ರಾಯಚೂರು:ಮನೆಯಲ್ಲೇ ಅಕ್ರಮವಾಗಿ ಬಿ.ಕಾಂ ಪರೀಕ್ಷೆ ಬರೆದ ಪ್ರಕರಣಕ್ಕೆ ಸಂಬಂಧಿಸಿದಂತೆ ಗುಲ್ಬರ್ಗಾ ವಿಶ್ವವಿದ್ಯಾಲಯದ ವಿ.ಸಿ. ನಿರಂಜನ ನೇತೃತ್ವದ ತಂಡ ವಿವೇಕಾನಂದ ಕಾಲೇಜಿಗೆ ಭೆಟಿ ನೀಡಿ ಪರಿಶೀಲಿಸಿದರು.
ಮನೆಯಲ್ಲೇ ಬಿ.ಕಾಂ ಪರೀಕ್ಷೆ ಬರೆದ ಪ್ರಕರಣ... ಉಪಕುಲಪತಿಗಳಿಂದ ಪರಿಶೀಲನೆ - kannada news
ಅಕ್ರಮವಾಗಿ ಮನೆಯಲ್ಲಿ ಪರೀಕ್ಷೆ ಬರೆದ ಪ್ರಕರಣಕ್ಕೆ ಸಂಬಂಧಿಸಿದಂತೆ ಗುಲ್ಬರ್ಗಾ ವಿಶ್ವವಿದ್ಯಾಲಯದ ಉಪ ಕುಲಪತಿಗಳು ಇಂದು ಪರಿಶೀಲನೆ ನಡೆಸಿದರು.
ಅಕ್ರಮವಾಗಿ ಬಾಡಿಗೆ ಮನೆಯಲ್ಲಿ ಪರೀಕ್ಷೆ ಬರೆದ ಕುರಿತು ವಿವೇಕಾನಂದ ಕಾಲೇಜಿಗೆ ಭೆಟಿ ನೀಡಿದ ತಂಡ ಅಗತ್ಯ ಮಾಹಿತಿ ಪಡೆದು ಪರಿಶೀಲನೆ ನಡೆಸಿದರು. ನಿನ್ನೆ ಸದರಿ ಪರೀಕ್ಷಾ ಕೇಂದ್ರ ರದ್ದು ಪಡಿಸುತ್ತೇವೆಂದು ಹೇಳಲಾಗಿತ್ತು, ಆದ್ರೆ ವಿವೇಕಾನಂದ ಕಾಲೇಜಿನಲ್ಲಿ ಪರೀಕ್ಷೆಗೆ ಅವಕಾಶ ನೀಡಲಾಗಿತ್ತು.
ನಂತರ ಉಪ ಕುಲಪತಿ ನಿರಂಜನ ಮಾಧ್ಯಮದವರೊಂದಿಗೆ ಮಾತನಾಡಿ, ಕ್ಲಸ್ಟರ್ ಪದ್ದತಿಯಲ್ಲಿ ನಾವು ಎರಡನೇ ಸೆಮಿಸ್ಟರ್ ಮಾಡ್ತಿದ್ದೀವಿ. ಬೇರೆ ಬೇರೆ ಕಾಲೇಜಿನ ವಿದ್ಯಾರ್ಥಿಗಳನ್ನ ಮಿಕ್ಸ್ ಮಾಡಿ ಪರೀಕ್ಷೆ ಬರೆಯುವ ವಿಧಾನ ಇದಾಗಿದೆ. ಈ ಘಟನೆ ವಿ.ವಿ.ಗಂಭೀರವಾಗಿ ಪರಿಗಣಿಸಿದ್ದು ತನಿಖೆ ನಡೆಸಿ ಕ್ರಮ ಕೈಗೊಳ್ಳಲಿದೆ ಎಂದರು.