ರಾಯಚೂರು: ಕಾಂಗ್ರೆಸ್ ಎಲ್ಲೇ ಹೋದರು ಸೋಲುವುದು ಖಚಿತ. ಕೈ ನಾಯಕರಿಗೆ ನಡುಕ ಶುರುವಾಗಿದೆ. ಮುಂಬರುವ ದಿನಗಳಲ್ಲಿ ಕಾಂಗ್ರೆಸ್ ಮುಕ್ತ ರಾಜ್ಯ ಮಾಡುತ್ತೇವೆ ಎಂದು ಸಚಿವ ಬಿ.ಶ್ರೀರಾಮುಲು ಹೇಳಿದರು.
ಜಿಲ್ಲೆಯ ಸಿಂಧನೂರು ತಾಲೂಕಿನ ತುರುವಿಹಾಳ ಗ್ರಾಮದ ಉಪಚುನಾವಣೆ ಪ್ರಚಾರ ಸಭೆಯಲ್ಲಿ ಮಾತನಾಡಿದ ಅವರು, ರಾಜ್ಯದ ಕಾಂಗ್ರೆಸ್ ನಾಯಕರಿಗೆ ನಡುಕ ಶುರುವಾಗಿದ್ದು, ಮುಂದಿನ ದಿನಗಳಲ್ಲಿ ರಾಜ್ಯದಲ್ಲಿ ಕಾಂಗ್ರೆಸ್ ಮುಕ್ತ ಮಾಡುತ್ತೇವೆ. ಹಾಗಾಗಿ ಮಸ್ಕಿಯಲ್ಲಿ ಪ್ರತಾಪ್ ಗೌಡ ಪಾಟೀಲರನ್ನು ಗೆಲ್ಲಿಸಬೇಕಿದೆ ಎಂದರು.
ಪ್ರಚಾರ ಸಭೆಯಲ್ಲಿ ಮಾತನಾಡಿದ ಸಚಿವ ಬಿ.ಶ್ರೀರಾಮುಲು ಮೈತ್ರಿ ಸರ್ಕಾರ ಕೇವಲ 5 ಜಿಲ್ಲೆಗೆ ಸೀಮಿತವಾಗಿತ್ತು. ಅದಕ್ಕೆ ಪ್ರತಾಪ್ ಗೌಡ ಹೊರ ಬಂದು ಬಿಜೆಪಿ ಸೇರಿದ್ರು. ಎಲ್ಲಾ 17 ಜನ ಹಣಕ್ಕೆ ಮಾರಾಟವಾಗಿದ್ದಾರೆ ಅಂತ ಆರೋಪ ಮಾಡ್ತಿದ್ದಾರೆ. ಹಣಕ್ಕೆ ಏನೂ ಕೊರತೆಯಿಲ್ಲ. ಕಾಂಗ್ರೆಸ್ ಬೇಡವಾಗಿದ್ದಕ್ಕೆ ಬಂದಿದ್ದಾರೆ ಎಂದರು.
ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವುಕುಮಾರ್ 5ಎ ಕಾಲುವೆ ಬಗ್ಗೆ ಇಂದು ಮಾತನಾಡ್ತಿದ್ದೀರಿ. ನಿಮ್ಮ ಸರ್ಕಾರ ಇದ್ದಾಗ ಯಾಕೆ ಮಾಡಲಿಲ್ಲ. ಪ್ರತಾಪ್ ಗೌಡರು ಸಹ ನಿಮ್ಮ ಮನೆ ಬಾಗಿಲಿಗೆ ಬಂದಾಗ ಯಾಕೆ ಕೆಲಸ ಮಾಡಿಕೊಟ್ಟಿಲ್ಲ. ನೀತಿ ರಾಜಕಾರಣ ಬಗ್ಗೆ ನೀವೇನು ಮಾತನಾಡುತ್ತೀರಿ, ನೀಮಗೆ ನೀತಿ ಇದೆಯಾ ಎಂದು ಪ್ರಶ್ನಿಸಿದರು.