ಕರ್ನಾಟಕ

karnataka

ETV Bharat / state

ಚಲಿಸುತ್ತಿದ್ದ ಕಾರ್​ಗೆ ಹಿಂಬದಿ ಬರುತ್ತಿದ್ದ ಕಾರು ಡಿಕ್ಕಿ: ಓರ್ವ ಸಾವು - ಕಾರು ಡಿಕ್ಕಿ

ಚಲಿಸುತ್ತಿದ್ದ ಕಾರ್​ಗೆ ಹಿಂಬದಿ ಬರುತ್ತಿದ್ದ ಕಾರು ಡಿಕ್ಕಿ ಹೊಡೆದ ಪರಿಣಾಮ ಓರ್ವ ವ್ಯಕ್ತಿ ಸಾವನ್ನಪ್ಪಿರುವ ಘಟನೆ ರಾಯಚೂರು ಜಿಲ್ಲೆಯ ಮಸ್ಕಿ ಪಟ್ಟಣದ ಸರ್ಕಾರಿ‌‌ ಸಾರಿಗೆ ಡಿಪೋದ ಬಳಿ ನಡೆದಿದೆ.

Car collision in Raichur
ಚಲಿಸುತ್ತಿದ್ದ ಕಾರ್​ಗೆ ಹಿಂಬದಿ ಬರುತ್ತಿದ್ದ ಕಾರು ಡಿಕ್ಕಿ: ವ್ಯಕ್ತಿ ಸಾವು

By

Published : Oct 13, 2020, 11:59 AM IST

ರಾಯಚೂರು: ಮುಂದೆ ಚಲಿಸುತ್ತಿದ್ದ ಕಾರ್​ಗೆ ಹಿಂಬದಿ ಬರುತ್ತಿದ್ದ ಕಾರು ಡಿಕ್ಕಿ ಹೊಡೆದ ಪರಿಣಾಮ ಓರ್ವ ವ್ಯಕ್ತಿ ಸಾವನ್ನಪ್ಪಿರುವ ಘಟನೆ ರಾಯಚೂರಿನಲ್ಲಿ ನಡೆದಿದೆ.

ಜಿಲ್ಲೆಯ ಮಸ್ಕಿ ಪಟ್ಟಣದ ಸರ್ಕಾರಿ‌‌ ಸಾರಿಗೆ ಡಿಪೋದ ಬಳಿ ಈ ದುರ್ಘಟನೆ ಸಂಭವಿಸಿದೆ. ಸದಾನಂದಪ್ಪ(55) ಮೃತ ವ್ಯಕ್ತಿ. ಲಿಂಗಸೂಗೂರು ಮೂಲದ ವ್ಯಕ್ತಿ ಬೆಂಗಳೂರಿನಲ್ಲಿ ಕೆಲಸ ಮಾಡುತ್ತಿದ್ದ. ತಾಯಿ ಮೃತಪಟ್ಟಿದ್ದ ಹಿನ್ನೆಲೆಯಲ್ಲಿ ಅಂತ್ಯ ಸಂಸ್ಕಾರಕ್ಕಾಗಿ ಲಿಂಗಸುಗೂರಿಗೆ ಮರಳಿದ್ದ. ತಾಯಿ ಅಂತ್ಯ ಸಂಸ್ಕಾರ ಹಾಗೂ ಅಂತ್ಯ ಸಂಸ್ಕಾರ ಬಳಿಕ ಮಾಡುವ ಕಾರ್ಯಕ್ರಮಗಳನ್ನ ಮುಗಿಸಿ ಇಂದು ಕಾರಿನಲ್ಲಿ ವಾಪಸ್ ತೆರಳುತ್ತಿದ್ದರು.

ಈ ವೇಳೆ ಹಿಂಬದಿಯಲ್ಲಿ ಬರುತ್ತಿದ್ದ ಕಾರು ಚಾಲನೆ ಮಾಡುವ ವ್ಯಕ್ತಿಗೆ ಮೂರ್ಚೆ ರೋಗ ಬಂದು ಕಾರು ನಿಯಂತ್ರಣ ತಪ್ಪಿ ಮುಂಬದಿಯ ಕಾರಿಗೆ ಡಿಕ್ಕಿ ಹೊಡೆದಿದ್ದಾನೆ. ಕೂಡಲೇ ಮುಂಬದಿಯ ಕಾರಿನವರು ಗಮನಿಸಿ ಆ್ಯಂಬ್ಯುಲೆನ್ಸ್ ಮೂಲಕ ಆಸ್ಪತ್ರೆಗೆ ರವಾನಿಸುವಾಗ ಮಾರ್ಗ ಮಧ್ಯೆ ವ್ಯಕ್ತಿ ಮೃತಪಟ್ಟಿದ್ದಾನೆ ಎಂದು ತಿಳಿದು ಬಂದಿದೆ.

ಈ ಕುರಿತು ಮಸ್ಕಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ABOUT THE AUTHOR

...view details