ಕರ್ನಾಟಕ

karnataka

ETV Bharat / state

ರಾಯಚೂರಿನಲ್ಲಿ ರಾಜಕೀಯ ಪಕ್ಷಗಳ ಬೆಂಬಲಿಗರ ಗಲಾಟೆ, ಇಬ್ಬರಿಗೆ ಗಾಯ - ಈಟಿವಿ ಭಾರತ ಕನ್ನಡ

ಎರಡು ರಾಜಕೀಯ ಪಕ್ಷಗಳ ಬೆಂಬಲಿಗರ ನಡುವೆ ರಾಯಚೂರಿನಲ್ಲಿ ಗಲಾಟೆ ನಡೆದಿದೆ.

clash-between-two-party-supporters-in-raichur
ರಾಯಚೂರು : ಎರಡು ಪಕ್ಷಗಳ ಬೆಂಬಲಿಗರ ನಡುವೆ ಗಲಾಟೆ

By

Published : Apr 10, 2023, 6:20 PM IST

ರಾಯಚೂರು : ವಾಟ್ಸ್‌ಆ್ಯಪ್ ಗ್ರೂಪ್​ನಲ್ಲಿ ಸಂದೇಶ ರವಾನಿಸಿದ​ ವಿಚಾರಕ್ಕೆ ಎರಡು ರಾಜಕೀಯ ಪಕ್ಷಗಳ ಬೆಂಬಲಿಗರ ನಡುವೆ ಗಲಾಟೆ ನಡೆದಿರುವ ಘಟನೆ ರಾಯಚೂರಿನ ಅದ್ರೂನ್ ಕಿಲ್ಲಾ ಏರಿಯಾದಲ್ಲಿಂದು ನಡೆದಿದೆ. ದುಷ್ಕರ್ಮಿಗಳು ಮಾರಕಾಸ್ತ್ರಗಳಿಂದ ಹಲ್ಲೆ ನಡೆಸಿದ್ದು, ಇಬ್ಬರು ಗಾಯಗೊಂಡಿದ್ದಾರೆ. ಗಾಯಾಳುಗಳನ್ನು ರಫಿ, ವಾಸಿಂ ಎಂದು ಗುರುತಿಸಲಾಗಿದೆ. ಇಬ್ಬರಿಗೂ ರಿಮ್ಸ್​​ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.

ವ್ಯಕ್ತಿಯೋರ್ವ ಶಾಸಕರಿಗೆ ಬೆಂಬಲ ವ್ಯಕ್ತಪಡಿಸುವ ರೀತಿಯಲ್ಲಿ ವಾಟ್ಸ‌್‌ಆ್ಯಪ್ ಗ್ರೂಪ್​ನಲ್ಲಿ ಸಂದೇಶ ಮತ್ತು ಸ್ಟೇಟಸ್‌ ಹಾಕಿಕೊಂಡಿದ್ದ ಎನ್ನಲಾಗಿದೆ. ಈ ಹಿನ್ನೆಲೆಯಲ್ಲಿ ಆತನ ಮೇಲೆ ಕೆಲವು ದುಷ್ಕರ್ಮಿಗಳು ಹಲ್ಲೆ ನಡೆಸಿದ್ದಾರೆ ಎಂದು ಹೇಳಲಾಗಿದೆ. ಘಟನೆ ಸಂಬಂಧ ಎರಡು ಪತ್ಯೇಕ ಪ್ರಕರಣ ದಾಖಲಾಗಿದ್ದು, 22 ಜನರ ವಿರುದ್ಧ ಸದರ್‌ಬಜಾರ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಇದನ್ನೂ ಓದಿ :ತಾಯಿ ಮೇಲೆ ನಿರಂತರ ಹಲ್ಲೆ: ಪ್ರಶ್ನಿಸಿದ ಮಗನಿಗೆ ವಿಷವುಣಿಸಿ ಹತ್ಯೆಗೈದ ತಂದೆ

ABOUT THE AUTHOR

...view details