ಕರ್ನಾಟಕ

karnataka

ETV Bharat / state

ತಮ್ಮ ಮಗನ ಸಾವಿಗೆ ಪೊಲೀಸರೇ ಕಾರಣ ಆರೋಪ: ಕಲ್ಲು ತೂರಿ ಪೋಷಕರ ಆಕ್ರೋಶ - ಗಣೇಶ ವಿಸರ್ಜನೆ

ಪೊಲೀಸರು ನಡೆಸಿದ ಹಲ್ಲೆಯಿಂದ ಮಗ ಸಾವನ್ನಪ್ಪಿದ್ದಾನೆ ಎಂದು ಆರೋಪಿಸಿ ಮೃತನ ಪೋಷಕರು ಪೊಲೀಸರ ವಾಹನದ ಮೇಲೆ ಕಲ್ಲು ತೂರಾಟ ನಡೆಸಿ ಆಕ್ರೋಶ ಹೊರಹಾಕಿದ ಘಟನೆ ನಡೆದಿದೆ.

ಕಲ್ಲು ತೂರಾಟ ನಡೆಸಿ ಆಕ್ರೋಶ ಹೊರಹಾಕಿರುವ ಮೃತನ ಪೋಷಕರು ಹಾಗೂ ಗ್ರಾಮಸ್ಥರು

By

Published : Sep 15, 2019, 8:55 PM IST

Updated : Sep 15, 2019, 9:39 PM IST

ರಾಯಚೂರು: ಪೊಲೀಸರು ನಡೆಸಿದ ಹಲ್ಲೆಯಿಂದ ತಮ್ಮ ಮಗ ಮೃತಪಟ್ಟಿದ್ದಾನೆಂದು ಆರೋಪಿಸಿ ಮೃತನ ಪೋಷಕರು ಹಾಗೂ ಗ್ರಾಮಸ್ಥರು ಕಲ್ಲು ತೂರಾಟ ನಡೆಸಿ ಆಕ್ರೋಶ ಹೊರಹಾಕಿರುವ ಘಟನೆ ಜಿಲ್ಲೆಯ ದೇವದುರ್ಗ ತಾಲೂಕಿನ ಗಬ್ಬೂರು ಗ್ರಾಮದಲ್ಲಿ ನಡೆದಿದೆ.

ಕಲ್ಲು ತೂರಾಟ ನಡೆಸಿ ಆಕ್ರೋಶ ಹೊರಹಾಕಿರುವ ಮೃತನ ಪೋಷಕರು ಹಾಗೂ ಗ್ರಾಮಸ್ಥರು

ಶಿವು ಅಬಕಾರಿ ಎಂಬಾತ ಮೃತ ವ್ಯಕ್ತಿ. ಇತ್ತೀಚೆಗೆ ಗಬ್ಬೂರು ಗ್ರಾಮದಲ್ಲಿ ನಡೆದ ಗಣೇಶ ನಿಮಜ್ಜನದ ವೇಳೆ ಶಿವುನ ಬೈಕ್‌‌ನ್ನು ಪೊಲೀಸರು ತೆಗೆದುಕೊಂಡು ಹೋಗಿದ್ದರು. ಆದರೆ ಆ ಬೈಕನ್ನು ಪುನಃ​ ತರಲೆಂದು ಠಾಣೆಗೆ ಹೋದಾಗ ಅಲ್ಲಿ ಪಿಎಸ್​ಐ ಹಾಗೂ ಪೊಲೀಸರು ಆತನ ಮೇಲೆ ಹಲ್ಲೆ ನಡೆಸಿದ್ದಾರೆ. ಇದರಿಂದ ಆತ ಸಾವನ್ನಪ್ಪಿದ್ದಾನೆಂದು ಆರೋಪಿಸಿ ಆತನ ಪೋಷಕರು ಹಾಗೂ ಗ್ರಾಮಸ್ಥರು ಪೊಲೀಸರ ವಾಹನದ ಮೇಲೆ ಕಲ್ಲು ತೂರಾಟ ನಡೆಸಿ, ರಾಜ್ಯ ಹೆದ್ದಾರಿ ಮೇಲೆ ಟೈರ್​ಗೆ ಬೆಂಕಿ ಹಚ್ಚಿ ಆಕ್ರೋಶ ಹೊರಹಾಕಿದ್ದಾರೆ. ಸದ್ಯ ಘಟನೆಯಿಂದ ಗ್ರಾಮದಲ್ಲಿ ಉದ್ರಿಕ್ತ ವಾತಾವರಣ ‌ನಿರ್ಮಾಣಗೊಂಡಿದೆ.

Last Updated : Sep 15, 2019, 9:39 PM IST

ABOUT THE AUTHOR

...view details