ಕರ್ನಾಟಕ

karnataka

ETV Bharat / state

ಕೇಂದ್ರ ಸರ್ಕಾರದ ವಿರುದ್ಧ ನ. 13ರಂದು ಪ್ರತಿಭಟನೆ: ಬೋಸರಾಜ್​​ - raichur news

ಕೇಂದ್ರ ಬಿಜೆಪಿ ಆಡಳಿತ ಧೋರಣೆ ಖಂಡಿಸಿ ನ. 13ರಂದು ರಾಯಚೂರಿನಲ್ಲಿ ಪ್ರತಿಭಟನೆ ಹಮ್ಮಿಕೊಳ್ಳಲಾಗಿದೆ ಎಂದು ಎಐಸಿಸಿ ಕಾರ್ಯದರ್ಶಿ ಎನ್.ಎಸ್.ಬೋಸರಾಜ್ ತಿಳಿಸಿದರು.

ಬಿಜೆಪಿ ಆಡಳಿತ ಧೋರಣೆ ಖಂಡಿಸಿ ನ.13ರಂದು ಪ್ರತಿಭಟನೆ: ಎನ್.ಎಸ್.ಬೋಸರಾಜ್

By

Published : Nov 10, 2019, 12:32 PM IST

ರಾಯಚೂರು: ಕೇಂದ್ರ ಸರ್ಕಾರದ ಆರ್ಥಿಕ ನೀತಿ ಹಾಗೂ ಆಡಳಿತ ಧೋರಣೆ ಖಂಡಿಸಿ ನ. 13ರಂದು ರಾಯಚೂರಿನಲ್ಲಿ ಪ್ರತಿಭಟನೆ ಹಮ್ಮಿಕೊಳ್ಳಲಾಗಿದೆ ಎಂದು ಎಐಸಿಸಿ ಕಾರ್ಯದರ್ಶಿ ಎನ್.ಎಸ್.ಬೋಸರಾಜ್ ಹೇಳಿದ್ದಾರೆ.

ಬಿಜೆಪಿ ಆಡಳಿತ ಧೋರಣೆ ಖಂಡಿಸಿ ನ. 13ರಂದು ಪ್ರತಿಭಟನೆ: ಬೋಸರಾಜ್

ನಗರದ ಜಿಲ್ಲಾ ಕಾಂಗ್ರೆಸ್ ಕಚೇರಿಯಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕೇಂದ್ರದಲ್ಲಿ ಬಿಜೆಪಿ ಅಸ್ತಿತ್ವಕ್ಕೆ ಬಂದ್ಮೇಲೆ ಸರ್ಕಾರದ ನಿರ್ಧಾರಗಳಿಂದ ನಿರುದ್ಯೋಗ, ಬ್ಯಾಂಕ್ ದಿವಾಳಿತನ, ರೈತರ ವಲಯಗಳಿಗೆ ಆರ್ಥಿಕ ತೊಂದರೆ ಎದುರಾಗಿದ್ದು, ಜನಸಾಮಾನ್ಯರು ತೊಂದರೆ ಅನುಭವಿಸುವಂತೆ ಮಾಡಿದೆ.

ಹೀಗಾಗಿ ಸರ್ಕಾರದ ಈ ನಿರ್ಧಾರಗಳನ್ನು ಖಂಡಿಸಿ, ಎದುರಾಗಿರುವ ಸಮಸ್ಯೆಗಳನ್ನ ಸರಿಪಡಿಸುವಂತೆ ರಾಯಚೂರಿನಲ್ಲಿ ಕಾಂಗ್ರೆಸ್ ಹಿರಿಯ ನಾಯಕರಾದ ಮಲ್ಲಿಕಾರ್ಜುನ ಖರ್ಗೆ, ದಿನೇಶ್‌ ಗುಂಡೂರಾವ್, ಈಶ್ವರ ಖಂಡ್ರೆ ಸೇರಿದಂತೆ ಅನೇಕರು ಭಾಗಿಯಾಗಿ ನಗರದಲ್ಲಿ ಪ್ರತಿಭಟನೆ ನಡೆಸಲಾಗುವುದು ಎಂದರು.

ಅಯೋಧ್ಯೆಯ ರಾಮ ಜನ್ಮಭೂಮಿ ಭೂ ವಿವಾದ ಸಂಬಂಧ ಸುಪ್ರೀಂ ಕೋರ್ಟ್ ನೀಡಿರುವ ತೀರ್ಪುನ್ನ ಸ್ವಾಗತಿಸುತ್ತೇವೆ. ಹಲವು ವರ್ಷಗಳಿಂದ ಅಯೋಧ್ಯೆ ತೀರ್ಪು ವಿಳಂಬವಾಗಿತ್ತು. ಈ ವಿಚಾರಕ್ಕೆ ನಿನ್ನೆ ಸುಪ್ರೀಂ ಕೋರ್ಟ್ ನೀಡಿರುವ ತೀರ್ಪುನ್ನ ನಾವು‌ ಸ್ವಾಗತಿಸುತ್ತೇವೆ ಎಂದರು.

ABOUT THE AUTHOR

...view details