ರಾಯಚೂರು:ಜಿಲ್ಲೆಯ ನೆರೆ ಸಂತ್ರಸ್ತರಿಗೆ ಕಾಮಿಡಿ ಕಿಲಾಡಿಗಳ ಕಲಾವಿದರು ಅಗತ್ಯ ವಸ್ತುಗಳನ್ನು ವಿತರಣೆ ಮಾಡಿದರು.
ಕಾಮಿಡಿಗಷ್ಟೇ ಸೀಮಿತವಾಗದೇ ಹತಾಶರ ನೆರವಿಗೂ ಧಾವಿಸಿದ ಕಿಲಾಡಿ ಕುಟುಂಬ - ಗಂಜಿ ಕೇಂದ್ರ
ಕಾಮಿಡಿ ಕಿಲಾಡಿ ಎಂಬ ಮನರಂಜನಾ ಕಾರ್ಯಕ್ರಮದ ಕಲಾವಿದರು ಪ್ರವಾಹ ಸಂತ್ರಸ್ತರಿಗೆ ಸಹಾಯ ಹಸ್ತ ಚಾಚಿದ್ದಾರೆ. ದೇವದುರ್ಗ, ಅಂಜನಾಳ, ರಾಯದುರ್ಗ ಸೇರಿದಂತೆ ನಾನಾ ಕಡೆಯ ಗಂಜಿ ಕೇಂದ್ರಗಳಿಗೆ ಭೇಟಿ ನೀಡಿ ಸಂತ್ರಸ್ತರ ನೆರವಿಗೆ ಸ್ಪಂದಿಸಿದರು.
ಕಾಮಿಡಿ ಕಿಲಾಡಿಗಳು
ಜಿಲ್ಲೆಯ ಕೃಷ್ಣ ನದಿ ಪ್ರವಾಹಕ್ಕೆ ಸಿಲುಕಿದ ಸಂತ್ರಸ್ತರು ಇರುವ ದೇವದುರ್ಗ, ಅಂಜನಾಳ, ರಾಯದುರ್ಗ ಸೇರಿದಂತೆ ನಾನಾ ಕಡೆಯ ಗಂಜಿ ಕೇಂದ್ರಗಳಿಗೆ ಕಾಮಿಡಿ ಖ್ಯಾತಿಯ ಕೆ.ಆರ್.ಪೇಟೆ, ಮುತ್ತುರಾಜ್, ಅಪ್ಪಣ, ಸದಾನಂದ ಭೇಟಿ ಮಾಡಿ ಅಲ್ಲಿನ ಸಂತ್ರಸ್ತರಿಗೆ ಬಿಸ್ಕತ್, ಜೋಳದ ರೊಟ್ಟಿ, ಬ್ರೆಡ್ ಸೇರಿದಂತೆ ಅಗತ್ಯ ವಸ್ತುಗಳನ್ನು ನೀಡುವ ಮೂಲಕ ಸಂತ್ರಸ್ತರ ನೆರವಿಗೆ ಸ್ಪಂದಿಸಿದರು.
ಇವರಿಗೆ ಹಂಚಿನಾಳ ಗ್ರಾಮದ ಯುವಕರಾದ ಶಶಿ ಹಿರೇಮಠ, ನೀರುಪಾದಿ , ಎಂ.ಬಿ. ವಿರೇಶ್ ಕಮತರ್ ಸೇರಿದಂತೆ ಇತರರು ಸಾಥ್ ನೀಡಿದ್ರು.