ರಾಯಚೂರು: ಬೃಹತ್ ಶಾಖೋತ್ಪನ್ನ ಕೇಂದ್ರ (RTPS)ದ ಐದು ಘಟಕಗಳು ವಿದ್ಯುತ್ ಉತ್ಪಾದನೆಯನ್ನು ಸ್ಥಗಿತಗೊಳಿಸಿವೆ.
ತಾಲೂಕಿನ ಶಕ್ತಿನಗರದ ಆರ್‌ಟಿಪಿಎಸ್ ಕೇಂದ್ರದಲ್ಲಿ ಕಲ್ಲಿದ್ದಲು ಸಮಸ್ಯೆ ಉಲ್ಬಣಗೊಂಡಿದೆ. ಹೀಗಾಗಿ, ನಿನ್ನೆ 4 ಘಟಕಗಳನ್ನು ಸ್ಥಗಿತಗೊಳಿಸಿ, ಇನ್ನುಳಿದ ನಾಲ್ಕು ಘಟಕಗಳಿಂದ ವಿದ್ಯುತ್ ಉತ್ಪಾದನೆ ಮಾಡಲಾಗುತ್ತಿತ್ತು.
ಆದರೆ, ಕಲ್ಲಿದ್ದಲಿನ ಕೊರತೆ ಹೆಚ್ಚಾಗಿದ್ದರಿಂದ ವಿದ್ಯುತ್ ಉತ್ಪಾದಿಸುತ್ತಿದ್ದ ನಾಲ್ಕು ಘಟಕಗಳ ಪೈಕಿ ಮತ್ತೊಂದನ್ನು ಸ್ಥಗಿತಗೊಳಿಸಲಾಗಿದೆ. ಆರ್ಟಿಪಿಎಸ್ನಲ್ಲಿ ಒಟ್ಟು 8 ಘಟಕಗಳಿವೆ. ಇವುಗಳು 1760 ಮೆಗಾ ವ್ಯಾಟ್(MW) ವಿದ್ಯುತ್ ಉತ್ಪಾದಿಸುವ ಸಾಮರ್ಥ್ಯ ಹೊಂದಿವೆ.