ಕರ್ನಾಟಕ

karnataka

ETV Bharat / state

40 ವರ್ಷ ಸ್ವಾಭಿಮಾನದ ರಾಜಕಾರಣ ಮಾಡಿರುವೆ, ಯಾರಿಗೂ ತಲೆ ಬಾಗಿಲ್ಲ: ಸಿದ್ದರಾಮಯ್ಯ - Caste system is rooted in today's society

ನಾನು ಕುರುಬ ಸಮಾಜದ ವಿರೋಧಿ ಅಲ್ಲ. ಆದರೆ ನನಗೆ ಮೀಸಲಾತಿ ಪಾಠ ಹೇಳಲು ಬರುತ್ತಿದ್ದಾರೆ. ನನ್ನ 40 ವರ್ಷಗಳ ರಾಜಕೀಯದಲ್ಲಿ ನಾನು ಯಾರಿಗೂ ತಲೆ ಬಾಗಿಲ್ಲ. ಸ್ವಾಭಿಮಾನದಿಂದ ಕಾರ್ಯನಿರ್ವಹಿಸಿದ್ದೇನೆ. ಮುಖ್ಯಮಂತ್ರಿಯಾಗಿದ್ದ ಸಮಯದಲ್ಲಿ ಭ್ರಷ್ಟಾಚಾರ ಮುಕ್ತ ಸರ್ಕಾರ ನೀಡಿದ ನೆಮ್ಮದಿ ನನಗಿದೆ ಎಂದು ಸಿದ್ದರಾಮಯ್ಯ ಹೇಳಿದರು.

ಸಿದ್ದರಾಮಯ್ಯ
ಸಿದ್ದರಾಮಯ್ಯ

By

Published : Jan 12, 2021, 6:30 PM IST

ರಾಯಚೂರು:ಇಂದಿಗೂ ಸಮಾಜದಲ್ಲಿ ಜಾತಿ ವ್ಯವಸ್ಥೆ ಬೇರೂರಿದೆ. ವರ್ಣ ವ್ಯವಸ್ಥೆಯಿಂದ ಜಾತಿ ಅಳಿಯಲು ಸಾಧ್ಯವಿಲ್ಲ, ನಾವೆಲ್ಲಾ ಶೂದ್ರರು. ನಾವು ಸ್ವಾಭಿಮಾನಿಗಳಾಗಲು ಶಿಕ್ಷಿತರಾಗಬೇಕು ಎಂದು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದರು.

ಕಾಗಿನೆಲೆ ಗುರು ಪೀಠದ ತಿಂಥಣಿ ಬ್ರಿಡ್ಜ್​ನಲ್ಲಿ ಆಯೋಜಿಸಿದ್ದ ಹಾಲುಮತ ಸಂಸ್ಕೃತಿ ವೈಭವ 2021 ಉದ್ಘಾಟಿಸಿ ಮಾತನಾಡಿದ ಅವರು, ಸಮಾಜ ಅಭಿವೃದ್ಧಿ ಹೊಂದಬೇಕಾದ್ರೆ ಮೊದಲು ನಾವು ಶಿಕ್ಷಿತರಾಗಬೇಕು, ಶಿಕ್ಷಣದಿಂದಲೇ ಅಭಿವೃದ್ಧಿ ಸಾಧ್ಯ ಎಂಬುದನ್ನು ನಾವು ಅರಿಯಬೇಕು. ಆಗ ಮಾತ್ರ ನಾವು ಸ್ವಾಭಿಮಾನಿಗಳಾಗಿ ಬದುಕಲು ಸಾಧ್ಯ ಎಂದರು.

ನಾನು ಕುರುಬ ಸಮಾಜದ ವಿರೋಧಿ ಅಲ್ಲ. ಆದರೆ ನನಗೆ ಮೀಸಲಾತಿ ಪಾಠ ಹೇಳಲು ಬರುತ್ತಿದ್ದಾರೆ. ನನ್ನ 40 ವರ್ಷಗಳ ರಾಜಕೀಯದಲ್ಲಿ ನಾನು ಯಾರಿಗೂ ತಲೆ ಬಾಗಿಲ್ಲ. ಸ್ವಾಭಿಮಾನದಿಂದ ಕಾರ್ಯನಿರ್ವಹಿಸಿದ್ದೇನೆ, ಮುಖ್ಯಮಂತ್ರಿಯಾಗಿದ್ದ ಸಮಯದಲ್ಲಿ ಭ್ರಷ್ಟಾಚಾರ ಮುಕ್ತ ಸರ್ಕಾರ ನೀಡಿದ ನೆಮ್ಮದಿ ನನಗಿದೆ ಎಂದರು.

ಹಾಲುಮತ ಸಂಸ್ಕೃತಿ ವೈಭವ 2021 ಕಾರ್ಯಕ್ರಮ

ಶಾಸಕ ರಾಘವೇಂದ್ರ ಹಿಟ್ನಾಳ ಮಾತನಾಡಿ, ಉಡುಪಿಯಲ್ಲಿ ಕನಕ ಗೋಪುರ ಒಡೆದಾಗ ಈಶ್ವರಪ್ಪ ಎಲ್ಲಿದ್ದರು? ಆಗ ಹೋರಾಟಕ್ಕೆ ಕರೆದಾಗ ಇದು ಕುರಬರಿಗೆ ಸೀಮಿತ ಎಂದಿದ್ದ ಅವರು, ಇಂದು ಎಸ್​ಟಿ ಹೋರಾಟ ನಡೆಸುತ್ತಿದ್ದಾರೆ. ಈಶ್ವರಪ್ಪ ಸಚಿವರಾಗಿದ್ದಾಗಲೇ ಸಚಿವ ಸಂಪುಟದಲ್ಲಿ ಚರ್ಚಿಸಿ ಎಸ್​ಟಿ ಮೀಸಲಾತಿ ಕೊಡಿಸಲಿ. ಇಲ್ಲದಿದ್ದರೆ ರಾಜೀನಾಮೆ ನೀಡಲಿ ಎಂದರು.

ಕಾಗಿನೆಲೆ ತಿಂಥಣಿ ಕನಕ ಗುರು ಪೀಠದ ಸಿದ್ದರಾಮನಂದ ಪುರಿ ಸ್ವಾಮೀಜಿ ಮಾತನಾಡಿ, ಹಾಲುಮತ ಉತ್ಸವ ಒಂದು ಸಾಂಸ್ಕೃತಿಕ ಉತ್ಸವವಾಗಿದೆ. ಕುರುಬ ಸಮಾಜದ ಕಂಬಳಿ, ಭಂಡಾರ ಜಾತಿಯ ಪ್ರತೀಕವಲ್ಲ. ಮುಂದಿನ ತಲೆಮಾರಿಗೆ ನಮ್ಮ ಸಂಸ್ಕೃತಿ ಪರಿಚಯಿಸುವ ಉದ್ದೇಶದಿಂದ ಹಾಲುಮತ ಉತ್ಸವ ಆಚರಿಸಲಾಗುತ್ತಿದೆ ಎಂದರು.

ABOUT THE AUTHOR

...view details