ಕರ್ನಾಟಕ

karnataka

ETV Bharat / state

ಚರ್ಚ್​ಗೆ ನೀಡಲಾದ ಅನುದಾನ ವಿಚಾರಕ್ಕೆ ಜಗಳ: ಇಬ್ಬರಿಗೆ ಚಾಕು ಇರಿತ - ಚಾಕು ಇರಿತ

ಚರ್ಚ್​ಗೆ ನೀಡಲಾದ ಅನುದಾನ ವಿಚಾರಕ್ಕೆ ಒಳಜಗಳ ಪ್ರಾರಂಭವಾಗಿ, ಚರ್ಚಿನ ಡಿ.ಎಸ್ ಥಾಮಸ್ ಎಂಬುವವರು ಚಿಕ್ಕಯ್ಯ ಹಾಗೂ ಪ್ರಸಾದ್‌ ಅವರ ಮೇಲೆ ಮಾರಕಾಸ್ತ್ರಗಳಿಂದ ಹಲ್ಲೆ ಮಾಡಿದ್ದಾರೆ ಎಂದು ಆರೋಪಿಸಲಾಗಿದೆ.

two stabbed in Raichur
ಚಿಕ್ಕಯ್ಯ ಹಾಗೂ ಪ್ರಸಾದ್‌ ಹಲ್ಲೆಗೊಳಗಾದವರು

By

Published : Aug 1, 2022, 11:19 AM IST

ರಾಯಚೂರು: ಚರ್ಚ್​ ಅಭಿವೃದ್ಧಿಗೆ ಸರ್ಕಾರದಿಂದ ಬಿಡುಗಡೆಯಾದ ಅನುದಾನ ವಿಚಾರಕ್ಕೆ ಗಲಾಟೆಯಾಗಿ ಇಬ್ಬರ ಮೇಲೆ ಚಾಕುವಿನಿಂದ ಹಲ್ಲೆ ಮಾಡಿರುವ ಆರೋಪ‌ ಕೇಳಿ ಬಂದಿದೆ. ಚಿಕ್ಕಯ್ಯ ಹಾಗೂ ಪ್ರಸಾದ್‌ ಹಲ್ಲೆಗೊಳಗಾದವರು.

ಚಿಕ್ಕಯ್ಯ ಹಾಗೂ ಪ್ರಸಾದ್‌ ಹಲ್ಲೆಗೊಳಗಾದವರು

ಸರ್ಕಾರದಿಂದ ತಾಲೂಕಿನ ಗಟ್ಟುಬಿಚ್ಚಾಲಿ ಗ್ರಾಮದ ಮೆಥೋಡಿಸ್ಟ್ ಚರ್ಚ್​ ಅಭಿವೃದ್ಧಿಗೆ 20 ಲಕ್ಷಕ್ಕೂ ಅಧಿಕ ಹಣ ಮಂಜೂರಾಗಿದೆ. ಈ ಅನುದಾನದಲ್ಲಿ ಚರ್ಚ್​ನ ಫಾದರ್ ಬೆದರಿಕೆ ಹಾಕಿ 2 ಲಕ್ಷ ರೂ. ದುರುಪಯೋಗಪಡಿಸಿಕೊಂಡಿದ್ದಾರೆ ಎನ್ನಲಾಗಿದೆ. ಇದನ್ನು ಪ್ರಶ್ನಿಸಲು ಹೋದ ಪ್ರಸಾದ್ ಮತ್ತು ಚಿಕ್ಕಯ್ಯ ಅವರ ಮೇಲೆ ಥಾಮಸ್ ಮಾರಕಾಸ್ತ್ರಗಳಿಂದ ಹಲ್ಲೆ ಮಾಡಿ ಗಾಯಗೊಳಿಸಿದ್ದಾರೆ ಎಂದು ದೂರಲಾಗಿದೆ. ಘಟನೆಯ ಕುರಿತು ಯರಗೇರಾ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಹಲ್ಲೆಗೊಳಗಾದ ಇಬ್ಬರು ಸದ್ಯ ರಿಮ್ಸ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ಇದನ್ನೂ ಓದಿ:ರಸ್ತೆಯಲ್ಲಿ ಸಿಕ್ಕ ಸಿಕ್ಕವರ ಮೇಲೆ ಚಾಕು ಬೀಸಿ ಯುವಕನ ಹುಚ್ಚಾಟ: 8 ಜನರಿಗೆ ಗಾಯ, ಆರೋಪಿ ವಶಕ್ಕೆ

ABOUT THE AUTHOR

...view details