ರಾಯಚೂರು: ಮಂತ್ರಾಲಯ ಶ್ರೀರಾಘವೇಂದ್ರ ಸ್ವಾಮಿ ಮಠದ ರಾಯರ ಮೂಲ ಬೃಂದಾವನಕ್ಕೆ ಉದ್ಯಮಿಯೊಬ್ಬರು ನವರತ್ನಖಚಿತ ಕವಚವನ್ನು ಕಾಣಿಕೆ ನೀಡಿದ್ದಾರೆ.
ಮಂತ್ರಾಲಯಕ್ಕೆ ನವರತ್ನ ಖಚಿತ ಚಿನ್ನದ ಕವಚ ಕಾಣಿಕೆ ನೀಡಿದ ಉದ್ಯಮಿ - ಮಂತ್ರಾಲಯ ಶ್ರೀರಾಘವೇಂದ್ರ ಸ್ವಾಮಿ ಮಠ
ಉದ್ಯಮಿಯೊಬ್ಬರು ಮಂತ್ರಾಲಯ ಶ್ರೀರಾಘವೇಂದ್ರ ಸ್ವಾಮಿ ಮಠಕ್ಕೆ ನವರತ್ನ ಖಚಿತ ಕವಚ ಕಾಣಿಕೆ ನೀಡಿದ್ದಾರೆ.
ಹೈದರಾಬಾದ್‌ನ ಉದ್ಯಮಿ ಎ.ವೆಂಕಟ್ ರೆಡ್ಡಿ, ಲಕ್ಷ್ಮಿ ಕುಟುಂಬದವರು ಶ್ರೀರಾಘವೇಂದ್ರ ಸ್ವಾಮಿಗಳ ಮೂಲ ಬೃಂದಾವನಕ್ಕೆ ನವರತ್ನದಿಂದ ತಯಾರಿಸಿದ 1.5 ಕೋಟಿ ರೂಪಾಯಿ ಬೆಲೆಬಾಳುವ ಕವಚವನ್ನು ಸಮರ್ಪಿಸಿದ್ದಾರೆ. ಮಠದ ಪೀಠಾಧಿಪತಿ ಶ್ರೀಸುಬುಧೇಂದ್ರ ತೀರ್ಥರು ಕಾಣಿಕೆಯನ್ನ ಶ್ರೀಮಠದ ಸಂಪ್ರದಾಯದಂತೆ ಪಡೆದುಕೊಂಡು, ಪ್ರಾಂಗಣದಲ್ಲಿ ವ್ಯಾದದೊಂದಿಗೆ ಪ್ರದಕ್ಷಿಣೆ ಹಾಕಿ, ಮೂಲ ಬೃಂದಾವನಕ್ಕೆ ಕವಚವನ್ನು ಸಮರ್ಪಿಸಿ ವಿಶೇಷ ಪೂಜೆ ನೇರವೇರಿಸಿದರು. ಬಳಿಕ ಕಾಣಿಕೆ ನೀಡಿದ ಉದ್ಯಮಿಯ ಕುಟುಂಬಕ್ಕೆ ಆಶೀರ್ವದಿಸಿ, ಸನ್ಮಾನಿಸಿದರು.
ಇದನ್ನೂ ಓದಿ:ತಿರುಮಲ ದೇವಸ್ಥಾನಕ್ಕೆ 1 ಕೋಟಿ ರೂಪಾಯಿ ದೇಣಿಗೆ ಅರ್ಪಿಸಿದ ಮುಸ್ಲಿಂ ದಂಪತಿ