ರಾಯಚೂರು:ಹಾಸ್ಟೆಲ್ ಕಾರ್ಮಿಕರ ಮಾದರಿಯಲ್ಲಿ ಬಿಸಿಯೂಟ ಕಾರ್ಮಿಕರ ಸಂಬಳವನ್ನ 11,790 ರೂ.ಗೆ ಹೆಚ್ಚಿಸಬೇಕು. ಹಾಗೆಯೇ ಮೇಲಾಧಿಕಾರಿಗಳ ಕಿರುಕುಳ ತಪ್ಪಿಸಬೇಕೆಂದು ಕರ್ನಾಟಕ ರಾಜ್ಯ ಬಿಸಿಯೂಟ ನೌಕರರ ಸಂಘ (ಸಿಐಟಿಯು ಸಂಯೋಜಿತ) ಒತ್ತಾಯಿಸಿದೆ.
ಈ ಕುರಿತು ಜಿಲ್ಲಾಧ್ಯಕ್ಷ ಜಿ.ಅಮರೇಶ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಬಿಸಿಯೂಟ ಯೋಜನೆಯಡಿ ದುಡಿಯುತ್ತಿರುವವರ ಪೈಕಿ ಶೇ.80 ರಷ್ಟು ಮಹಿಳೆಯರಿದ್ದು, ಹಿಂದುಳಿದ ಮತ್ತು ಕೆಳಸ್ಥರದ ವರ್ಗದವರಾಗಿದ್ದು, ಅವರಿಗೆ ನೀಡುತ್ತಿರುವ ವೇತನ ಕುಟುಂಬ ನಿರ್ವಹಣೆಗೆ ಸಾಕಾಗುತ್ತಿಲ್ಲ ಎಂದು ದೂರಿದರು.