ಕರ್ನಾಟಕ

karnataka

By

Published : Mar 11, 2021, 3:53 PM IST

Updated : Mar 11, 2021, 4:02 PM IST

ETV Bharat / state

ಸಾಮೂಹಿಕ ವಿವಾಹದಲ್ಲಿ ದಾಂಪತ್ಯ ಜೀವನಕ್ಕೆ ಕಾಲಿಟ್ಟ ಪೊಲೀಸ್ ಕಾನ್ಸ್​ಟೇಬಲ್ಸ್​​

ದೇವದುರ್ಗ ತಾಲೂಕಿನ ಹೆಗ್ಗಡದಿನ್ನಿ ಗ್ರಾಮದ ಆರಾಧ್ಯ ದೈವ ಶ್ರೀ ಸದ್ಗುರು ವೀರಭದ್ರ ಮಹಾಸ್ವಾಮಿಗಳ ಜಾತ್ರಾ ಮಹೋತ್ಸವ ನಿಮಿತ್ತ ಸಾಮೂಹಿಕ ವಿವಾಹವನ್ನು ಶ್ರೀ ಮಠದಿಂದ ಆಯೋಜಿಸಲಾಗಿದ್ದು, ಇಬ್ಬರು ಪೊಲೀಸ್​ ಕಾನ್ಸ್​ಟೇಬಲ್ಸ್​​​​​ ಸರಳ ವಿವಾಹವಾಗಿದ್ದಾರೆ.

constables married in simple marriage program at raichur
ಸಾಮೂಹಿಕ ವಿವಾಹ ಮಹೋತ್ಸವದಲ್ಲಿ ದಾಂಪತ್ಯ ಜೀವನಕ್ಕೆ ಕಾಲಿಟ್ಟ ಪೊಲೀಸ್ ಕಾನ್ಸ್​​ಟೇಬಲ್ಸ್​​

ರಾಯಚೂರು: ಸಾಮೂಹಿಕ ವಿವಾಹ ಮಹೋತ್ಸವದಲ್ಲಿ ಪೊಲೀಸ್​ ಕಾನ್ಸ್​ಟೇಬಲ್ಸ್​​​​​ ಸರಳ ವಿವಾಹವಾಗುವ ಮೂಲಕ ನವಜೀವನಕ್ಕೆ ಕಾಲಿಟ್ಟಿದ್ದಾರೆ.

ಜಿಲ್ಲೆಯ ದೇವದುರ್ಗ ತಾಲೂಕಿನ ಹೆಗ್ಗಡದಿನ್ನಿ ಗ್ರಾಮದ ಆರಾಧ್ಯ ದೈವ ಶ್ರೀ ಸದ್ಗುರು ವೀರಭದ್ರ ಮಹಾಸ್ವಾಮಿಗಳ ಜಾತ್ರಾ ಮಹೋತ್ಸವ ನಿಮಿತ್ತ ಸಾಮೂಹಿಕ ವಿವಾಹವನ್ನು ಶ್ರೀ ಮಠದಿಂದ ಆಯೋಜಿಸಲಾಗಿತ್ತು. ಈ ವಿವಾಹ ಮಹೋತ್ಸವದಲ್ಲಿಯೇ ಇಬ್ಬರು ಪೊಲೀಸ್ ಕಾನ್ಸ್​ಟೇಬಲ್ಸ್​​​​​ ಸರ್ಕಾರಿ ಸೇವೆಯಲ್ಲಿದ್ದರೂ ಕೂಡ ಅದ್ದೂರಿಯಾಗಿ ವಿವಾಹ ಮಹೋತ್ಸವ ಆಚರಿಸಿಕೊಳ್ಳದೆ ಸಾಮೂಹಿಕ ವಿವಾಹದಲ್ಲಿ ಸರಳ ಮದುವೆಯಾದರು.

ಮೂಲತಃ ಸಿರವಾರ ತಾಲೂಕಿನ ಗಣದಿನ್ನಿ ಗ್ರಾಮದ ಬಸವನಗೌಡ ಪ್ರಸ್ತುತ ಬೆಂಗಳೂರಿನ ಕೋರಮಂಗಲ ಠಾಣೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ. ಮಾನವಿ ತಾಲೂಕಿನ ಜಿನ್ನೂರು ಗ್ರಾಮ ನಿವಾಸಿ ಜಯಶ್ರೀ ಪ್ರಸ್ತುತ ಬೆಂಗಳೂರಿನ ಸಂಪಿಗೆಹಳ್ಳಿ ಠಾಣೆಯಲ್ಲಿ ಮಹಿಳಾ ಪೇದೆಯಾಗಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ.

ಇದನ್ನೂ ಓದಿ:ಗುಮ್ಮಟ ನಗರಿಯಲ್ಲಿ ಮಹಾಶಿವರಾತ್ರಿ ಸಂಭ್ರಮ: ಶಿವನ ದರ್ಶನಕ್ಕೆ ಹರಿದು ಬಂದ ಭಕ್ತಸಾಗರ

ಇವರಿಬ್ಬರೂ ಕೂಡ ಸರ್ಕಾರಿ ಸೇವೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿರುವುದರಿಂದ ಅದ್ಧೂರಿಯಾಗಿಯೇ ವಿವಾಹ ಆಗಬಹುದಿತ್ತು. ಆದ್ರೆ ಸಾಮೂಹಿಕ ವಿವಾಹ ಮಹೋತ್ಸವದಲ್ಲಿ ಸರಳವಾಗಿ ವಿವಾಹವಾಗಿ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ. ಈ ಮೂಲಕ ಇತರರಿಗೂ ಮಾದರಿಯಾಗಿದ್ದಾರೆ.

Last Updated : Mar 11, 2021, 4:02 PM IST

ABOUT THE AUTHOR

...view details