ರಾಯಚೂರು: ನೀರಿನ ಟ್ಯಾಂಕ್ಗೆ ಕಾರು ಡಿಕ್ಕಿ ಹೊಡೆದ ಪರಿಣಾಮ ಇಬ್ಬರು ಸ್ಥಳದಲ್ಲೇ ಮೃತಪಟ್ಟಿದ್ದು, ಮತ್ತಿಬ್ಬರು ಗಂಭೀರವಾಗಿ ಗಾಯಗೊಂಡಿರುವ ಘಟನೆ ಜಿಲ್ಲೆಯ ಸಿರವಾರ ತಾಲೂಕಿನ ಹರವಿ ಗ್ರಾಮದಲ್ಲಿ ನಡೆದಿದೆ.
ನೀರಿನ ಟ್ಯಾಂಕ್ಗೆ ಕಾರು ಡಿಕ್ಕಿ: ಇಬ್ಬರು ಸ್ಥಳದಲ್ಲೇ ಸಾವು - ನೀರಿನ ಟ್ಯಾಂಕ್ಗೆ ಕಾರ್ ಡಿಕ್ಕಿ
ಚಾಲಕನ ನಿಯಂತ್ರಣ ತಪ್ಪಿ ನೀರಿನ ಟ್ಯಾಂಕ್ಗೆ ಕಾರು ಡಿಕ್ಕಿ ಹೊಡಿದಿದ್ದು, ಡಿಕ್ಕಿಯ ರಭಸಕ್ಕೆ ನೀರಿನ ಟ್ಯಾಂಕ್ ಒಡೆದು ಹೋಗಿದೆ. ಕಾರ್ ನುಜ್ಜುಗುಜ್ಜಾಗಿದೆ. ಈ ಸಂಬಂಧ ಸಿರವಾರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.
ಕಾರ್ ಡಿಕ್ಕಿ
ಹನುಮೇಶ ತಿಮ್ಮಯ್ಯ(21), ರಾಜ ವೆಂಕಟೇಶ್ (22) ಮೃತಪಟ್ಟವರು. ಉಳಿದಿಬ್ಬರನ್ನು ರಾಯಚೂರಿನ ರಿಮ್ಸ್ ಆಸ್ಪತ್ರೆಗೆ ರವಾನಿಸಲಾಗಿದೆ.
ಸಿರವಾರ ತಾಲೂಕಿನ ಗುಡದಿನ್ನಿ ಚೌದ್ರಿ ಕ್ಯಾಂಪ್ನಿಂದ ಐವರು ಮಾನ್ವಿಗೆ ಕಾರ್ನಲ್ಲಿ ತೆರಳಿದ್ದರು. ಈ ವೇಳೆ ಚಾಲಕನ ನಿಯಂತ್ರಣ ತಪ್ಪಿ ನೀರಿನ ಟ್ಯಾಂಕ್ಗೆ ಡಿಕ್ಕಿ ಹೊಡಿದಿದ್ದು, ಡಿಕ್ಕಿಯ ರಭಸಕ್ಕೆ ನೀರಿನ ಟ್ಯಾಂಕ್ ಒಡೆದು ಹೋಗಿದೆ. ಕಾರ್ ನುಜ್ಜುಗುಜ್ಜಾಗಿದೆ. ಈ ಸಂಬಂಧ ಸಿರವಾರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.