ಕರ್ನಾಟಕ

karnataka

ETV Bharat / state

ರಾಯಚೂರು ಇಂದಿನಿಂದ ಮೂರು ದಿನ ಸಂಪೂರ್ಣ ಲಾಕ್​ಡೌನ್​ - Complete Lockdown imposed in Raichuru news

ಕೊರೊನಾ ಉಲ್ಬಣಗೊಳ್ಳುತ್ತಿದ್ದು ಇಂದಿನಿಂದ ಮೇ 18 ರವರೆಗೆ ಮೂರು ದಿನಗಳ ಕಾಲ ರಾಯಚೂರು ಜಿಲ್ಲೆಯಲ್ಲಿ ಸಂಪೂರ್ಣ ಲಾಕ್​ಡೌನ್ ಜಾರಿಗೊಳಿಸಲಾಗಿದೆ. ಆಸ್ಪತ್ರೆಗೆ ತೆರಳುವವರು ಚೆಕ್ ಪೋಸ್ಟ್​ನಲ್ಲಿ ಸೂಕ್ತ ದಾಖಲೆ ತೋರಿಸಬೇಕಾಗಿದ್ದು, ದಿನಪತ್ರಿಕೆ ಹಾಗೂ ಎಟಿಎಂ ಸೇವೆ ಲಭ್ಯವಿದೆ.

Complete Lockdown imposed in Raichuru
ರಾಯಚೂರಿನಲ್ಲಿ ಮೂರು ದಿನಗಳ ಕಾಲ ಸಂಪೂರ್ಣ ಲಾಕ್​ಡೌನ್​

By

Published : May 16, 2021, 10:28 AM IST

ರಾಯಚೂರು: ಕೊರೊನಾ ಸೋಂಕು ತಡೆಗಟ್ಟುವ ಕ್ರಮವಾಗಿ ರಾಯಚೂರು ಜಿಲ್ಲೆಯಾದ್ಯಂತ ಇಂದಿನಿಂದ ಮೇ 18 ರ ವರೆಗೆ ಮೂರು ದಿನ ಸಂಪೂರ್ಣ ಲಾಕ್​ಡೌನ್ ಜಾರಿಗೊಳಿಸಲಾಗಿದೆ.

ರಾಯಚೂರಿನಲ್ಲಿ ಮೂರು ದಿನಗಳ ಕಾಲ ಸಂಪೂರ್ಣ ಲಾಕ್​ಡೌನ್​

ನಗರದ ಎಲ್ಲಾ ರಸ್ತೆಗಳಲ್ಲಿ ಪೊಲೀಸರು ನಾಕಾ ಬಂದಿ ಹಾಕುವ ಮೂಲಕ ಜನರು ಓಡಾಟವನ್ನು ತಡೆಯುತ್ತಿದ್ದಾರೆ. ಆಸ್ಪತ್ರೆ, ಮೆಡಿಕಲ್ ಹಾಗೂ ಪೆಟ್ರೋಲ್ ಬಂಕ್ ಹಾಗೂ ತುರ್ತು ಸೇವೆ ಹೊರತುಪಡಿಸಿ ಉಳಿದೆಲ್ಲ ಸೇವೆಗಳನ್ನು ಮೂರು ದಿನ ಸಂಪೂರ್ಣ ಬಂದ್ ಮಾಡಿ ಆದೇಶಿಸಲಾಗಿದೆ.

ಆಸ್ಪತ್ರೆಗೆ ತೆರಳುವವರು ಚೆಕ್ ಪೋಸ್ಟ್​ನಲ್ಲಿ ಸೂಕ್ತ ದಾಖಲೆ ತೋರಿಸಬೇಕಾಗಿದ್ದು, ದಿನಪತ್ರಿಕೆ ಹಾಗೂ ಎಟಿಎಂ ಸೇವೆ ಲಭ್ಯವಿದೆ. ಆರ್​ಟಿಪಿಎಸ್ ಮತ್ತು ವೈಟಿಪಿಎಸ್​ನಲ್ಲಿ ಶೇ. 50 ರಷ್ಟು ಸಿಬ್ಬಂದಿಗೆ ಕಾರ್ಯನಿರ್ವಹಿಸಲು ಅನುಮತಿಸಲಾಗಿದೆ.

ಅಂತ್ಯಕ್ರಿಯೆಗೆ ಮೂರು ದಿನಗಳ ಕಾಲ ಐದು ಜನಕ್ಕೆ ಮಾತ್ರ ಅನುಮತಿ ನೀಡಲಾಗಿದೆ. ಮದುವೆಯಲ್ಲಿ ಪಾಲ್ಗೊಳ್ಳಲು 10 ಜನರಿಗೆ ಮಾತ್ರ ಅವಕಾಶ ಕಲ್ಪಿಸಲಾಗಿದೆ. ಸರ್ಕಾರಿ ಮತ್ತು ಅರೆ ಸರ್ಕಾರಿ ಸಿಬ್ಬಂದಿಗೆ ವರ್ಕ್ ಫ್ರಂ ಹೋಂ ನೀಡಲಾಗಿದೆ.

ABOUT THE AUTHOR

...view details