ಲಿಂಗಸುಗೂರು:ದೇಶಾದ್ಯಂತ ಅಯೋಧ್ಯೆ ರಾಮಮಂದಿರ ಭೂಮಿ ಪೂಜೆಗೆ ಸಂಬಂಧಿಸಿದಂತೆ ಪೂಜೆ-ಪುನಸ್ಕಾರ, ರಾಮ ನಾಮ ಜಪ ನಡೆಯುತ್ತಿದ್ದಾಗ ಹಿಂದೂ ಧರ್ಮೀಯರ ಭಾವನೆಗಳಿಗೆ ಧಕ್ಕೆ ತರುವಂಥ ಕೃತ್ಯ ಜರುಗಿದ ಬಗ್ಗೆ ಹಿಂದೂಪರ ಸಂಘಟನೆಗಳು ಆಕ್ರೋಶ ವ್ಯಕ್ತಪಡಿಸಿವೆ.
ರಾಯಚೂರು ಜಿಲ್ಲೆ ಲಿಂಗಸುಗೂರು ತಾಲ್ಲೂಕಿನ ಹಾಲಭಾವಿ ಬಳಿ ನಾರಾಯಣಪುರ ಬಲದಂಡೆ ಆಧುನೀಕರಣ ಕಾಮಗಾರಿ ಕೆಲಸಕ್ಕೆ ಬಂದಿರುವ ಇಬ್ಬರು ಯುವಕರು ವಾಟ್ಸ್ಪ್ ಸ್ಟೇಟಸ್ನಲ್ಲಿ ಕೋಮು ಪ್ರಚೋದನೆ ಮಾಡುವಂಥ ವಿಡಿಯೋ ತುಣುಕು ಹಾಕಿದ್ದಾರೆ. ಪೊಲೀಸ್ ಅಧಿಕಾರಿಗಳ ಗಮನಕ್ಕೆ ಬರುತ್ತಿದ್ದಂತೆಯೇ ಯುವಕರನ್ನು ಬಂಧಿಸಿ ವಿಚಾರಣೆ ನಡೆಸಿದಾಗ, ಯಾದಗಿರಿ ಜಿಲ್ಲೆ ಕಾಂಡಿಕೇರಿ ಗ್ರಾಮದ ಚಿನ್ನುಮಿಯಾ ಬಳಿಗೇರ ಹಾಗೂ ಕಲಬುರ್ಗಿ ಜಿಲ್ಲೆ ಕೊರಳ್ಳಿ ಗ್ರಾಮದ ಬಾಬು ಮುಲ್ಲಾ ಎಂದು ಗುರುತಿಸಲಾಗಿದೆ.