ಕರ್ನಾಟಕ

karnataka

By

Published : Apr 10, 2021, 11:36 AM IST

ETV Bharat / state

ಮಸ್ಕಿಯಲ್ಲಿ ಬಿವೈ ವಿಜಯೇಂದ್ರ ಭರ್ಜರಿ ಪ್ರಚಾರ: ಬೇಡಜಂಗಮ ಸಮುದಾಯ ಕಡೆಗಣಿಸಿದ ಆರೋಪ

ಮಸ್ಕಿ ವಿಧಾನಸಭಾ ಉಪ ಚುನಾವಣೆ ಹಿನ್ನೆಲೆಯಲ್ಲಿ ಬಿಜೆಪಿ ಉಪಾಧ್ಯಕ್ಷ ಬಿವೈ ವಿಜಯೇಂದ್ರ ಅವರು ಪ್ರಚಾರ ಕಾರ್ಯ ನಡೆಸುತ್ತಿದ್ದಾರೆ. ಅದರಲ್ಲೂ ಜಾತಿ ಆಧಾರಿತ ಸಭೆ ನಡೆಸುತ್ತಿದ್ದು, ಬೇಡಜಂಗಮ ( ಜಂಗಮ) ಸಮುದಾಯವನ್ನು ಕಡೆಗಣಿಸಿದ್ದಾರೆ ಎಂಬ ಆರೋಪ ಕೇಳಿ ಬಂದಿದೆ.

ಮಸ್ಕಿಯಲ್ಲಿ ಬಿವೈ ವಿಜಯೇಂದ್ರ ಭರ್ಜರಿ ಪ್ರಚಾರ
BY Vijayendra neglected beda jangam community in maski by -election campaign

ರಾಯಚೂರು: ಬಿಜೆಪಿ ರಾಜ್ಯ ಉಪಾಧ್ಯಕ್ಷ ಬಿ.ವೈ.ವಿಜಯೇಂದ್ರ ಅವರು ಕಳೆದೊಂದು ವಾರದಿಂದ ಜಾತಿ ಆಧಾರಿತ ಸರಣಿ ಸಭೆಗಳನ್ನು ನಡೆಸುತ್ತಿದ್ದು, ಬೇಡಜಂಗಮ ( ಜಂಗಮ)ರನ್ನು ಕಡೆಗಣಿಸಿದ್ದು, ಇದು ವ್ಯಾಪಕ ಚರ್ಚೆಗೆ ದಾರಿ ಮಾಡಿಕೊಟ್ಟಿದೆ.

ಜಾರಿ ಆಧಾರಿತ ಸಭೆ ನಡೆಸುತ್ತಿರುವ ಬಿಜೆಪಿ ಉಪಾಧ್ಯಕ್ಷ ಬಿ ವೈ ವಿಜಯೇಂದ್ರ

ಮಸ್ಕಿ ವಿಧಾನಸಭಾ ಉಪ ಚುನಾವಣೆ ಪ್ರಚಾರ ಕಾರ್ಯ ಬಿರುಸಿನಿಂದ ನಡೆದಿದ್ದು, ಈ ಮಧ್ಯೆ ಕ್ಷೇತ್ರದ ಹೊರಗಡೆ ಲಿಂಗಸುಗೂರು ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಮುದಗಲ್ ಬಿ.ವೈ.ವಿಜಯೇಂದ್ರ ಅವರು ರಾಜಕೀಯ ಚಟುವಟಿಕೆ ಕೇಂದ್ರ ಸ್ಥಳವಾಗಿ ಗುರುತಿಸಿಕೊಂಡಿದೆ. ಜಿಲ್ಲಾದ್ಯಂತ ಚುನಾವಣಾ ನೀತಿ ಸಂಹಿತೆ ಜಾರಿಯಲ್ಲಿದ್ದು, ಆದರೆ, ಮುದಗಲ್​​ನಲ್ಲಿ ಬ್ಯಾನರ್ ಹಾಕಿಕೊಂಡು, ಕೋವಿಡ್ ನಿಯಮ ಉಲ್ಲಂಘಿಸಿ ಸರಣಿ ಸಭೆಗಳು ನಡೆಯುತ್ತಿದ್ದಾರೆ. ಇದನ್ನು ಕಂಡರೂ ಕಾಣದಂತೆ ಅಧಿಕಾರಿ ವರ್ಗ ಸಮ್ಮನಿದೆ ಎಂಬ ಆರೋಪ ಕೇಳಿ ಬಂದಿದೆ.

ಮುದಗಲ್​​ನಲ್ಲಿ ಲಿಂಗಾಯುತ, ರೆಡ್ಡಿ, ಬಣಜಿಗ, ಗೊಲ್ಲ, ಮಡಿವಾಳ, ಪಂಚಮಸಾಲಿ ಸೇರಿದಂತೆ ವಿವಿಧ ಜಾತಿ ಜನಾಂಗದ ಸಭೆಗಳನ್ನು ನಡೆಸಲಾಗುತ್ತಿದೆ. ಈಗಾಗಲೇ ಕೇಂದ್ರದ ಮೀಸಲಾತಿ ಆಧಾರಿತ ಪಟ್ಟಿಯಲ್ಲಿ ಬೇಡಜಂಗಮ ಎಂದು ಗುರುತಿಸಿಕೊಂಡು ರಾಜ್ಯದಲ್ಲಿ ಜಂಗಮ ಸ್ವಾಮಿ ಎಂದು ಕರೆಯಲ್ಪಡುವ ಜಂಗಮರನ್ನು ಗುರುತಿಸಿಲ್ಲ ಎಂಬ ದೂರುಗಳು ಕೂಡ ಕೇಳಿ ಬಂದಿವೆ.

ಮಸ್ಕಿ, ಬಸವಕಲ್ಯಾಣ ಉಪ ಚುನಾವಣೆಗಳಲ್ಲಿ ಬೇಡಜಂಗಮ (ಜಂಗಮ)ರಿಗೆ ಸಾಮಾಜಿಕ ನ್ಯಾಯ ನೀಡಲು ರಾಜಕೀಯ ಪಕ್ಷಗಳು ಮುಂದಾಗದೇ ಹೋದಲ್ಲಿ ಚುನಾವಣೆ ಬಹಿಷ್ಕರಿಸುವ ಕುರಿತು ಚಿಂತನೆ ನಡೆಸಿದ್ದೇವೆ ಎಂದು ಅಖಿಲ ಭಾರತ ಬೇಡಜಂಗಮ ಒಕ್ಕೂಟದ ಸದಸ್ಯ ವೀರೇಶ್​​ ಕೂಡಲಗಿಮಠ ಎಚ್ಚರಿಕೆ ನೀಡಿದ್ದಾರೆ.

ABOUT THE AUTHOR

...view details