ಕರ್ನಾಟಕ

karnataka

ETV Bharat / state

ಮಾನಸಿಕವಾಗಿ ಕುಗ್ಗದೇ ಸಮಾಜದ ಮುಖ್ಯವಾಹಿನಿಗೆ ಬರಬೇಕು: ವಿಚಾರಣಾಧೀನ ಕೈದಿಗಳಿಗೆ ಸಲಹೆ - ವಿಚಾರಣಾಧೀನ ಖೈದಿ

ರಾಯಚೂರು ಜಿಲ್ಲಾ ಕಾರಾಗೃಹದ ಆವರಣದಲ್ಲಿ ವಿಚಾರಣಾಧೀನ ಖೈದಿಗಳ ಹಕ್ಕುಗಳು ಹಾಗೂ ಗಾಂಧೀಜಿಯ ಜೀವನ ಕುರಿತ ಚಲನಚಿತ್ರ ವೀಕ್ಷಣೆ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು.

ರಾಯಚೂರು ಜಿಲ್ಲಾ ಕಾರಾಗೃಹ

By

Published : Oct 3, 2019, 1:32 PM IST

ರಾಯಚೂರು: ಜಿಲ್ಲಾ ಕಾರಾಗೃಹದ ಆವರಣದಲ್ಲಿ ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರ, ಜಿಲ್ಲಾ ಕಾರಾಗೃಹ ಹಾಗೂ ವಕೀಲರ ಸಂಘದ ಸಂಯುಕ್ತಾಶ್ರಯದಲ್ಲಿ ವಿಚಾರಣಾಧೀನ ಕೈದಿಗಳ ಹಕ್ಕುಗಳು ಹಾಗೂ ಗಾಂಧೀಜಿಯ ಜೀವನ ಕುರಿತ ಚಲನಚಿತ್ರ ವೀಕ್ಷಣೆ ಕಾರ್ಯಕ್ರಮವನ್ನು ಬುಧವಾರ ಹಮ್ಮಿಕೊಳ್ಳಲಾಗಿತ್ತು.

ವಿಚಾರಣಾಧೀನ ಕೈದಿಗಳ ಹಕ್ಕುಗಳು ಹಾಗೂ ಗಾಂಧೀಜಿಯ ಜೀವನ ಕುರಿತ ಚಲನಚಿತ್ರ ವೀಕ್ಷಣೆ ಕಾರ್ಯಕ್ರಮ

ಕಾರ್ಯಕ್ರಮ ಬಳಿಕ ಮಾತನಾಡಿದ ಕಾನೂನು ಸೇವಾ ಪ್ರಾಧಿಕಾರ ಸದಸ್ಯ ಕಾರ್ಯದರ್ಶಿ ಎಂಸಿ ನಾಡಗೌಡ, ಜೀವನದಲ್ಲಿ ಕಷ್ಟಗಳು, ಸಮಸ್ಯೆಗಳು ಎಲ್ಲರಿಗೂ ಬರುತ್ತವೆ. ಆದರೆ ಶಾಂತ ರೀತಿಯಲ್ಲಿ ಪರಿಹರಿಸಿಕೊಳ್ಳಬೇಕು, ಯಾವುದೇ ಕಾರಣಕ್ಕೂ ಉದ್ವೇಗರಾಗಬಾರದು. ವಿಚಾರಣಾದೀನ ಕೈದಿಗಳಿಗೆ ಕಾನೂನಿನ ಅರಿವು ಅವಶ್ಯ. ಸಮಾಜದಲ್ಲಿ ನಿಮ್ಮ ಬಗ್ಗೆ ಏನೇ ಅಭಿಪ್ರಾಯ ಇದ್ದರೂ, ನೀವು ಮಾನಸಿಕವಾಗಿ ಕುಗ್ಗದೇ ಧೈರ್ಯದಿಂದ ಎದುರಿಸಿ ಸಮಾಜದ ಮುಖ್ಯವಾಹಿನಿಗೆ ಬರಬೇಕು.‌‌ ಸರ್ಕಾರದಿಂದ ಅನೇಕ ಜಾಗೃತಿ ಕಾರ್ಯಕ್ರಮ ಹಾಗೂ ನಿಮ್ಮ ಸೌಲಭ್ಯಗಳ‌ ಬಗ್ಗೆ ತಿಳಿಸುವ ಕಾರ್ಯಗಳಾಗುತ್ತಿವೆ ಎಂದರು.

ಮನೋರೋಗ ತಜ್ಞರಾದ ಮನೋಹರ ಪತ್ತಾರ ಮಾತನಾಡಿ, ಎಲ್ಲರೂ ಮಾನಸಿಕ ಒತ್ತಡಕ್ಕೆ ಒಳಗಾಗುತ್ತಾರೆ, ಆದ್ರೆ ಅದನ್ನು ಸಮಯೋಚಿತದಿಂದ ಕೆಲವರು ಮಾತ್ರ ಎದುರಿಸುತ್ತಾರೆ. ಕೆಲವರು ಉದ್ವೇಗಕ್ಕೆ ಒಳಗಾಗಿ ಸಮಾಜಘಾತುಕ ಚಟುವಟಿಕೆಗೆ ಇಳಿಯುತ್ತಾರೆ. ತಮ್ಮ ಮನಸ್ಥಿತಿ ಅರ್ಥೈಸಿಕೊಂಡು ನಡೆದರೆ ಯಾವುದೇ ದುರ್ಘಟನೆ ಸಂಭವಿಸುವುದಿಲ್ಲ ಎಂದು ಹೇಳಿದರು. ನಂತರ ವಿಚರಣಾಧೀನ ಕೈದಿಗಳಿಗೆ ವೈದ್ಯರಿಂದ ಆರೋಗ್ಯ ತಪಾಸಣೆ ಮಾಡಲಾಯಿತು.

ABOUT THE AUTHOR

...view details