ಕರ್ನಾಟಕ

karnataka

ETV Bharat / state

ಪೋಷಕರಿಂದಲೇ ಬಾಲಕಿಗೆ ಮದುವೆ ನಿಶ್ಚಯ: ಬಾಲ್ಯ ವಿವಾಹಕ್ಕೆ ಅಧಿಕಾರಿಗಳಿಂದ ಬಿತ್ತು ಬ್ರೇಕ್​ - undefined

ಅಪ್ರಾಪ್ತ ವಯಸ್ಸಿನ ಪುತ್ರಿಗೆ ಪೋಷಕರೇ ವಿವಾಹ ನಿಶ್ಚಯಿಸಿದ್ದರು. ಆದ್ರೆ ಸಿಡಿಪಿಒ ಹಾಗೂ ಲಿಂಗಸುಗೂರು ಪೊಲೀಸರು ಈ ಮದುವೆಯನ್ನು ತಡೆಯುವಲ್ಲಿ ಯಶಸ್ವಿಯಾಗಿದ್ದಾರೆ.

ತಡದು ಮುಚ್ಚಳಿಕೆ ಬರೆಸಿಕೊಂಡ ಅಧಿಕಾರಿಗಳು

By

Published : May 27, 2019, 7:25 PM IST

ರಾಯಚೂರು: ಇತ್ತೀಚೆಗಷ್ಟೇ ಎಸ್​ಎಸ್ಎಲ್​ಸಿ ಮುಗಿಸಿದ್ದ ಅಪ್ರಾಪ್ತ ವಯಸ್ಸಿನ ಮಗಳನ್ನು ಪೋಷಕರೇ ವಿವಾಹ ಮಾಡಲು ನಿಶ್ಚಯಿಸಿದ್ದರು. ಆದ್ರೆ ಪೋಷಕರನ್ನು ತಡೆದ ಸಿಡಿಪಿಒ ಹಾಗೂ ಲಿಂಗಸುಗೂರು ಪೊಲೀಸರು ಬಾಲಕಿಯ ಪೋಷಕರಿಂದ ಮುಚ್ಚಳಿಕೆ ಪತ್ರ ಬರೆಸಿಕೊಂಡಿದ್ದಾರೆ.

ಲಿಂಗಸುಗೂರು ತಾಲೂಕಿನ‌ ಕಾಳಪುರ ಗ್ರಾಮದಲ್ಲಿ ಈ ಘಟನೆ ನಡೆದಿದೆ. ಬಾಲಕಿಗೆ ಮದುವೆ ಮಾಡಲು ನಿಶ್ಚಯಿಸಿದ್ದನ್ನು ಖಚಿತಪಡಿಸಿಕೊಂಡ ಶಿಶು ಅಭಿವೃದ್ಧಿ ಇಲಾಖೆಯ ಅಧಿಕಾರಿಗಳು ಈ ಬಾಲ್ಯ ವಿವಾಹ ತಡೆದಿದ್ದಾರೆ.

ತಂದೆ ಚೆನ್ನಬಸ್ಸಪ್ಪ ಅವರಿಂದ ಮುಚ್ಚಳಿಕೆ ಬರೆಸಿಕೊಂಡ ಎಎಸ್ಐ ಗದ್ದೆಪ್ಪ

ಬಾಲಕಿಯ ವಿವಾಹದ ವಿಷಯವನ್ನು ಖಚಿತಪಡಿಸಿಕೊಂಡ ಸಿಡಿಪಿಒ ಅಧಿಕಾರಿಗಳು ಹಾಗೂ ಲಿಂಗಸುಗೂರು ಪೊಲೀಸ್ ಠಾಣೆಯ ಎಎಸ್ಐ ಗದ್ದೆಪ್ಪ ಅವರು ಧಿಡೀರ್​​​ ಭೇಟಿ ನೀಡಿ ಪೋಷಕರಿಗೆ ಬೆವರಿಳಿಸಿದ್ದಾರೆ. ಅಲ್ಲದೆ, ಸದ್ಯ ವಿವಾಹವನ್ನು ನಿಲ್ಲಿಸಿದ ಎಎಸ್ಐ ಗದ್ದೆಪ್ಪ ಅವರು ಬಾಲ್ಯ ವಿವಾಹ ಕಾನೂನು ಪ್ರಕಾರ ತಪ್ಪು ಅನ್ನೋದನ್ನು ಪೋಷಕರಿಗೆ ಮನವರಿಕೆ ಮಾಡಿಕೊಟ್ಟು, ಅವರಿಂದ ಮುಚ್ಚಳಿಕೆ ಬರೆಸಿಕೊಂಡಿದ್ದಾರೆ.

For All Latest Updates

TAGGED:

ABOUT THE AUTHOR

...view details