ರಾಯಚೂರು:ಮಸ್ಕಿ ವಿಧಾನಸಭಾ ಕ್ಷೇತ್ರದ ಉಪಚುನಾವಣೆ ಪ್ರಚಾರಕ್ಕೆ ಬಂದಿರುವ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರು ಪಟ್ಟಣದ ದಲಿತರ ಮನೆಯಲ್ಲಿ ಉಪಹಾರ ಸೇವಿಸಿದ ಬಳಿಕ ಗಚ್ಚಿನಮಠಕ್ಕೆ ಆಗಮಿಸಿದ್ರು.
ಮಸ್ಕಿ ಉಪಚುನಾವಣೆ.. ಗಚ್ಚಿನಮಠಕ್ಕೆ ಭೇಟಿ ನೀಡಿದ ಸಿಎಂ ಯಡಿಯೂರಪ್ಪ! - ಗಚ್ಚಿನಮಠಕ್ಕೆ ಭೇಟಿ ನೀಡಿದ ಸಿಎಂ ಯಡಿಯೂರಪ್ಪ ಸುದ್ದಿ,
ಮಸ್ಕಿ ಉಪಚುನಾವಣೆ ರಂಗೇರಿದ್ದು, ಗಚ್ಚಿನಮಠಕ್ಕೆ ಸಿಎಂ ಯಡಿಯೂರಪ್ಪ ಭೇಟಿ ನೀಡಿದ್ದಾರೆ.
ಗಚ್ಚಿನಮಠಕ್ಕೆ ಭೇಟಿ ನೀಡಿದ ಸಿಎಂ ಯಡಿಯೂರಪ್ಪ
ಗಚ್ಚಿನಮಠದ ಪೀಠಾಧಿಪತಿ ಶ್ರೀ ರುದ್ರಮುನಿ ಶಿವಾಚಾರ್ಯ ಅವರನ್ನು ಸಿಎಂ ಭೇಟಿ ಮಾಡಿದ್ರು. ನಂತರ ಮಠವನ್ನ ವೀಕ್ಷಿಸಿ ಉಜ್ಜನಿ ಪೀಠದ ಪಂಚಪೀಠದ ಜಗದ್ಗುರು ಶ್ರೀ ಸಿದ್ದಲಿಂಗದೇಶಿ ಕೇಂದ್ರ ಭಗವಾತ್ಪಾದ ಶಿವಚಾರ್ಯ ಅವರನ್ನು ಭೇಟಿ ಮಾಡಿ ಆಶೀರ್ವಾದ ಪಡೆದರು. 10 ನಿಮಿಷಗಳ ಕಾಲ ಮಹಾಸ್ವಾಮಿಗಳೊಂದಿಗೆ ಚರ್ಚೆ ನಡೆಸಿ, ಮುದಗಲ್ ಪಟ್ಟಣಕ್ಕೆ ತೆರಳಿದ್ರು.