ಕರ್ನಾಟಕ

karnataka

ETV Bharat / state

ಅಪ್ರಾಪ್ತ ವಯಸ್ಸಿನಲ್ಲೇ ಯುವಕನೊಂದಿಗೆ ಮದುವೆ.. ದೇವದುರ್ಗದಲ್ಲಿ ಬಾಲ್ಯವಿವಾಹಕ್ಕೊಳಗಾದ ಬಾಲಕಿ ಗರ್ಭಿಣಿ - ಅಪ್ರಾಪ್ತ ವಯಸ್ಸಿನಲ್ಲೇ ಯುವಕನೊಂದಿಗೆ ಮದುವೆ

2021ರಲ್ಲಿ ದೇವದುರ್ಗ ತಾಲೂಕಿನ ಅಪ್ರಾಪ್ತ ಬಾಲಕಿಗೆ ಯುವಕನೊಂದಿಗೆ ವಿವಾಹ ಮಾಡಲಾಗಿತ್ತು. 25 ವರ್ಷದ ಯುವಕನೊಂದಿಗೆ ಬಾಲಕಿಗೆ ಗ್ರಾಮವೊಂದರ ದೇವಾಲಯದಲ್ಲಿ ಬಾಲ್ಯ ವಿವಾಹ ನಡೆದಿತ್ತು. ಆದರೆ ವಿವಾಹ ನಡೆದಿರುವುದು ಇತ್ತೀಚೆಗೆ ಬೆಳಕಿಗೆ ಬಂದಿದೆ.

Child marriage in Devadurga: File a complaint
ದೇವದುರ್ಗದಲ್ಲಿ ಬಾಲ್ಯವಿವಾಹ: ದೂರು ದಾಖಲು

By

Published : Dec 3, 2022, 12:54 PM IST

ರಾಯಚೂರು: ದೇವದುರ್ಗ ತಾಲೂಕಿನ ಬಾಲ್ಯವಿವಾಹ ನಡೆದಿರುವ ಪ್ರಕರಣ ತಡವಾಗಿ ಬೆಳಕಿಗೆ ಬಂದಿದೆ. ಈ ಸಂಬಂಧ ಅಪ್ರಾಪ್ತೆಯ ಪತಿ ಹಾಗೂ ಆತನ ಪೋಷಕರ ವಿರುದ್ಧ ಪ್ರಕರಣ ದಾಖಲಾಗಿದೆ.

2021ರಲ್ಲಿ ದೇವದುರ್ಗ ತಾಲೂಕಿನ ಅಪ್ರಾಪ್ತ ಬಾಲಕಿಗೆ ಯುವಕನೊಂದಿಗೆ ವಿವಾಹ ಮಾಡಲಾಗಿತ್ತು. 25 ವರ್ಷದ ಯುವಕನೊಂದಿಗೆ ಬಾಲಕಿಗೆ ಗ್ರಾಮವೊಂದರ ದೇವಾಲಯದಲ್ಲಿ ಬಾಲ್ಯ ವಿವಾಹ ನಡೆದಿತ್ತು. ಆದರೆ ವಿವಾಹ ನಡೆದಿರುವುದು ಇತ್ತೀಚೆಗೆ ಬೆಳಕಿಗೆ ಬಂದಿದೆ.

ವಿವಾಹದ ನಂತರ ಬಾಲಕಿಯನ್ನು ಪತಿ ಜೊತೆ ಬೆಂಗಳೂರಿಗೆ ದುಡಿಯಲು ಕಳುಹಿಸಲಾಗಿತ್ತು. ಇತ್ತೀಚೆಗೆ ಈ ವಿಚಾರವು ಪೊಲೀಸರಿಗೆ ತಿಳಿದಿದ್ದು, ಬಾಲಕಿಯನ್ನು ರಕ್ಷಣೆ ಮಾಡಿ ಬೆಂಗಳೂರಿನಿಂದ ಕರೆತರಲಾಗಿದೆ. ಸದ್ಯ ಬಾಲಕಿಯು ಗರ್ಭಿಣಿಯಾಗಿದ್ದಾಳೆ ಎಂದು ಪೊಲೀಸರು ತಿಳಿಸಿದ್ದಾರೆ.

ಈ ಬಗ್ಗೆ ಬಾಲಕಿಯ ದೂರಿನ ಮೇರೆಗೆ ಯುವಕ ಹಾಗೂ ಆತನ ಪೋಷಕರ ವಿರುದ್ಧ ದೇವದುರ್ಗ ಪೊಲೀಸ್​ ಠಾಣೆಯಲ್ಲಿ ಪೋಕ್ಸೋ ಪ್ರಕರಣ ದಾಖಲಾಗಿದೆ. ಈ ಬಗ್ಗೆ ಸಂಬಂಧಪಟ್ಟವರ ವಿಚಾರಣೆ ನಡೆಸಲಾಗುತ್ತಿದೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.

ಇದನ್ನೂ ಓದಿ;ರಾಜಕೀಯ ದ್ವೇಷಕ್ಕೆ ಟಿಎಂಸಿ ಮುಖಂಡನ ಮನೆ ಉಡೀಸ್​.. ಬಾಂಬ್​ ಸ್ಫೋಟಕ್ಕೆ ಮೂವರು ಬಲಿ

ABOUT THE AUTHOR

...view details