲಕ ಜನರಲ್ಲಿ ಕೊರೊನಾ ಕುರಿತು ಜಾಗೃತಿ ಮೂಡಿಸಿದರು. ಯಮ, ಚಿತ್ರಗುಪ್ತ, ಯಮಧೂತರು ಆಗಮಿಸಿ, ಕೊರೊನಾ ಹೊಡೆದೋಡಿಸುವಂತೆ ಕರೆ ನೀಡಿದರು.

ಪೊಲೀಸರಿಂದ ಬೀದಿ ನಾಟಕ ಪ್ರದರ್ಶನ

ಜಿಲ್ಲೆಯಲ್ಲಿ ಇದುವರೆಗೆ ಯಾವುದೇ ಕೊರೊನಾ ವೈರಸ್ ಪಾಸಿಟಿವ್ ಪ್ರಕರಣ ದಾಖಲಾಗಿಲ್ಲ. ಹೀಗಾಗಿ ಲಾಕ್‌ಡೌನ್ ಸಡಿಲಿಕೆ ಮಾಡಲಾಗಿದೆ. ವ್ಯಾಪಾರ-ವಹಿವಾಟಿಗೆ ಸಹ ಅನುಕೂಲ ಮಾಡಿಕೊಂಡಲಾಗಿದ್ದು, ಜನರು ಮಾಸ್ಕ್ ಧರಿಸುವುದು, ಸ್ಯಾನಿಟೈಸರ್ ಉಪಯೋಗಿಸುವುದು,‌ ಸಾಮಾಜಿಕ ಅಂತರ ಕಾಯ್ದುಕೊಳ್ಳುವುದು ಅತ್ಯಗತ್ಯ ಹಾಗೂ ಕಡ್ಡಾಯ ಎಂದು ಕಲಾವಿದರು ಜನರಲ್ಲಿ ಮನವಿ ಮಾಡಿದರು.

ಜೊತೆಗೆ ಮದ್ಯ ಸೇವನೆ ಮಾಡಿ ಮನೆಯಲ್ಲಿರಬೇಕು, ರಸ್ತೆ ಮೇಲೆ ಓಡಾಡಿದ್ರೆ ಪೊಲೀಸರು ಕ್ರಮ ಕೈಗೊಳ್ಳುತ್ತಾರೆ ಎನ್ನುವ ಮೂಲಕ ಮದ್ಯ ಪ್ರಿಯರಿಗೆ ಎಚ್ಚರಿಕೆ ನೀಡಿದರು. ನಗರದ ಪ್ರಮುಖ ರಸ್ತೆಗಳಲ್ಲಿ ಪೊಲೀಸ್​ ಪರೇಡ್ ನಡೆಸಿದರು ಈ ಸಂದರ್ಭದಲ್ಲಿ ಸಾರ್ವಜನಿಕರು ದಾರಿಯಲ್ಲಿ ಹೂ ಎಸೆಯುವ ಮೂಲಕ ಗೌರವ ಸಲ್ಲಿಸಿದ್ರು.

ABOUT THE AUTHOR

...view details