ರಾಯಚೂರು:ತುಂಗಭದ್ರಾ ನದಿಯ ರಾಜಲಬಂಡಾ ಡ್ಯಾಂ ಭರ್ತಿಯಾದ ಹಿನ್ನಲೆ ವಿಧಾನ ಪರಿಷತ್ ಸದಸ್ಯ ಎನ್. ಎಸ್. ಬೋಸರಾಜ್ ಹಾಗೂ ಕೈ ನಾಯಕರು, ಕಾರ್ಯಕರ್ತರು ಬಾಗಿನ ಅರ್ಪಿಸಿದ್ರು.
ತುಂಗಭದ್ರಾ ನದಿಗೆ ಬಾಗಿನ ಅರ್ಪಿಸಿದ ಕೈ ನಾಯಕರು - ತುಂಗಭದ್ರಾ ನದಿ ಭರ್ತಿ,
ರಾಯಚೂರು ಜಿಲ್ಲೆಯ ತುಂಗಭದ್ರಾ ನದಿಯ ರಾಜಲಬಂಡಾ ಡ್ಯಾಂ ಭರ್ತಿಯಾದ ಹಿನ್ನಲೆ ವಿಧಾನ ಪರಿಷತ್ ಸದಸ್ಯ ಎನ್. ಎಸ್. ಬೋಸರಾಜ್ ಹಾಗೂ ಕೈ ನಾಯಕರು, ಕಾರ್ಯಕರ್ತರು ಬಾಗಿನ ಅರ್ಪಿಸಿದ್ರು.
ತುಂಗಭದ್ರಾ ನದಿಗೆ ಬಾಗಿನ ಅರ್ಪಿಸಿದ ಕೈ ನಾಯಕರು
ಮಾನವಿ ತಾಲೂಕಿನ ರಾಜಲಬಂಡಾ ಗ್ರಾಮದ ಬಳಿ ಬರುವ ಈ ಡ್ಯಾಂ ಭರ್ತಿಯಾಗಿ ನೀರು ಉಕ್ಕಿ ಹರಿಯುತ್ತಿದೆ. ಹೀಗಾಗಿ ಡ್ಯಾಂಗೆ ಬಾಗಿನ ಅರ್ಪಿಸುವ ಮೂಲಕ ವಿಶೇಷ ಪೂಜೆ ಸಲ್ಲಿಸಲಾಯಿತು. ಬಳಿಕ ತುಂಗಭದ್ರಾ ಎಡದಂತೆ ಕಾಲುವೆಯ ಗೇಟ್ ಎತ್ತುವ ಮೂಲಕ ನೀರು ಹರಿದು ಬಿಡಲಾಯಿತು.
ಈ ವೇಳೆ ರಾಯಚೂರು ಗ್ರಾಮೀಣ ಶಾಸಕರಾದ ಬಸವನಗೌಡ ದದ್ದಲ್, ಬಸವರಾಜ್ ಪಾಟೀಲ್ ಇಟಗಿ, ಮಾಜಿ ಸಂಸದ ಬಿ.ವಿ.ನಾಯಕ, ಮಾಜಿ ಶಾಸಕ ಜಿ.ಹಂಪಯ್ಯ ನಾಯಕ ಸೇರಿದಂತೆ ಹಲವು ಕೈ ನಾಯಕರು, ಕಾರ್ಯಕರ್ತರು ಉಪಸ್ಥಿತರಿದ್ದರು.