ರಾಯಚೂರು: ತಾತ್ಕಾಲಿಕ ಪೊಲೀಸ್ ತರಬೇತಿ ಶಾಲೆಯಿಂದ ಇಂದು 10ನೇ ತಂಡದ ನಾಗರಿಕ, ಸಶಸ್ತ್ರ ಪೊಲೀಸ್ ಕಾನ್ಸ್ಟೇಬಲ್ಗಳ ನಿರ್ಗಮನ ಪಥಸಂಚಲನ ನಡೆಯಿತು.
ನಗರದ ಪೊಲೀಸ್ ಕವಾಯತು ಮೈದಾನದಲ್ಲಿ ನಡೆದ ಈ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಬಳ್ಳಾರಿ ವಲಯದ ಐಜಿಪಿ ನಂಜುಂಡ ಸ್ವಾಮಿ ಆಗಮಿಸಿದ್ದರು. ಗೌರವ ವಂದನೆ ಸ್ವೀಕರಿಸಿ ಮಾತನಾಡಿದ ಅವರು, ಪೊಲೀಸರಿಗೆ ಇರುವುದು ಎರಡು ಹಬ್ಬಗಳು ಮಾತ್ರ. ಒಂದನೇಯದು ಪೊಲೀಸ್ ಧ್ವಜಾ ದಿನ ಹಾಗೂ ಎರಡನೇಯದು ಹುತಾತ್ಮರ ದಿನಾಚರಣೆ ಎಂದರು.
ರಾಯಚೂರಿನಲ್ಲಿ ಪೊಲೀಸ್ ಕಾನ್ಸ್ಟೇಬಲ್ಗಳ ನಿರ್ಗಮನ ಪಥಸಂಚಲನ - undefined
ನಗರದ ಪೋಲೀಸ್ ಕವಾಯತು ಮೈದಾನದಲ್ಲಿ ತಾತ್ಕಾಲಿಕ ಪೊಲೀಸ್ ತರಬೇತಿ ಶಾಲೆ ವತಿಯಿಂದ ಸಶಸ್ತ್ರ ಪೊಲೀಸ್ ಕಾನ್ಸ್ಟೇಬಲ್ಗಳ ನಿರ್ಗಮನ ಪಥ ಸಂಚಲನ ನಡೆಯಿತು.
![ರಾಯಚೂರಿನಲ್ಲಿ ಪೊಲೀಸ್ ಕಾನ್ಸ್ಟೇಬಲ್ಗಳ ನಿರ್ಗಮನ ಪಥಸಂಚಲನ](https://etvbharatimages.akamaized.net/etvbharat/prod-images/768-512-3856642-986-3856642-1563282859808.jpg)
ಸಶಸ್ತ್ರ ಪೋಲಿಸ್ ಕಾನ್ಸ್‌ಟೇಬಲ್ ನಿರ್ಗಮನ ಪಥ ಸಂಚಲನ
ಪೊಲೀಸ್ ಕಾನ್ಸ್ಟೇಬಲ್ಗಳ ನಿರ್ಗಮನ ಪಥಸಂಚಲನ
ಪೊಲೀಸರಿಗೆ ಈ ಹಿಂದೆ ಸರಕಾರ್ ಎನ್ನುತಿದ್ದರು. ಇದಕ್ಕೆ ಕಾರಣ ಪೊಲೀಸರು ಆಸ್ತಿಪಾಸ್ತಿ ರಕ್ಷಣೆ ಮಾಡಿ ಜನರ ರಕ್ಷಣೆಗೆ ಮುಂದಾಗುತ್ತಾರೆ ಎಂದು. ಪೊಲೀಸರು ಸಂವಿಧಾನದ ಆಶಯಗಳಿಗೆ ಬದ್ಧರಾಗಿ ಕೆಲಸ ಮಾಡುವ ಮೂಲಕ ಮಾದರಿಯಾಗಬೇಕು ಎಂದು ಸಲಹೆ ನೀಡಿದರು.