ರಾಯಚೂರು: ಎಂಜಿನಿಯರಿಂಗ್ ವಿದ್ಯಾರ್ಥಿನಿ ನಿಗೂಢ ಸಾವು ಪ್ರಕರಣ ಸಂಬಂಧಿಸಿದಂತೆ ಸಿಐಡಿ ಅಧಿಕಾರಿಗಳು ಆರೋಪಿ ಸುದರ್ಶನ್ ಯಾದವ್ ಮನೆಯಲ್ಲಿ ಪರಿಶೀಲನೆ ನಡೆಸಿದರು.
ನಗರದ ತಿಮ್ಮಾಪುರ ಪೇಟೆಯಲ್ಲಿರುವ ಸುದರ್ಶನ್ ಯಾದವ್ ಮನೆಯಲ್ಲಿ ಸಿಐಡಿ ಅಧಿಕಾರಿಗಳು ಪರಿಶೀಲನೆ ನಡೆಸಿದರು. ಆತನ ಮನೆ ಮತ್ತು ನೆರೆ ಹೊರೆಯವರಿಂದಲೂ ಅಗತ್ಯ ಮಾಹಿತಿ ಕಲೆ ಹಾಕಿದರು.
ಎಂಜಿನಿಯರಿಂಗ್ ವಿದ್ಯಾರ್ಥಿನಿ ಇದಾದ ಬಳಿಕ ಶವ ಪತ್ತೆಯಾದ ಸ್ಥಳಕ್ಕೂ ಆರೋಪಿಯನ್ನ ಕರೆದೊಯ್ದು ವಿಚಾರಣೆ ನಡೆಸಿದ್ದಾರೆ.
ಶವವಾಗಿ ಪತ್ತೆಯಾದ ರಾಯಚೂರಿನ ಎಂಜಿನಿಯರಿಂಗ್ ವಿದ್ಯಾರ್ಥಿನಿಯ ಸಾವು ಇನ್ನೂ ನಿಗೂಢವಾಗಿದೆ. ವಿದ್ಯಾರ್ಥಿನಿ ಸಾವಿನ ಸುತ್ತ ಹಲವು ಅನುಮಾನಗಳು ಹುತ್ತ ಹುಟ್ಟಿಕೊಂಡಿದೆ. ರಾಜ್ಯದೆಲ್ಲೆಡೆ ಸಾಕಷ್ಟು ಸುದ್ದಿ ಮಾಡಿರುವ ವಿದ್ಯಾರ್ಥಿನಿಯ ಸಾವಿನ ರಹಸ್ಯ ಭೇದಿಸಲು ತನಿಖಾಧಿಕಾರಿಗಳು ತನಿಖೆ ಚುರುಕುಗೊಳಿಸಿದ್ದಾರೆ.