ಕರ್ನಾಟಕ

karnataka

ETV Bharat / state

ರಾಜ್ಯ ಸಚಿವ ಸಂಪುಟ ವಿಸ್ತರಣೆ ಬಗ್ಗೆ ಸಿಎಂ ಬೊಮ್ಮಾಯಿ ಮತ್ತು ಹೈಕಮಾಂಡ್​ ನಿರ್ಧಾರ: ಆರ್​ ಅಶೋಕ್​​ - ಈಟಿವಿ ಭಾರತ ಕನ್ನಡ

ರಾಜ್ಯ ಸಚಿವ ಸಂಪುಟ ವಿಸ್ತರಣೆಯಲ್ಲಿ ಸಚಿವ ಸ್ಥಾನವನ್ನು ಯಾರಿಗೆ ನೀಡಬೇಕು, ಯಾರಿಗೆ ಸೂಕ್ತ ಪ್ರಾತಿನಿಧ್ಯ ನೀಡಬೇಕು ಎನ್ನುವುದನ್ನು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ನಿರ್ಣಯ ಕೈಗೊಳ್ಳಲಿದ್ದಾರೆ ಎಂದು ಕಂದಾಯ ಸಚಿವ ಆರ್​ ಅಶೋಕ್​ ತಿಳಿಸಿದ್ದಾರೆ.

cm-bommai-and-high-command-will-decide-about-expansion-of-cabinet
ರಾಜ್ಯ ಸಚಿವ ಸಂಪುಟ ವಿಸ್ತರಣೆ ಬಗ್ಗೆ ಸಿಎಂ ಬೊಮ್ಮಾಯಿ ಮತ್ತು ಹೈಕಮಾಂಡ್​ ನಿರ್ಧಾರ : ಆರ್​ ಅಶೋಕ್​​

By

Published : Oct 16, 2022, 3:34 PM IST

ರಾಯಚೂರು: ರಾಜ್ಯದಲ್ಲಿ ಸಚಿವ ಸಂಪುಟ ವಿಸ್ತರಣೆ ಮಾಡುವ ಬಗ್ಗೆ ಮುಖ್ಯಮಂತ್ರಿಗಳು ಹಾಗೂ ಹೈಕಮಾಂಡ್ ನಿರ್ಧಾರ ಕೈಗೊಳ್ಳಲಿದೆ ಎಂದು‌ ಕಂದಾಯ ಸಚಿವ ಆರ್.ಅಶೋಕ್ ಹೇಳಿದ್ದಾರೆ.

ಜಿಲ್ಲೆಯ ಅರಕೇರಾ‌‌ರಲ್ಲಿ ಜಿಲ್ಲಾಧಿಕಾರಿಗಳ ನಡೆ, ಹಳ್ಳಿ ಕಡೆ ಕಾರ್ಯಕ್ರಮದಲ್ಲಿ ಗ್ರಾಮ ವಾಸ್ತವ್ಯ ಮಾಡಿ ಮಾಧ್ಯಮದವರೊಂದಿಗೆ ಮಾತನಾಡಿದರು. ಸಚಿವ ಸ್ಥಾನವನ್ನು ಯಾರಿಗೆ ನೀಡಬೇಕು, ಯಾರಿಗೆ ಸೂಕ್ತ ಪ್ರಾತಿನಿಧ್ಯ ನೀಡಬೇಕು ಎನ್ನುವುದನ್ನು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ನಿರ್ಣಯಿಸಲಿದ್ದಾರೆ ಎಂದು ಹೇಳಿದರು.

ರಾಯಚೂರಿನಲ್ಲಿ ಏಮ್ಸ್​ ಸ್ಥಾಪನೆಗೆ ಶ್ರಮ : ಏಮ್ಸ್ ರಾಯಚೂರಲ್ಲೇ ಸ್ಥಾಪಿಸುವ ಹೋರಾಟದ ಕುರಿತು ಪ್ರತಿಕ್ರಿಯೆ ನೀಡಿದ ಅವರು, ರಾಯಚೂರಲ್ಲೇ ಏಮ್ಸ್ ಸ್ಥಾಪನೆಯಾಗಬೇಕೆಂಬ ಬೇಡಿಕೆಯಿರುವುದು ಗಮನದಲ್ಲಿದೆ. ಸಿಎಂ ಅವರಿಗೆ ಹಾಗೂ ಕೇಂದ್ರ ನಾಯಕರಿಗೆ ಮನವರಿಕೆ ಮಾಡಿಕೊಡಲು ಪ್ರಯತ್ನಪಡಲಾಗುವುದು. ಹಾಗೆಯೇ ಏಮ್ಸ್ ಸ್ಥಾಪನೆಗೆ ಬೇಕಿರುವ ಮಾನದಂಡಗಳನ್ನು ಸವಲತ್ತುಗಳನ್ನು ಈಡೇರಿಸಲು ಸೂಕ್ತ ಗಮನಹರಿಸಲಾಗುವುದು ಎಂದು ತಿಳಿಸಿದರು.

ಭೂಮಿಯ ಕೊರತೆಯಿಂದ ಕಚೇರಿ ಸ್ಥಾಪನೆ ವಿಳಂಬ: ಈಗಾಗಲೇ ಹಲವು ವರ್ಷಗಳಿಂದ ಘೋಷಣೆಯಾದ ಮಸ್ಕಿ ಹಾಗೂ ಸಿರವಾರ ತಾಲೂಕುಗಳಿಗೆ ವಿವಿಧ ಕಚೇರಿಗಳ ಆರಂಭಕ್ಕೆ ಸರ್ಕಾರ ಕ್ರಮ‌ ಕೈಗೊಳ್ಳಲಿದೆ. ಭೂಮಿಯ ಕೊರತೆಯಿಂದ ಕಚೇರಿ ಸ್ಥಾಪನೆ ವಿಳಂಬವಾಗುತ್ತಿದೆ ಎಂದು ಸಮಜಾಯಿಸಿ ನೀಡಿದರು. ಬೆಳೆ ನಷ್ಟ ಪರಿಹಾರ ವಿತರಣೆಗೆ ಕ್ರಮ ಕೈಗೊಳ್ಳಲಾಗಿದೆ. ಮಳೆ ಹಾನಿ ಪ್ರದೇಶಗಳಿಗೆ ತೆರಳಿ ಹಾನಿ ಪರಿಶೀಲನೆ ನಡೆಸಲಾಗುವುದು ಎಂದು ತಿಳಿಸಿದರು.

ರಾಜ್ಯ ಸಚಿವ ಸಂಪುಟ ವಿಸ್ತರಣೆ ಬಗ್ಗೆ ಸಿಎಂ ಬೊಮ್ಮಾಯಿ ಮತ್ತು ಹೈಕಮಾಂಡ್​ ನಿರ್ಧಾರ : ಆರ್​ ಅಶೋಕ್​​

ಜನರ ಸಂಕಷ್ಟಗಳಿಗೆ ಸ್ಪಂದಿಸುವಲ್ಲಿ ಗ್ರಾಮವಾಸ್ತವ್ಯ ಯಶಸ್ವಿ: ಜಿಲ್ಲಾಧಿಕಾರಿಗಳ ಖಾತೆಯಲ್ಲಿ 200 ಕೋಟಿ ರೂಪಾಯಿ ಇದ್ದು ರಾಜ್ಯದಲ್ಲಿ ಹಣದ ಕೊರತೆಯಿಲ್ಲ. ಜನರ ಸಂಕಷ್ಟಗಳಿಗೆ ಸ್ಪಂದಿಸುವಲ್ಲಿ ಗ್ರಾಮ ವಾಸ್ತವ್ಯ ಯಶಸ್ವಿಯಾಗಿದೆ. 17000 ಅರ್ಜಿಗಳನ್ನು ಪರಿಹರಿಸಲಾಗಿದೆ. ನೆರೆಯ ಜಿಲ್ಲೆಯವರೂ ಮನವಿ ಹಿಡಿದು ಬಂದಿದ್ದರು. ಇದು ಈ ಕಾರ್ಯಕ್ರಮದ ಮಹತ್ವ ಸಾರಿ ಹೇಳಿದೆ ಎಂದರು.

ಇನ್ನು ಅರಕೇರಾದಲ್ಲಿನ ಹಿಂದುಳಿದ ವರ್ಗ‌ಹಾಗೂ ಅಲ್ಪಸಂಖ್ಯಾತರ ವಿದ್ಯಾರ್ಥಿಗಳ ಮೆಟ್ರಿಕ್ ವಸತಿ‌ ನಿಲಯದಲ್ಲಿ ಭೋಜನ ಸೇವಿಸಿ, ರಾತ್ರಿ ಅಲ್ಲಿಯೇ ಮಲಗುವ ಮೂಲಕ‌ ಸಚಿವರು ವಾಸ್ತವ್ಯ ಮಾಡಿದರು.

ಇದನ್ನೂ ಓದಿ :ಮೀನು ಸಸ್ಯಾಹಾರಿ, ತಿನ್ನೋರು ಮಾಂಸಹಾರಿ.. ಒಂದು ಸಾವಿರ ಮೀನುಗಾರರ ಸಂಘಗಳಿಗೆ ಸಹಾಯಧನ- ಸಿಎಂ ಬೊಮ್ಮಾಯಿ

ABOUT THE AUTHOR

...view details