ಕರ್ನಾಟಕ

karnataka

ETV Bharat / state

ರಾಜ್ಯದಲ್ಲಿ ಲಾಕ್​ಡೌನ್​ ಇದ್ರೂ ಪ್ರತಿಭಟನೆ: 60 ಮಂದಿ ವಿರುದ್ಧ ಕೇಸ್ ದಾಖಲು - ರಾಯಚೂರು ಲಾಕ್​ಡೌನ್​

ರಾಯಚೂರಿನ ಜಿಲ್ಲಾಧಿಕಾರಿ ಕಚೇರಿ ಎದುರು ಅನಿರ್ಧಿಷ್ಟಾವಧಿ ಧರಣಿ ನಡೆಸುತ್ತಿದ್ದ 60 ಜನರನ್ನು ನಿಯಮ ಉಲ್ಲಂಘನೆ ಅಡಿ ಪೊಲೀಸರು ಬಂಧಿಸಿದ್ದಾರೆ. ಜನವರಿ 26ರಿಂದ ಸಂವಿಧಾನ ಹಕ್ಕುಗಳ ನಾಗರಿಕ ರಕ್ಷಣಾ ವೇದಿಕೆಯಿಂದ ಧರಣಿ ನಡೆಸಲಾಗುತ್ತಿತ್ತು.

Case filed against 60 protesters due to lock down
60 ಪ್ರತಿಭಟನಾಕಾರರ ವಿರುದ್ಧ ಕೇಸ್ ದಾಖಲು

By

Published : Mar 24, 2020, 8:29 PM IST

ರಾಯಚೂರು: ಕೊರೊನಾ ಸೋಂಕು ತಡೆಗೆ ರಾಜ್ಯ ಸರ್ಕಾರ ರಾಜ್ಯವನ್ನು ಸಂಪೂರ್ಣ ಲಾಕ್​ಡೌನ್​ ಮಾಡಿದೆ.ಈ ಮಧ್ಯೆ ಎನ್​ಆರ್​ಸಿ, ಎನ್​ಆರ್​ಪಿ ತಿದ್ದುಪಡಿ ವಿರೋಧಿಸಿ ಧರಣಿ ನಡೆಸುತ್ತಿದ್ದ 60 ಪ್ರತಿಭಟನಾಕಾರರನ್ನು ಪೊಲೀಸರು ಬಂಧಿಸಿದ್ದಾರೆ.

60 ಪ್ರತಿಭಟನಾಕಾರರ ವಿರುದ್ಧ ಕೇಸ್ ದಾಖಲು

ನಗರದ ಜಿಲ್ಲಾಧಿಕಾರಿ ಕಚೇರಿ ಎದುರು ಜನವರಿ 26ರಿಂದ ಅನಿರ್ಧಿಷ್ಟಾವಧಿ ಧರಿಣಿ ನಡೆಸುತ್ತಿದ್ದ ಸಂವಿಧಾನ ಹಕ್ಕುಗಳ ನಾಗರಿಕ ರಕ್ಷಣಾ ವೇದಿಕೆ ಕಾರ್ಯಕರ್ತರನ್ನು ಬಂಧಿಸಿಲಾಗಿದೆ. ಲಾಕ್​ಡೌನ್​ ಆದೇಶ ಉಲ್ಲಂಘನೆ ಮತ್ತು ಸಾರ್ವಜನಿಕ ಶಾಂತಿಗೆ ಭಂಗ ಆರೋಪದಡಿ ಬಜಾರ್​ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ.

ನಗರದ ಪ್ರಮುಖ ರಸ್ತೆಗಳಲ್ಲಿ ಸಾರ್ವಜನಿಕರ ಸಂಚಾರವನ್ನು ಸಂಪೂರ್ಣ ನಿಷೇಧಿಸಲಾಗಿದೆ. ಕೆಲವು ಪ್ರಮುಖ ರಸ್ತೆಗಳಲ್ಲಿ ಬ್ಯಾರಿಕೇಡ್ ಹಾಕಲಾಗಿದೆ. ಉಸ್ಮಾನಿಯಾ ಮಾರುಕಟ್ಟೆಯಲ್ಲಿ ಬೆಳಿಗ್ಗೆಯಿಂದ ನಡೆಯುತ್ತಿದ್ದ ವ್ಯಾಪಾರಕ್ಕೆ ಬ್ರೇಕ್ ಹಾಕಲಾಗಿದೆ. ನಿಯಮ ಮೀರಿ ರಸ್ತೆಗೆ ಇಳಿದವರನ್ನು ಪೊಲೀಸರು ತರಾಟೆ ತೆಗೆದುಕೊಳ್ಳುತ್ತಿದ್ದಾರೆ. ಕೆಲವು ಕಡೆ ಲಾಠಿ ಏಟು ನೀಡಿದ್ದಾರೆ.

ಔಷಧಿ ಅಂಗಡಿಗಳಲ್ಲಿ ಗುಂಪಾಗಿ ನಿಲ್ಲದೆ ಸರತಿಯಲ್ಲಿ ನಿಂತು, ಔಷಧಿ ಖರೀದಿಸುವಂತೆ ಸೂಚಿಸಲಾಗಿದೆ.

ABOUT THE AUTHOR

...view details