ರಾಯಚೂರು: ಇಲ್ಲಿನ ನಗರಸಭೆ ಪೂರೈಕೆ ಮಾಡುವ ಅಶುದ್ಧ ನೀರಿನ ಪರಿಣಾಮದಿಂದ ಜನರು ಅನಾರೋಗ್ಯಕ್ಕೆ ಈಡಾಗಿದ್ದು, ಸಾವಿನ ಬಾಗಿಲಿನ ಕದವನ್ನು ತಟ್ಟುತ್ತಿದ್ದಾರೆ. ಇದರ ಬೆನ್ನಲ್ಲೆ ಮತ್ತೊಬ್ಬ ವ್ಯಕ್ತಿ ಕಲುಷಿತ ನೀರು ಪೂರೈಕೆಯಿಂದ ಅನಾರೋಗ್ಯಕ್ಕೆ ತುತ್ತಾಗಿ ಮೃತಪಟ್ಟಿದ್ದಾನೆ ಎನ್ನುವ ಆರೋಪ ಸಹ ಕೇಳಿಬಂದಿದೆ.
ನಗರದ ಅಂದ್ರೂನ್ ಕಿಲ್ಲಾ ನಿವಾಸಿ ಅಬ್ದುಲ್ ಗಫರ್ (35) ಮೃತಪಟ್ಟ ವ್ಯಕ್ತಿ. ಅಶುದ್ಧ ನೀರು ಕುಡಿದು ಅದೇ ಬಡಾವಣೆಯಲ್ಲಿ ಸುಮಾರು 20ಕ್ಕೂ ಅಧಿಕ ಜನ, ಹೊಟ್ಟೆ ನೋವು ವಾಂತಿ, ಭೇದಿಯಾಗಿ ಆಸ್ಪತ್ರೆಗೆ ದಾಖಲಾಗಿದ್ದಾರೆ.
ಕೆಲ ದಿನಗಳ ಹಿಂದೆ ಕಲುಷಿತ ನೀರು ಪೊರೈಕೆಯಿಂದ ಇಂದಿರಾ ನಗರದ ಏರಿಯಾದ 60ಕ್ಕೂ ಹೆಚ್ಚು ಜನರು ವಾಂತಿ, ಭೇದಿ, ನೀರ್ಜಲೀಕರಣ ಸಮಸ್ಯೆ ಸೇರಿದಂತೆ ನಾನಾ ರೋಗಗಳಿಗೆ ತುತ್ತಾಗಿದ್ದಾರೆ. ಇನ್ನು ಮಲ್ಲಮ್ಮ ಎನ್ನುವ ಮಹಿಳೆ ಇದೇ ಕಾರಣಕ್ಕೆ ಮೃತಪಟ್ಟಿದ್ದಾಳೆ ಎನ್ನುವ ಆರೋಪವಿದೆ. ಇದರ ಬೆನ್ನಲೆ ಮತ್ತೊಬ್ಬ ವ್ಯಕ್ತಿಯ ಮೃತಪಟ್ಟಿರುವುದು ನಗರದ ಜನತೆಯಲ್ಲಿ ಆತಂಕ ಮನೆ ಮಾಡಿದೆ.