ಕರ್ನಾಟಕ

karnataka

ETV Bharat / state

ಗ್ರಾ.ಪಂ ಚುನಾವಣೆ; ಸತತ 5ನೇ ಬಾರಿ ಗೆದ್ದು ಬೀಗಿದ ಅಭ್ಯರ್ಥಿ - ರಾಯಚೂರು ಚುನಾವಣೆ ಸುದ್ದಿ

ಗ್ರಾಮ ಪಂಚಾಯತ್​ ಚುನಾವಣೆಯಲ್ಲಿ ಸತತ 5 ಬಾರಿ ಗೆಲುವು ಸಾಧಿಸುವ ಮೂಲಕ ರಾಯಚೂರಿನ ಅಭ್ಯರ್ಥಿಯೊಬ್ಬರು ಲಕ್​ ತಮ್ಮದಾಗಿಸಿಕೊಂಡಿದ್ದಾರೆ.

Grama panchayat election
ಗೋಪಿನಿಡಿ ಕೃಷ್ಣ

By

Published : Dec 30, 2020, 5:59 PM IST

ರಾಯಚೂರು: ಜಿಲ್ಲೆಯಲ್ಲಿ ನಡೆದ ಗ್ರಾಮ ಪಂಚಾಯಿತಿ ಚುನಾವಣೆಯಲ್ಲಿ ಓರ್ವ ಅಭ್ಯರ್ಥಿ ಸತತವಾಗಿ 5 ಬಾರಿ ಜಯ ಸಾಧಿಸಿದ್ದಾರೆ.

ಜಿಲ್ಲೆಯ ಸಿಂಧನೂರು ತಾಲೂಕಿನ ಗಾಂಧಿನಗರ ಪಂಚಾಯಿತಿ ವ್ಯಾಪ್ತಿಗೆ ಬರುವ ವಾರ್ಡ್ 4 ರಿಂದ ಸ್ಪರ್ಧಿಸಿದ ಗೋಪಿನಿಡಿ ಕೃಷ್ಣ ಎನ್ನುವವರು ಸತತವಾಗಿ ಗೆಲುವು ಸಾಧಿಸಿದ ಅಭ್ಯರ್ಥಿಯಾಗಿದ್ದಾರೆ. 4 ಬಾರಿ ಜಯಭೇರಿ ಬಾರಿಸಿದ್ದ ಗೋಪಿನಿಡಿ ಕೃಷ್ಣ ಈ ಬಾರಿಯೂ ಸ್ಪರ್ಧಿಸಿ ಗೆದ್ದಿದ್ದಾರೆ.

ಓದಿ:ಮತ ಎಣಿಕೆ ಕೇಂದ್ರಕ್ಕೆ ಬಂದವರು ಮದುವೆ ಮನೆಗೆ ನುಗ್ಗಿ ಅವಾಂತರ; ಕುಟುಂಬಸ್ಥರು ಹೈರಾಣ

ನಾಲ್ಕು ಬಾರಿ ಜಯಗಳಿಸಿದ ಅವಧಿಯಲ್ಲಿ ಎರಡು ಬಾರಿ ಗ್ರಾಮ ಪಂಚಾಯಿತಿ ಅಧ್ಯಕ್ಷರಾಗಿ ಕಾರ್ಯ ನಿರ್ವಹಿಸಿದ್ದರು. ಈ‌ ಬಾರಿ ಗ್ರಾ.ಪಂ. ಚುನಾವಣೆಯಲ್ಲಿ ಸ್ಪರ್ಧಿಸಿ ಗೆಲುವು ಸಾಧಿಸುವ ಮೂಲಕ ಸತತ 5 ಬಾರಿ ಗೆಲುವು ಸಾಧಿಸಿದ ಅಭ್ಯರ್ಥಿಯಾಗಿದ್ದಾರೆ.

ABOUT THE AUTHOR

...view details