ರಾಯಚೂರು:ಎಂಜಿನಿಯರಿಂಗ್ ಕಾಲೇಜಿನ ವಿದ್ಯಾರ್ಥಿನಿಯ ನಿಗೂಢ ಸಾವು ಬಗ್ಗೆ ಸಿಐಡಿ ತನಿಖೆ ನಡೆಸುತ್ತಿದ್ದು, ಇದರ ಬೆನ್ನಲ್ಲೇ ಕಾಲೇಜಿನ ಅಧ್ಯಕ್ಷರ ಮಗಳು ಈ ಕುರಿತು ಟ್ವೀಟ್ವೊಂದನ್ನು ಮಾಡುವ ಮೂಲಕ ಪ್ರಕರಣವನ್ನು ಮೈ ಮೇಲೆ ಎಳೆದುಕೊಂಡಿದ್ದಾರೆ ಎನ್ನಲಾಗುತ್ತಿದೆ.
ವಿದ್ಯಾರ್ಥಿನಿಯ ನಿಗೂಢ ಸಾವು ಪ್ರಕರಣ: ಕಾಲೇಜಿನ ಅಧ್ಯಕ್ಷರ ಮಗಳ ಟ್ವೀಟ್ ಖಂಡಿಸಿ ದೂರು - mysterious death
ವಿದ್ಯಾರ್ಥಿನಿಯ ನಿಗೂಢ ಸಾವು ಬೆನ್ನಲ್ಲೇ ಕಾಲೇಜಿನ ಅಧ್ಯಕ್ಷರ ಮಗಳು ಈ ಕುರಿತು ಟ್ವೀಟ್ ಮಾಡಿವ ಮೂಲಕ ಪ್ರಕರಣವನ್ನು ಮೈಮೇಲೆ ಎಳೆದುಕೊಂಡರಾ?
ಕಾಲೇಜಿನ ಅಧ್ಯಕ್ಷರ ಮಗಳ ಟ್ವಿಟ್ ಖಂಡಿಸಿ ದೂರು ದಾಖಲಿಸಿದ ಹೋರಾಟಗಾರು
ವಿದ್ಯಾರ್ಥಿನಿಯು ಆತ್ಮಹತ್ಯೆ ಮಾಡಿಕೊಂಡಿದ್ದಾಳೆ ಎಂದು ಕಾಲೇಜಿನ ಅಧ್ಯಕ್ಷರ ಮಗಳು ಸಾಮಾಜಿಕ ಜಾಲತಾಣದಲ್ಲಿ ಈ ಬಗ್ಗೆ ಏ. 24ರಂದು ಟ್ವೀಟ್ ಮಾಡಿದ್ದರು. ಈ ಟ್ವೀಟ್ ಖಂಡಿಸಿ ಸ್ಥಳೀಯ ಹೋರಾಟಗಾರು ಇದೀಗ ನೇತಾಜಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.
ಇನ್ನು ತಮ್ಮ ಮಗಳು ಆತ್ಮಹತ್ಯೆ ಮಾಡಿಕೊಂಡಿಲ್ಲ. ಯಾರೋ ಅತ್ಯಾಚಾರವೆಸಗಿ ಕೊಲೆ ಮಾಡಿದ್ದಾರೆ ಎಂದು ಆರೋಪಿಸಿ ಮೃತ ವಿದ್ಯಾರ್ಥಿನಿಯ ಪಾಲಕರು ಇದಕ್ಕೂ ಮುನ್ನ ದೂರು ನೀಡಿದ್ದರು. ಪ್ರಕರಣಕ್ಕೆ ಸಂಬಂಧಪಟ್ಟಂತೆ ಓರ್ವ ಆರೋಪಿಯನ್ನು ಬಂಧಿಸಿರುವ ಪೊಲೀಸರು, ಇದೀಗ ತನಿಖೆ ಚುರುಕುಗೊಳಿಸಿದ್ದಾರೆ.