ಕರ್ನಾಟಕ

karnataka

ETV Bharat / state

ಕೈ​ ನಾಯಕರು ಲಸಿಕೆ ಬಗ್ಗೆ ಅಪಪ್ರಚಾರ ಮಾಡಿ, ಕಳ್ಳತನದಲ್ಲಿ ವ್ಯಾಕ್ಸಿನ್​ ಪಡೆದಿದ್ದಾರೆ: ಶಿವನಗೌಡ ನಾಯಕ ಕಿಡಿ - ಕೋವಿಡ್​ ಲಸಿಕೆ ಬಗ್ಗೆ ಅಪಪ್ರಚಾರ

ಲಸಿಕೆ ಬಗ್ಗೆ ಕಾಂಗ್ರೆಸ್ ನಾಯಕರು ಅಪಪ್ರಚಾರ ಮಾಡಿದರು. ಇದರ ಪರಿಣಾಮ ಜನ ಗೊಂದಲಕ್ಕಿಡಾಗಿದ್ದಾರೆ. ಆದ್ರೆ ಕಳ್ಳತನದಿಂದ ಹೋಗಿ ಕಾಂಗ್ರೆಸ್​ ನಾಯಕರು ಲಸಿಕೆ ಹಾಕಿಸಿಕೊಂಡು ಬಂದಿದ್ದಾರೆ. ಇಲ್ಲದಿದ್ದರೆ ಭಾರಿ ದೊಡ್ಡ ಪ್ರಮಾಣದಲ್ಲಿ ಕೊವ್ಯಾಕ್ಸಿನ್ ತಯಾರಿಸಿ, ದೇಶ ಹಾಗೂ ರಾಜ್ಯದ ಜನತೆಗೆ ತಲುಪುವ ಕೆಲಸ ನಡೆದಿತ್ತು ಎಂದು ಶಾಸಕ ಕೆ. ಶಿವನಗೌಡ ನಾಯಕ ತಿಳಿಸಿದರು.

congress-leaders-slammed-corona-vaccine
ಶಾಸಕ ಶಿವನಗೌಡ

By

Published : May 20, 2021, 8:03 PM IST

Updated : May 20, 2021, 8:26 PM IST

ರಾಯಚೂರು: ಕೊರೊನಾ ಸಾಂಕ್ರಾಮಿಕ ಕಾಯಿಲೆಗೆ ವಾಕ್ಸಿನ್ ಬಂದಾಗ, ಕಾಂಗ್ರೆಸ್ಸಿಗರು ಲಸಿಕೆ ಬಗ್ಗೆ ಅಪಪ್ರಚಾರ ಮಾಡಿ ಜನರಿಗೆ ಗೊಂದಲ ಉಂಟು ಮಾಡಿದ್ದಾರೆ ಎಂದು ದೇವದುರ್ಗ ಬಿಜೆಪಿ ಶಾಸಕ ಕೆ.ಶಿವನಗೌಡ ನಾಯಕ ಆರೋಪಿಸಿದರು.

ಕಾಂಗ್ರೆಸ್​ ನಾಯಕರ ವಿರುದ್ಧ ಕಿಡಿಕಾರಿದ ಶಾಸಕ ಶಿವನಗೌಡ

ಜಿಲ್ಲೆಯ ದೇವದುರ್ಗ ಪಟ್ಟಣದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಲಸಿಕೆ ಬಗ್ಗೆ ಕಾಂಗ್ರೆಸ್ ನಾಯಕರು ಅಪಪ್ರಚಾರ ಮಾಡಿದರು. ಇದರ ಪರಿಣಾಮ ಜನ ಗೊಂದಲಕ್ಕಿಡಾಗಿದ್ದಾರೆ. ಆದ್ರೆ ಅಪಪ್ರಚಾರ ಮಾಡಿದವರೇ ಕಳ್ಳತನದಿಂದ ಹೋಗಿ ಲಸಿಕೆ ಹಾಕಿಸಿಕೊಂಡು ಬಂದಿದ್ದಾರೆ. ಇಲ್ಲದಿದ್ದರೆ ಭಾರಿ ದೊಡ್ಡ ಪ್ರಮಾಣದಲ್ಲಿ ಕೊವ್ಯಾಕ್ಸಿನ್ ತಯಾರಿಸಿ, ದೇಶ ಹಾಗೂ ರಾಜ್ಯದ ಜನತೆಗೆ ತಲುಪುವ ಕೆಲಸ ನಡೆದಿತ್ತು. ಕಾಂಗ್ರೆಸ್​ನ ಈ ಕೆಟ್ಟ ಕೆಲಸದಿಂದ ಜನತೆಗೆ ಕೊವ್ಯಾಕ್ಸಿನ್ ತಲುಪದಂತೆ ಆಗಿದೆ ಎಂದು ಆರೋಪಿಸಿದರು.

ಕೊರೊನಾ ಸಂಕಷ್ಟದ ನಡುವೆ ಸಿಎಂ ಹಾಗೂ ಸಚಿವ ಸಂಪುಟ ಉತ್ತಮ ಕಾರ್ಯ ನಿರ್ವಹಿಸುತ್ತಿದೆ. ಹಟ್ಟಿ ಗೋಲ್ಡ್ ಮೈನ್ ನಿಂದ 120 ಹಾಸಿಗೆಯ ಮಲ್ಟಿ ಸೇಷ್ಪಾಲಿಟ್ ಆಸ್ಪತ್ರೆ ನಿರ್ಮಾಣಕ್ಕೆ ಗಣಿ ಮತ್ತು ಭೂ ವಿಜ್ಞಾನ ಸಚಿವರಾದ ಮುರುಗೇಶ್ ನಿರಾಣಿಗೆ ಮನವಿ ಮಾಡಲಾಗಿದೆ. ಇದಕ್ಕೆ ಸಚಿವರ ಸ್ಪಂದಿಸಿದ್ದಾರೆ ಎಂದು ತಿಳಿಸಿದರು.

ಬೆಡ್​​, ಚಿಕಿತ್ಸೆ ಸಿಗದಿದ್ದರೆ ನನಗೆ ಕರೆ ಮಾಡಿ

ಸೋಂಕಿತರಿಗೆ ಆಸ್ಪತ್ರೆಯಲ್ಲಿ ಬೆಡ್ ಸಿಗದಿದ್ದರೆ ನನಗೆ ಇಲ್ಲಾ ನನ್ನ ಆಪ್ತ ಕಾರ್ಯದರ್ಶಿಯವರನ್ನ ಸಂಪರ್ಕಿಸಿ, ಹಾಸಿಗೆ ವ್ಯವಸ್ಥೆ ಮಾಡುತ್ತೇವೆ. 100 ಆಸ್ಪತ್ರೆಗಳಿಗೆ ಮೂರಿಂದ ನಾಲ್ಕು ಸಾವಿರ ಊಟವನ್ನ ನೀಡುವ ವ್ಯವಸ್ಥೆ ಮಾಡಲಾಗುತ್ತದೆ. ನಮ್ಮ ತಾಯಿ ಸಾರ್ವಜನಿಕರಿಗೆ ಊಟದ ವ್ಯವಸ್ಥೆ ಮಾಡಬೇಕು ಎನ್ನುವ ಸಲಹೆ ನೀಡಿದ್ದಾರೆ. ಆದ್ರೆ ಈ ಬಗ್ಗೆ ಸಾಧಕ-ಬಾಧಕಗಳನ್ನು ಪರಿಶೀಲನೆ ಮಾಡಿ ಮುಂದಿನ ಹೆಜ್ಜೆ ಇಡಲಾಗುವುದು ಎಂದು ಹೇಳಿದರು.

Last Updated : May 20, 2021, 8:26 PM IST

ABOUT THE AUTHOR

...view details