ರಾಯಚೂರು: ರಾಯಚೂರು ಜಿಲ್ಲೆಯ ಪಾರ್ವತಮ್ಮ ಎಂಬ ಅಜ್ಜಿ ನೂರು ವರ್ಷಗಳ ಕಾಲ ಬದುಕಿ ಶತಾಯುಷಿಯಾಗಿ ನಿಧನ ಹೊಂದಿದ್ದಾರೆ.
ಬದುಕಿನ ಯಾತ್ರೆ ಮುಗಿಸಿದ ಶತಾಯುಷಿ ಅಜ್ಜಿ - undefined
ಕುರಕುಂದಾ ಗ್ರಾಮದ ಪಾರ್ವತಮ್ಮ ಎಂಬುವವರು105 ವರ್ಷಗಳ ಕಾಲ ಬದುಕಿದ್ದು, ಶುಕ್ರವಾರ ವಿಧಿವಶರಾಗಿದ್ದಾರೆ.
![ಬದುಕಿನ ಯಾತ್ರೆ ಮುಗಿಸಿದ ಶತಾಯುಷಿ ಅಜ್ಜಿ](https://etvbharatimages.akamaized.net/etvbharat/prod-images/768-512-3563985-thumbnail-3x2-rychrjpg.jpg)
ಪಾರ್ವತಮ್ಮ
ಜಿಲ್ಲೆಯ ಸಿಂಧನೂರು ತಾಲೂಕಿನ ಕುರಕುಂದಾ ಗ್ರಾಮದ ಪಾರ್ವತಮ್ಮ ಕಾಸರೆಡ್ಡಿ(105) ದೈವಾದೀನರಾಗಿದ್ದಾರೆ. ಶತಾಯುಷಿಗೆ ಐದು ಜನ ಹೆಣ್ಣು ಮಕ್ಕಳು, ನಾಲ್ವರು ಪುತ್ರರು, ಮರಿ ಮಕ್ಕಳು, ಮೊಮ್ಮಕಳು ಸೇರಿದಂತೆ ಅಪಾರ ಬಂಧು ಬಳಗವಿದ್ದು, ಅವರೆಲ್ಲರನ್ನು ಅಗಲಿದ್ದಾರೆ. ೧೦೦ ವರ್ಷಕ್ಕೂ ಹೆಚ್ಚು ಕಾಲ ಜೀವಿಸಿದ್ದು, ಯಾವುದೇ ಅನಾರೋಗ್ಯದಿಂದ ಬಳಲದೇ ಸಹಜವಾಗಿಯೇ ನಿಧನರಾಗಿದ್ದಾರೆ.
ಅಜ್ಜಿಯನ್ನ ಕಳೆದುಕೊಂಡ ಕುಟುಂಬಸ್ಥರಲ್ಲಿ ದುಃಖ ಆವರಿಸಿದೆ.
Last Updated : Jun 15, 2019, 12:11 PM IST