ರಾಯಚೂರು: ಹೈದರಬಾದ್-ಕರ್ನಾಟಕ ತೀರ ಹಿಂದುಳಿದ ಪ್ರದೇವಾಗಿದ್ರೂ ಇಲ್ಲಿನ ಕ್ರಿಕೆಟ್ ಪ್ರತಿಭೆಗಳಿಗೇನು ಕೊರತೆಯಿಲ್ಲ. ಹೀಗಾಗಿ ರಾಯಚೂರು ವಲಯದ ಅಂತರಾಷ್ಟ್ರೀಯ ಗುಣಮಟ್ಟದ ಕ್ರಿಕೆಟ್ ಸ್ಥಾಪನೆಗೆ ಕರ್ನಾಟಕ ರಾಜ್ಯ ಕ್ರಿಕೆಟ್ ಸಂಸ್ಥೆ ರಾಯಚೂರಿನಲ್ಲಿ ಅಡಿಗಲ್ಲು ಹಾಕುವ ಮೂಲಕ ಕಾಮಗಾರಿಗೆ ಚಾಲನೆ ನೀಡಿತ್ತು. ಆದ್ರೆ ಒಂದುವರೆ ದಶಕಗಳು ಕಳೆದ್ರು ಕ್ರೀಡಾಂಗಣ ಕಾಮಗಾರಿ ಮಾತ್ರ ಮುಕ್ತಾಯವಾಗಿಲ್ಲ.
ವಿಳಂಬವಾಗುತ್ತಿರುವ ಅಂತರಾಷ್ಟ್ರೀಯ ಗುಣಮಟ್ಟದ ಕ್ರಿಕೆಟ್ ಮೈದಾನದ ಕಾಮಗಾರಿ ನಗರದ ಹೊರವಲಯದಲ್ಲಿ 12 ಎಕರೆ ಪ್ರದೇಶದಲ್ಲಿ ಕರ್ನಾಟಕ ರಾಜ್ಯ ಕ್ರಿಕೆಟ್ ಆಸೋಶಿಯನ್(ಕೆಎಸ್ಸಿಎ) ನಿಂದ ಅಂತರಾಷ್ಟ್ರೀಯ ಗುಣಮಟ್ಟದ ಕ್ರೀಡಾಂಗಣ ಕಾಮಗಾರಿ ನಡೆಯುತ್ತಿದೆ. ಇದನ್ನ 2001 ಫ್ರೆಬವರಿ 6ರಂದು ಅಂದಿನ ಕೆಎಸ್ಸಿಎ ಗೌರವ ಕಾರ್ಯದರ್ಶಿ ಬ್ರಿಜೇಶ್ ಪಾಟೀಲ್ ಅಡಿಗಲ್ಲು ಹಾಕುವ ಮೂಲಕ ಕಾಮಗಾರಿಗೆ ಚಾಲನೆ ನೀಡಿದ್ರು. ಈ ಐತಿಹಾಸಿಕ ಕ್ಷಣಕ್ಕೆ ಕ್ರಿಕೆಟ್ ತಾರೆಯರಾದ ಸೌರವ್ ಗಂಗೂಲಿ, ರಾಹುಲ್ ದ್ರಾವಿಡ್ ಕೂಡ ಸಾಕ್ಷಿಯಾದ್ರು. ಆದ್ರೆ ಅಂದಿನಿಂದ ಆರಂಭವಾದ ಕ್ರೀಡಾಂಗಣದ ಕಾಮಗಾರಿ 18 ವರ್ಷಗಳು ಕಳೆದ್ರು ಸಹ ಮುಗಿಯುತ್ತಿಲ್ಲ. ಒಂದಲ್ಲ ಒಂದು ಅಡೆತಡೆಗಳು, ತಾಂತ್ರಿಕ ಸಮಸ್ಯೆಗಳು ಎದುರಾಗುತ್ತಲೇ ಇವೆ.
ಇನ್ನು ಈ ಕ್ರೀಡಾಂಗಣ ನಿರ್ಮಾಣಕ್ಕೆ ನಗರದ ಖ್ಯಾತಿ ಉದ್ಯಮಿ ಈ ಆಂಜನೇಯ್ಯ 12 ಎಕರೆ ಜಮೀನನ್ನು ದಾನದ ರೂಪದಲ್ಲಿ ದೇಣಿಗೆ ನೀಡಿದ್ದಾರೆ. ಈ ದೇಣಿಗೆ ನೀಡಿದ ಜಮೀನು ಅತ್ಯಂತ ಉದ್ದ, ಅಧಿಕವಾಗಿದೆ. ಆದ್ರೆ ಕ್ರೀಡಾಂಗಣದ ಎಡಭಾಗದಲ್ಲಿ ಪ್ರೇಕ್ಷಕ ಗ್ಯಾಲರಿ ಮತ್ತು ಪಾರ್ಕಿಂಗ್ ವ್ಯವಸ್ಥೆ ಮಾಡುವುದಕ್ಕೆ ಸುಮಾರು 1 ವರೆ ಎಕರೆ ಜಮೀನಿನ ಅವಶ್ಯಕತೆಯಿದೆ. ಹೀಗಾಗಿ ಪ್ರೇಕ್ಷಕ ಗ್ಯಾಲರಿ ನಿರ್ಮಾಣಕ್ಕೆ ಉದ್ಯಮಿ ಆಂಜನೇಯ್ಯವರೊಂದಿಗೆ ಕೆಎಸ್ಸಿಎ ಪದಾಧಿಕಾರಿಗಳು ಮಾತುಕತೆ ನಡೆಸಿದ್ದಾರೆ.
ಇನ್ನು ಕೆಎಸ್ಸಿಎ ರಾಯಚೂರು ವಲಯಕ್ಕೆ ರಾಯಚೂರು, ಕೊಪ್ಪಳ, ಕಲಬುರಗಿ, ಯಾದಗಿರಿ, ಬೀದರ್, ಬಾಗಲಕೋಟೆ, ವಿಜಯಪುರ ಜಿಲ್ಲೆಗಳ ಸರಿಸುಮಾರು 66 ಕ್ರಿಕೆಟ್ ಕ್ಲಬ್ಗಳು ಒಳಪಡುತ್ತಿವೆ. ಹೈ-ಕ ಮತ್ತು ಉತ್ತರ ಕರ್ನಾಟಕದಲ್ಲಿ ಅಂತರಾಷ್ಟ್ರೀಯ ಗುಣಮಟ್ಟದ ಕ್ರೀಡಾಂಗಣ ನಿರ್ಮಾಣವಾದಲ್ಲಿ ಈ ಭಾಗದಲ್ಲಿನ ಕ್ರಿಕೆಟ್ ಕ್ರೀಡಾಪಟುಗಳಿಗೆ ಅನುಕೂಲವಾಗುವುದರ ಜೊತೆಗೆ ಅಂತರಾಷ್ಟ್ರೀಯ ಪಂದ್ಯಗಳನ್ನು ನಡೆಸಲು ಸಾಧ್ಯವಾಗಲಿದೆ ಎಂಬ ಉದ್ದೇಶದಿಂದ ಕ್ರೀಡಾಂಗಣಕ್ಕೆ ಚಾಲನೆ ನೀಡಲಾಗಿದೆ. ಕ್ರೀಡಾಂಗಣ ನಿರ್ಮಾಣಕ್ಕೆ ಆರ್ಥಿಕ ಸಹಾಯಕ್ಕಾಗಿ ಜಿಲ್ಲಾ ಕ್ರೀಡಾಂಗಣದಲ್ಲಿ ಖ್ಯಾತ ಆಟಗಾರರಾದ ಸೌರವ್ ಗಂಗೂಲಿ, ಯುವರಾಜ ಸಿಂಗ್, ರಾಹುಲ್ ದ್ರಾವಿಡ್, ಹರ್ಭಜನ್ ಸಿಂಗ್ ಸೇರಿದಂತೆ ಸೌಹಾರ್ದ ಕ್ರಿಕೆಟ್ ಪಂದ್ಯಾವಳಿ ಆಯೋಜಿಸಿ ಸುಮಾರು 25 ಲಕ್ಷ ರೂ.ಗಳಷ್ಟು ಹಣವನ್ನು ಸಂಗ್ರಹಿಸಲಾಗಿತ್ತು.
ಸಂಗ್ರಹಿಸಲಾಗಿದ್ದ ಹಣ ಬಡ್ಡಿ ಸೇರಿ ಈಗ 1.60 ಕೋಟಿ ರೂ.ಗಳಾಗಿದ್ದು, ಹುಲ್ಲು ಹಾಸಿನ ಮೈದಾನ ನಿರ್ಮಾಣ ಸೇರಿದಂತೆ ಅಗತ್ಯ ಸೌಕರ್ಯ ಕಲ್ಪಿಸಲು 25 ಕೋಟಿ ರೂ.ಗಳ ಅಂದಾಜು ಪಟ್ಟಿ ಸಿದ್ದವಾಗಿದೆ. ಜತೆಗೆ ಅಂತಾರಾಷ್ಟ್ರೀಯ ಗುಣಮಟ್ಟದ ಪಿಚ್ ನಿರ್ಮಾಣವನ್ನು ಮಾಡಲಾಗುತ್ತಿದೆ. ಹಿಂದುಳಿದ ಪ್ರದೇಶದಲ್ಲಿ ಇಂತಹ ಕ್ರೀಡಾಂಗಣ ನಿರ್ಮಾಣ ಮಾಡುತ್ತಿರುವುದು ಸಂತಸ ಸಂಗತಿಯಾಗಿದೆ. 18 ವರ್ಷಗಳಿಂದ ನಡೆಸತ್ತಿರುವ ಕಾಮಗಾರಿ ಮುಗಿಯದಿರುವುದು ಕ್ರೀಡಾಪಟುಗಳಿಗೆ ಬೇಸರ ಮೂಡಿಸಿದ್ರು, ಸದ್ಯ ಎದುರಾಗಿರುವ ಸಮಸ್ಯೆಯನ್ನ ತ್ವರಿತವಾಗಿ ಬಗೆಹರಿಸುವ ಮೂಲಕ ಕ್ರೀಡಾಂಗಣ ಲೋರ್ಕಾಪಣೆ ಮಾಡಬೇಕು ಎನ್ನುವುದು ಕ್ರೀಡಾಭಿಮಾನಿಗಳ ಒತ್ತಾಸೆಯಾಗಿದೆ.