ಕರ್ನಾಟಕ

karnataka

ETV Bharat / state

ಕೇಂದ್ರವು ಭಾರತವನ್ನು ಹಿಂದೂರಾಷ್ಟ್ರ ಮಾಡಲು ಹೊರಟಿದೆ... ಬಿ. ರುದ್ರಯ್ಯ ವಾಗ್ದಾಳಿ - ರಾಯಚೂರಿನ ಪಂ.ಸಿದ್ದರಾಮ ಜಂಬಲದಿನ್ನಿ ರಂಗಮಂದಿರ

ಕೇಂದ್ರ ಸರ್ಕಾರವು ಅಲ್ಪಸಂಖ್ಯಾತರನ್ನು ಹೊರಹಾಕುವ ಮೂಲಕ, ಭಾರತವನ್ನು ಹಿಂದೂ ರಾಷ್ಟ್ರ ಮಾಡುವ ಹೊರಟಿದೆ ಎಂದು ಸಿಪಿಐಎಂಎಲ್ ರಾಜ್ಯ ಕಾರ್ಯದರ್ಶಿ ಬಿ. ರುದ್ರಯ್ಯ ವಾಗ್ದಾಳಿ ಹೇಳಿದರು.

Communist Party of India Conference in raich
ಭಾರತ ಕಮುನಿಸ್ಟ್ ಪಕ್ಷದ ಸಮಾವೇಶ

By

Published : Dec 22, 2019, 4:58 PM IST

ರಾಯಚೂರು: ಪೌರತ್ವ ತಿದ್ದುಪಡಿ ಕಾಯ್ದೆಯನ್ನು ಜಾರಿಗೆ ತಂದು ಅದರಿಂದ ಅಲ್ಪಸಂಖ್ಯಾತರನ್ನು ಹೊರಹಾಕುವ ಮೂಲಕ ಕೇಂದ್ರ ಸರ್ಕಾರವು, ಭಾರತವನ್ನು ಹಿಂದೂ ರಾಷ್ಟ್ರ ಮಾಡುವ ಹೊರಟಿದೆ ಎಂದು ಸಿಪಿಐಎಂಎಲ್ ರಾಜ್ಯ ಕಾರ್ಯದರ್ಶಿ ಬಿ. ರುದ್ರಯ್ಯ ವಾಗ್ದಾಳಿ ಹೇಳಿದರು.

ನಗರದ ಪಂ.ಸಿದ್ದರಾಮ ಜಂಬಲದಿನ್ನಿ ರಂಗಮಂದಿರದಲ್ಲಿ ನಡೆದ ಭಾರತ ಕಮುನಿಸ್ಟ್ ಪಕ್ಷದ ಜನಾಕ್ರೋಶ ಸಮಾವೇಶವನ್ನು ಉದ್ಘಾಟಿಸಿ ಮಾತನಾಡಿದರು.

ಎನ್ಆರ್​ಸಿ ಹಾಗೂ ಸಿಎಎ ಸಂವಿಧಾನ ಅಣಕಿಸುವ ಹಾಗೂ ಜನವಿರೋಧಿ ಕಾಯ್ದೆಯಾಗಿವೆ. ಇವು ಹಿಂದೂ-ಮುಸ್ಲಿಮರ ಪರ ವಿರೋಧದ ಕಾಯ್ದೆಗಳಲ್ಲ. ಸಂವಿಧಾನ ಪರ ವಿರೋಧದ ಕಾಯ್ದೆಗಳು ಎಂದರು.

ಭಾರತ ಕಮುನಿಸ್ಟ್ ಪಕ್ಷದ ಸಮಾವೇಶ

ದೇಶದ ರಾಷ್ಟ್ರಪಿತನನ್ನು ಕೊಂದವರು ದೇಶ ಪ್ರೇಮಿಗಳು. ಗಾಂಧೀಜಿ ಬಗ್ಗೆ ಮಾತನಾಡುವರು ಹಾಗೂ ಅನುಸರಿಸುವವರು ಭಯೋತ್ಪಾದಕರು ಎಂಬಂತಾಗಿದ್ದು ವಿಪರ್ಯಾಸ ಎಂದು ಟೀಕಿಸಿದರು.

ABOUT THE AUTHOR

...view details